25 ರಂದು ಹೈಕ ವಾಣಿಜ್ಯ-ಕೈಗಾರಿಕಾ ಸಂಸ್ಥೆ ಚುನಾವಣೆ
Team Udayavani, Mar 6, 2018, 3:47 PM IST
ಕಲಬುರಗಿ: ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಎಚ್‌ಕೆಸಿಸಿಐ) ಸಂಸ್ಥೆಗೆ 2018-20ನೇ ಸಾಲಿಗಾಗಿ ಆಡಳಿತ ಮಂಡಳಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 25ರಂದು ಮತದಾನ ನಡೆಯಲಿದ್ದು, ಮಾರ್ಚ್ 7ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ.
ಹೈದ್ರಾಬಾದ್ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ವಾಣಿಜ್ಯೋದ್ಯಮಿಗಳನ್ನು ಒಳಗೊಂಡ ಸಂಸ್ಥೆ ಆಡಳಿತ ಮಂಡಳಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಒಟ್ಟು 2,934 ಸದಸ್ಯರನ್ನು ಹೊಂದಿರುವ ಎಚ್‌ಕೆಸಿಸಿಐ ಸಂಸ್ಥೆ ಆಡಳಿತ ಮಂಡಳಿಗೆ ಚುನಾಯಿತರಾಗಲು ಸದಸ್ಯರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.
ಅಧ್ಯಕ್ಷ, ಗೌರವ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತುರುಸಿನ ಸ್ಪರ್ಧೆ ಕಂಡು ಬರುತ್ತಿದೆ. ಹಾಲಿ ಅಧ್ಯಕ್ಷ ಸೋಮಶೇಖರ ಟೆಂಗಳಿ ಎರಡನೇ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕೆ ತಮ್ಮದೇ ಪ್ಯಾನಲ್ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಟೆಂಗಳಿ ಪ್ಯಾನಲ್ ಬಹುತೇಕ ಅಂತಿಮಗೊಂಡಿದ್ದು, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಈಗ ಖಜಾಂಚಿಯಾಗಿರುವ ಮಂಜುನಾಥ ಜೇವರ್ಗಿ,
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರವಿ ಸರಸಂಬಿ, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಕಾಂತ ಮೈಲಾಪುರ ಸ್ಪರ್ಧಿಸುತ್ತಿದ್ದಾರೆ. ಸಹ ಖಜಾಂಚಿ ಹಾಗೂ ಸಹ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳು ಯಾರು ಎಂಬುದು ಅಂತಿಮಗೊಂಡಿಲ್ಲ.
ಬಸವರಾಜ ಹಡಗಿಲ್ ಅವರು ಪ್ಯಾನಲ್ ರಚಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ತಳೆದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇನ್ನೆರಡು ದಿನಗಳಲ್ಲಿ ಚುನಾವಣಾ ಕಣ ತಯಾರಾಗಲಿದೆ.
ಟೆಂಗಳಿ ಪ್ಯಾನಲ್‌ನಿಂದ ಆಡಳಿತ ಮಂಡಳಿಯ 15 ಸದಸ್ಯ ಸ್ಥಾನಗಳಲ್ಲಿ ರಾಮಚಂದ್ರ ಕೋಸಗಿ, ಗುರುರಾಜ ದೇಸಾಯಿ, ಉತ್ತಮ ಬಜಾಜ್, ಪ್ರಭು ಸಿರಗುಪ್ಪಿ, ವಿಕ್ರಂ ವರ್ಮಾ, ಸಂತೋಷ ಹಾದಿಮನಿ, ಆರ್.ಪಿ. ರಾಮುಲುರೆಡ್ಡಿ, ರವಿಚಂದ್ರ ಪಾಟೀಲ್, ಮಂಜು ಕಾಳೆ, ರಾಹುಲ್ ಬಿಲಗುಂದಿ, ಪಂಕಜ್ ರಘೋಜಿ, ಮಹ್ಮದ್ ಬಾಕರ್ ಅಳಿ ಕಾರಿಗಾರ, ಜಗದೀಶ ಆರ್.ಕೆ., ಸುಭಾಷ ಮಂಗಾಣೆ, ಸಂಗಮೇಶ ಕಲ್ಯಾಣಿ ಹಾಗೂ ಗ್ರಾಮೀಣ ವಿಭಾಗದ ಮೂರು ಸ್ಥಾನಗಳಿಗೆ ವೀರೇಂದ್ರ ಭಾಸರೆಡ್ಡಿ, ವಿಜಯಕುಮಾರ ಪಾಟೀಲ್ ಹಾಗೂ ಶಿವು ಇಂಗಿನಶೆಟ್ಟಿ ಸ್ಪರ್ಧಿಸಲಿದ್ದಾರೆ.
ಹಾಲಿ ಅಧ್ಯಕ್ಷ ಸೋಮಶೇಖರ ಟೆಂಗಳಿ ಕಳೆದೆರಡು ವರ್ಷಗಳ ಕಾಲ ಅಭಿವೃದ್ಧಿ ಮಾಡಿದ ಕಾರ್ಯ ಮುಂದಿಟ್ಟುಕೊಂಡು ಮತದಾರರ ಬಳಿ ತೆರಳಲು ನಿರ್ಧರಿಸಿದ್ದಾರೆ. ಪ್ರಸ್ತುತ ಎಚ್ ಕೆಸಿಸಿಐಗೆ ಸದಸ್ಯರನ್ನು ಹೆಚ್ಚಳ ಮಾಡುವ ಹಾಗೂ ನಂದೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಂಸ್ಥೆಗೆ ಸೇರಿರುವ 3 ಎಕರೆ ಭೂಮಿಯಲ್ಲಿ 28 ಕೋಟಿ ರೂ. ವೆಚ್ಚದ ಬೃಹತ್ ಕೈಗಾರಿಕಾ ತರಬೇತಿ ಹಾಗೂ ವಸ್ತುಪ್ರದರ್ಶನ ಕೇಂದ್ರ ತೆರೆಯಲು ನೀಲನಕ್ಷೆ ರೂಪಿಸಿ ಕಾರ್ಯಪ್ರವೃತ್ತರಾಗಿರುವುದು ತಮಗೆ ಸ್ಫೂರ್ತಿ ಬಂದಿದೆ ಎನ್ನುತ್ತಾರೆ ಟೆಂಗಳಿ.
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.