ಲಗ್ನಪತ್ರಿಕೆಯಲ್ಲಿ ಕೋವಿಡ್ ಜಾಗೃತಿ ಸಂದೇಶ
Team Udayavani, May 20, 2020, 12:32 PM IST
ಹುಣಸಗಿ: ಮನೆಯಲ್ಲಿಯೇ ಇರಿ. ಆರಾಮವಾಗಿರಿ. ನವ ದಂಪತಿಗಳಿಗೆ ಅಲ್ಲಿಂದಲೇ ಆಶೀರ್ವದಿಸಿರಿ ಎಂದು ಲಗ್ನ ಪತ್ರಿಕೆ ಕೊನೆಯಲ್ಲಿ ಮುದ್ರಿಸಿದ ಸಾಲೊಂದರ ಚಿತ್ರ ಸದ್ಯ ವೈರಲ್ ಆಗಿದೆ. ಪಟ್ಟಣದ ಹಿರಿಯ ನಿವಾಸಿ ಚನ್ನಬಸಪ್ಪ ಸಾಹುಕಾರ ಸಜ್ಜನ ಅವರ ಪುತ್ರಿ ಪ್ರೀತಿ ಮದುವೆ ಮೇ 20ರಂದು ಶಿವುಕುಮಾರ ಎನ್ನುವರ ಜತೆ ನಡೆಯಲಿದೆ. ಕೋವಿಡ್ ವೈರಸ್ ಲಾಕ್ ಡೌನ್ ಕಾರಣದಿಂದಾಗಿ ಮದುವೆ ಕಾರ್ಯದಲ್ಲಿ 50ಕ್ಕಿಂತ ಹೆಚ್ಚು ಜನ ಇರಬಾರದು ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ದೇವರ ಕಾರ್ಯಕ್ಕೆ ಮಾತ್ರ ಲಗ್ನ ಪತ್ರಿಕೆಯೊಂದನ್ನು ಮುದ್ರಿಸಲಾಗಿದೆ.
ಲಗ್ನ ಪತ್ರಿಕೆಯಲ್ಲಿ ಕೋವಿಡ್ ವೈರಸ್ ಕುರಿತಾದ ಸಂದೇಶ ಮುದ್ರಿಸಲಾಗಿದ್ದು, ಅದು ಈಗ ವೈರಲ್ ಆಗಿದೆ. ಬಂಧುಗಳಿಗೆ ಹಾಗೂ ಸ್ನೇಹಿತರಿಗೆ ವ್ಯಾಟ್ಸ್ ಆ್ಯಪ್ ಮೂಲಕ ಲಗ್ನ ಪತ್ರಿಕೆ ಕಳುಹಿಸಿ ಅಲ್ಲಿಂದಲೇ ಆಶೀರ್ವದಿಸಿ ಎನ್ನುವ ಸಂದೇಶ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಗುರುಲಿಂಗಪ್ಪ ಸಾಹುಕಾರ ಸಜ್ಜನ ತಿಳಿಸಿದ್ದಾರೆ. ನಾವೆಲ್ಲರೂ ಸರ್ಕಾರದ ಆದೇಶ ಕಡ್ಡಾಯವಾಗಿ ಪಾಲಿಸಬೇಕು. ಅದು ನಮಗೆ ಒಳ್ಳೆಯದು. ಮದುವೆಗೆ ಜನರನ್ನು ಸೇರಿಸಿ ಮಹಾಮಾರಿ ಕೋವಿಡ್ ಗೆ ಆಹ್ವಾನ ನೀಡುವ ಬದಲು ಬಂಧುಗಳು ಹಾಗೂ ಸ್ನೇಹಿತರು ಮನೆಯಲ್ಲಿ ಉಳಿದುಕೊಂಡು ವಧು-ವರರನ್ನು ಹಾರೈಸಿರಿ ಎಂದು ತಿಳಿಸಲಾಗಿದೆ. ಇದು ನಮಗೆ ತೃಪ್ತಿ ತರಲಿದೆ ಎನ್ನುತ್ತಾರೆ ಸಜ್ಜನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್- ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.