ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ
ಒಣ ಗಾಳಿ ಹೆಚ್ಚಾಗಿರುವುದರಿಂದ ಉಷ್ಣಾಂಶದಲ್ಲಿ ಹೆಚ್ಚಾಗಿದೆ. ಆದರೆ, ಇದೇ ಬಿಸಿಲು ಮುಂದಿನ ದಿನಗಳಲ್ಲೂ ಇರುತ್ತದೆ
Team Udayavani, Mar 4, 2021, 5:25 PM IST
ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಉಷ್ಣಾಂಶ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ಪ್ರಮಾಣ ಹೆಚ್ಚಾಗಿದೆ. ಇದರಿಂದ ಮಾರ್ಚ್ ಆರಂಭದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಮುಂಬರುವ ಎರಡು ತಿಂಗಳು ಹೇಗಿರಲಿದೆಯೋ ಎಂಬ ಆತಂಕ ಶುರುವಾಗಿದೆ.
ರಾಯಚೂರು: ರಾಜ್ಯದಲ್ಲಿ ಶಿವರಾತ್ರಿ ಮುನ್ನವೇ ಬಿಸಿಲಿನ ಪ್ರತಾಪ ಹೆಚ್ಚಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 38.6 ಡಿಗ್ರಿ
ಸೆಲ್ಸಿಯಸ್ ಬಿಸಿಲು ದಾಖಲಾದರೆ, ರಾಯಚೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದೆರಡು ದಶಕಗಳ ಸರಾಸರಿ ಗಮನಿಸಿದರೆ ಈ ಬಾರಿ
2-3 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಾಗಿದೆ. ಗಾಳಿಯಲ್ಲಿ ತೇವಾಂಶ ಸಂಪೂರ್ಣ ಕಡಿಮೆ ಆಗಿರುವುದೇ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಾರಿ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಈ ಬಾರಿಯೂ 42ರಿಂದ 43 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಳೆದೊಂದು ವಾರದಿಂದ ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಈಗ 38 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದು, ಮಾಸಾಂತ್ಯಕ್ಕೆ 39-40 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎನ್ನಲಾಗುತ್ತಿದೆ. ವಿಜಯಪುರದಲ್ಲಿ 35.6, ಧಾರವಾಡದಲ್ಲಿ 34.5, ಬಳ್ಳಾರಿಯಲ್ಲಿ 37.8, ಉತ್ತರ
ಕನ್ನಡ ಜಿಲ್ಲೆಯಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಿಸಿಲಿನ ಬವಣೆಗೆ ಜನ ತತ್ತರಿಸಿದ್ದಾರೆ. ಮಾರ್ಚ್ ಆರಂಭದಲ್ಲೇ ಇಂಥ ಅನುಭವ ಆಗುತ್ತಿರುವುದು
ಅಚ್ಚರಿ ಮೂಡಿಸಿದೆ. ವಾತಾವರಣದಲ್ಲಿ ತೇವಾಂಶ ಕೊರತೆಯೇ ಈ ವೈಪರೀತ್ಯಕ್ಕೆ ಕಾರಣ ಎನ್ನುವುದು ತಜ್ಞರ ವಿವರಣೆ.
ಲಾಕ್‌ಡೌನ್‌ನಲ್ಲೇ ಕಳೆದ ಬೇಸಿಗೆ: ಕಳೆದ ವರ್ಷ ಜಿಲ್ಲೆಯ ಜನರಿಗೆ ಬಿಸಿಲಿನ ಪ್ರತಾಪ ಅಷ್ಟಾಗಿ ತಟ್ಟಿರಲಿಲ್ಲ. ಮಾ.21ಕ್ಕೆ ಲಾಕ್‌ಡೌನ್ ಜಾರಿಯಾದ ಕಾರಣ ಜನ
ಮನೆಯಿಂದ ಹೊರ ಬರಲೇ ಇಲ್ಲ. ಆರಂಭಿಕ ಮೂರು ತಿಂಗಳು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಬೇಸಿಗೆಯ ಪ್ರಮುಖ ಕಾಲ ಜನ ಮನೆಗಳಲ್ಲೇ
ಕಳೆದರು. ಹೀಗಾಗಿ ಈ ಬಾರಿ ಮತ್ತೆ ಬಿಸಿಲಿನ ಬವಣೆ ಎದುರಿಸುವುದು ಮಾತ್ರ ಉತ್ತರ ಕರ್ನಾಟಕ ಜಿಲ್ಲೆಯ ಜನರಿಗೆ ತಪ್ಪುವುದಿಲ್ಲ.
