ನಿವೇಶನ ನಿರ್ಮಾಣದಲ್ಲಿ ಅಕ್ರಮ; ಆರೋಪ
Team Udayavani, Nov 24, 2021, 3:17 PM IST
ರಾಯಚೂರು: ಗಂಗಾಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘವು ನಿವೇಶನ ನಿರ್ಮಾಣದಲ್ಲಿ ಅನುಮೋದನೆಗಿಂತ ಹೆಚ್ಚುವರಿ ನಿವೇಶನಗಳನ್ನು ನಿರ್ಮಿಸಿ 18 ಕೋಟಿ ರೂ. ಅಕ್ರಮ ಎಸಗಿದ್ದಾರೆ ಎಂದು ಕಡಗೋಳ ಶರಣಪ್ಪ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೇಶನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಕೇವಲ 10 ಎಕರೆಗೆ ಮಾತ್ರ. ಆದರೆ, ಈ ಸಂಘ ನಿಯಮಬಾಹಿರವಾಗಿ ಹೆಚ್ಚುವರಿಯಾಗಿ 31 ಎಕರೆಯಲ್ಲಿ ನಿವೇಶನದ ಖಾತೆ ತೆಗೆಯಲಾಗಿದೆ. ಅಂದಾಜು 18 ಕೋಟಿ ರೂ. ಗೂ ಅಧಿ ಕ ಅಕ್ರಮ ಎಸಲಾಗಿದೆ ಎಂದರು.
ನಗರಸಭೆ ಗಂಗಾ ಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಲಾಗಿತ್ತು. ವಸತಿ ವಿನ್ಯಾಸದಲ್ಲಿ ಸರ್ವೇ ನಂ.1236/2 ವಿಸ್ತೀರ್ಣ 2 ಎಕರೆ, ಸರ್ವೇ ನಂ. 1238, 1236 ವಿಸ್ತೀರ್ಣ 8 ಎಕರೆ ಒಟ್ಟು ವಿಸ್ತೀರ್ಣ 10 ಎಕರೆ ವಸತಿ ವಿನ್ಯಾಸ ರಚನೆ ಮಾಡಿ ನಗರಾಭಿವೃದ್ಧಿ ಪ್ರಾಧಿ ಕಾರಕ್ಕೆ 16,184 ಚ.ಮೀ ಪ್ರದೇಶ ಕಾಯ್ದಿರಿಸಲಾಗಿತ್ತು. ಈ ಪ್ರದೇಶದಲ್ಲಿ ಸುಮಾರು 82 ನಿವೇಶನಗಳಿಗೆ ಅನುಮೋದನೆ ನೀಡಲಾಗಿದೆ ಎಂದು ದೂರಿದರು.
ಸರ್ವೇ ನಂ.1238, 1236 ವಿಸ್ತೀರ್ಣ 8 ಎಕರೆಗೆ 103 ನಿವೇಶನ ಹೆಚ್ಚುವರಿಯಾಗಿ ನೀಡಿದ್ದು, ಈ ಕುರಿತು ಜಿಲ್ಲಾಧಿ ಕಾರಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ನಗರಸಭೆಗೆ ಪತ್ರ ಬರೆದಿದ್ದು, ನಗರಸಭೆ ಪ್ರತ್ಯುತ್ತರ ನೀಡಿಲ್ಲ. ಜಿಲ್ಲಾಧಿಕಾರಿಗಳು ವಸತಿ ವಿನ್ಯಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ತಪಸ್ಥಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.