ವೆಂಡರ್‌ಗಳಿಂದ ಜಿಎಸ್‌ಟಿ-ರಾಯಲ್ಟಿ ವಂಚನೆ
ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಅಕ್ರಮದ ವಾಸನೆ
Team Udayavani, Nov 28, 2020, 3:50 PM IST
ಮಾನ್ವಿ: ಉದ್ಯೋಗ ಖಾತ್ರಿ ಯೋಜನೆಯಡಿ ಮಾನ್ವಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ 2018-19 ಮತ್ತು 2019-20ನೇ ಸಾಲಿನಲ್ಲಿಅನುಷ್ಠಾನಗೊಳಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳಿಗೆ ಪಾವತಿಸಬೇಕಾದ ಜಿಎಸ್‌ಟಿ ಮತ್ತು ರಾಯಲ್ಟಿ ಪಾವತಿಸದೆ ವೆಂಡರ್‌ಗಳು ಸರ್ಕಾರಕ್ಕೆವಂಚಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮಾನ್ವಿ ತಾಪಂ ವ್ಯಾಪ್ತಿಯಲ್ಲಿ ಒಟ್ಟು 21 ಗ್ರಾಪಂಗಳಿವೆ. ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಸರಕು ಒದಗಿಸುವ ವೆಂಡರ್‌ಗಳು ಜಿಪಂನಿಂದ ಪರವಾನಗಿ ಮತ್ತು ಭೂಮತ್ತು ಗಣಿ ವಿಜ್ಞಾನ ಇಲಾಖೆಗೆ ಘ.ಮೀ. ಆಧಾರದ ಮೇಲೆ ಕಂಕರ್ ಮತ್ತು ಜೆಲ್ಲಿಗೆ 158, ಮರಳು-108, ಮರಂಗೆ 30ರೂ. ರಾಜಧನ (ರಾಯಲ್ಟಿ) ಪಾವತಿಸಿ ಕಾಮಗಾರಿಗೆ ಬಳಸಬೇಕಿತ್ತು. ಆದರೆ ಯಾವುದೇ ರಾಯಲ್ಟಿ ಕಟ್ಟದೆ ಅಕ್ರಮವಾಗಿ ಮರಳು, ಮರಂ, ಕಂಕರ್ ಗಳನ್ನು ಕಾಮಗಾರಿಗೆ ಬಳಸಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೂ ಸಹ ದಂಡ ಹಾಕಿಲ್ಲ. ಜಿಎಸ್‌ಟಿಯೂ ಕಟ್ಟಿಲ್ಲ: ಇನ್ನು ಕಾಮಗಾರಿ ನಿರ್ವಹಿಸಿದ ವೆಂಡರ್‌ಗಳು ಕೇಂದ್ರ-ರಾಜ್ಯಸರ್ಕಾರಕ್ಕೆ ಕಟ್ಟಬೇಕಾದ ಜಿಎಸ್‌ಟಿ ಮೊತ್ತ ಸಹ ಪಾವತಿಸಿಲ್ಲ.
ತಾಪಂ ಅಧಿಕಾರಿಗಳೇ ನೀಡಿದ ಮಾಹಿತಿ ಪ್ರಕಾರ, ತಾಲೂಕಿನ ಎಲ್ಲ ಗ್ರಾಪಂ ಸೇರಿ 2018-19ನೇ ಸಾಲಿನಲ್ಲಿ ಕೇಂದ್ರ-ರಾಜ್ಯಕ್ಕೆ 70.57 ಸಾವಿರ ರೂ. ಹಾಗೂ 2019-20ನೇ ಸಾಲಿನಲ್ಲಿ 78.69 ಸಾವಿರ ರೂ. ಜಿಎಸ್‌ಟಿ ಬಾಕಿ ಇದೆ. ಈ ನಡುವೆ ಅಧಿಕಾರಿಗಳೂ ಜಾಣ ಕುರುಡು ಪ್ರದರ್ಶಿಸಿದ್ದು ಕಕ್ಕರ್, ಮರಂ, ಮರಳು ತಂದಿರುವ ಬಗ್ಗೆ ರಾಯಲ್ಟಿ ದಾಖಲೆ ಪರಿಶೀಲಿಸಿದಂತಿಲ್ಲ. ಅಲ್ಲದೇ ನಿಯಮ ಪ್ರಕಾರ ರಾಯಲ್ಟಿ ಪಾವತಿಸದೆ ಮರಳು, ಮರಂ ಬಳಸಿದ್ದಲ್ಲಿ ಅಂತಹ ವೆಂಡರ್‌ಗೆ ಕಟ್ಟಬೇಕಾಗಿದ್ದ ರಾಯಲ್ಟಿಯ ಐದು ಪಟ್ಟು ದಂಡ ವಿಧಿಸಿ, ಆ ಮೊತ್ತ ಸರ್ಕಾರದ ಖಜಾನೆಗೆ ತುಂಬಬೇಕು. ಇದಾವುದನ್ನೂ ಮಾಡದ ಗ್ರಾಪಂ ಅಭಿವೃದ್ಧಿಅಧಿಕಾರಿಗಳು ವೆಂಡರ್‌ಗಳ ವಂಚನೆಯಲ್ಲಿಭಾಗಿಯಾಗಿದ್ದಾರೆ ಎಂಬ ಆರೋಪಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಎಸ್‌ಟಿ ಮತ್ತು ರಾಯಲ್ಟಿಗೆಸಂಬಂಧಿಸದಂತೆ ತನಿಖೆ ಮಾಡಿ, ಹಣ ಕಡಿತಮಾಡಿಕೊಳ್ಳಬೇಕು ಎಂದು ಜಿಲ್ಲೆಯ ಎಲ್ಲತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಉದ್ಯೋಗ ಖಾತ್ರಿ ಕಾಮಗಾರಿ ನಿರ್ವಹಿಸುವ ವೆಂಡರ್‌ಗಳು ಕಡ್ಡಾಯವಾಗಿ ಕಕ್ಕರ್, ಮರಳು, ಮರಂಗೆ ರಾಜಧನ (ರಾಯಲ್ಟಿ) ಕಟ್ಟಬೇಕು. ರಾಯಲ್ಟಿ ದಾಖಲೆ ಹೊಂದಿರಬೇಕು. ಗ್ರಾಪಂ ಅಧಿಕಾರಿಗಳು ಸಹ ವೆಂಡರ್‌ಗಳ ರಾಯಲ್ಟಿದಾಖಲೆ ಪರಿಶೀಲಿಸಿ ಬಿಲ್ ಪಾವತಿಸಬೇಕು. – ಡಾ| ಟಿ. ರೋಣಿ, ಜಿಪಂ ಉಪ ಕಾರ್ಯದರ್ಶಿ, ರಾಯಚೂರು
ರಾಜಧನ ಮತ್ತು ತೆರಿಗೆಗಳು ವೆಂಡರ್‌ಗೆ ಸಂಬಂಧಿಸಿದ ವಿಷಯಗಳಾಗಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ರಾಯಲ್ಟಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ನಿಯಮಗಳನ್ನು ಇನ್ನೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. –ಶರಣಬಸವ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಮಾನ್ವಿ
–ರವಿ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.