ತೇವಾಂಶ ಕೊರತೆ: ಕಳೆದ ವರ್ಷ ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಹಿಂದಿನ ವರ್ಷ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ
ಭೂಮಿಯಲ್ಲಿ ತೇವಾಂಶ ಹೆಚ್ಚಾಗಿತ್ತು. ಲಾಕ್ ಡೌನ್ ಕಾರಣಕ್ಕೆ ಬಹುತೇಕ ಕೈಗಾರಿಕೆಗಳು ಸ್ಥಗಿತಗೊಂಡಿದ್ದರೆ, ವಾಹನ ದಟ್ಟಣೆ ಸಂಪೂರ್ಣ ಕಡಿಮೆ ಆಗಿತ್ತು. ಆದರೆ, ಈ ವರ್ಷ ಮುಂಗಾರಿನಲ್ಲಿ ಮಳೆ ಪ್ರಮಾಣ ಚೆನ್ನಾಗಿ ಆದರೂ ಹಿಂಗಾರಿನಲ್ಲಿ ಮಳೆ ಕೊರತೆ ಕಂಡು ಬಂದಿದೆ. ಇದರಿಂದ ಭೂಮಿ ತೇವಾಂಶ ಪ್ರಮಾಣ
ಕಡಿಮೆಯಾಗಿದೆ. ಇದು ಕೂಡ ವಾತಾವರಣದ ಏರುಪೇರಿಗೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
ಪಾನೀಯಗಳ ದರ ಹೆಚ್ಚಳ
ಈ ಬಾರಿ ಬೆಲೆ ಏರಿಕೆ ಬಿಸಿ ಬೇಸಿಗೆಯನ್ನು ಬಿಟ್ಟಿಲ್ಲ. ಜನ ಬಿಸಿಲ ಧಗೆ ತಣಿಸಿಕೊಳ್ಳಲು ತಂಪು ಪಾನೀಯ, ಹಣ್ಣಿನ ಜ್ಯೂಸ್, ಎಳನೀರು, ಲಸ್ಸಿ, ಕಬ್ಬಿನ ಹಾಲು ಸೇರಿದಂತೆ ವಿವಿಧ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ಬಾರಿ ಎಲ್ಲ ಹಣ್ಣುಗಳ ದರವೂ ಹೆಚ್ಚಾದರೆ, ತಂಪು ಪಾನೀಯಗಳ ಬೆಲೆಯೂ ಹೆಚ್ಚಾಗಿದೆ. ನಿಂಬೆಹಣ್ಣಿನಿಂದ ಕಲ್ಲಂಗಡಿವರೆಗೂ ಎಲ್ಲ ಹಣ್ಣುಗಳ ದರ ಹೆಚ್ಚಾಗಿದೆ. ಕಲ್ಲಂಗಡಿ, ಕರಬೂಜ್ ರಸ್ತೆ ಪಕ್ಕದಲ್ಲೇ ಗುಡ್ಡೆ ಹಾಕಿ ಮಾರಲಾಗುತ್ತಿದೆ.
ರಾಜ್ಯದ ಎಲ್ಲ ಭಾಗದಲ್ಲಿ ಕಳೆದ ಕೆಲ ದಿನಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಳೆದ 20 ವರ್ಷಗಳಿಗೆ ಹೋಲಿಸಿದರೆ ಉಷ್ಣಾಂಶದಲ್ಲಿ 2-3
ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಒಣ ಗಾಳಿ ಹೆಚ್ಚಾಗಿರುವುದರಿಂದ ಉಷ್ಣಾಂಶದಲ್ಲಿ ಹೆಚ್ಚಾಗಿದೆ. ಆದರೆ, ಇದೇ ಬಿಸಿಲು ಮುಂದಿನ ದಿನಗಳಲ್ಲೂ ಇರುತ್ತದೆ ಎಂದು
ಹೇಳಲಾಗದು.
ಆರ್.ಎಚ್.ಪಾಟೀಲ್,
ಮುಖ್ಯಸ್ಥರು, ಹವಾಮಾನ ಶಾಸ್ತ್ರ ವಿಭಾಗ,
ಕೃಷಿ ವಿವಿ ಧಾರವಾಡ
ಬೇಸಿಗೆ ಬಂದರೆ ಮುಖ್ಯವಾಗಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಅದರಲ್ಲೂ ಚಿಕ್ಕ ಮಕ್ಕಳು ಈ ಸಮಸ್ಯೆಗೆ ಬಳಲುವುದು ಜಾಸ್ತಿ. ಈ ನಿಟ್ಟಿನಲ್ಲಿ
ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಒಆರ್ ಎಸ್ ಪ್ಯಾಕೆಟ್‌ಗಳನ್ನು ಸಂಗ್ರಹಿಸಲಾಗಿದೆ. ಅಂಗನವಾಡಿ ಸಹಾಯಕಿಯರಿಗೆ ಕೇಳಿ ಪಡೆಯಬಹುದು. ಸಾರ್ವಜನಿಕರು
ಕೂಡ ಬಿಸಿಲಲ್ಲಿ ಓಡಾಡುವುದು ಕಡಿಮೆ ಮಾಡಬೇಕು. ನೀರು, ತಂಪು ಪಾನೀಯಗಳ ಸೇವನೆ ಹೆಚ್ಚಾಗಿ ಮಾಡುವುದು ಸೂಕ್ತ.
ರಾಮಕೃಷ್ಣ, ಡಿಎಚ್‌ಒ, ರಾಯಚೂರು
ಕಳೆದ ವರ್ಷ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಬೇಸಿಗೆ ಕಳೆದಿದ್ದೆ ಗೊತ್ತಾಗಲಿಲ್ಲ. ಪ್ರತಿ ಬಾರಿ ಶಿವರಾತ್ರಿ ಬಳಿಕ ಬಿಸಿಲು ಹೆಚ್ಚಾಗುತ್ತಿತ್ತು. ಆದರೆ, ಈ
ಬಾರಿ ಬಿಸಿಲು ಬೇಗನೇ ಆರಂಭವಾಗಿದ್ದು, ಹೊರಗೆ ಓಡಾಡುವುದೇ ಕಷ್ಟವಾಗುತ್ತಿದೆ. ಕಾಲೇಜ್‌ನಿಂದ ಮನೆಗೆ ಬರುವಷ್ಟರಲ್ಲಿ ದಣಿವಾಗುತ್ತಿದೆ.
ಹೇಮಾ, ವಿದ್ಯಾರ್ಥಿನಿ
ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.