![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 8, 2022, 4:14 PM IST
ಸಿಂಧನೂರು: ಅನಧಿಕೃತವಾಗಿ ರಾತ್ರೋರಾತ್ರಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಇಲ್ಲಿನ ಶಹರ ಠಾಣೆ ಪಿಎಸ್‍ಐ ಸೌಮ್ಯ.ಎಂ.ಅವರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.
ನಗರದ ಹಟ್ಟಿ ರಸ್ತೆಯ ಮಾರ್ಗವಾಗಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಸೌಮ್ಯ ಅವರು ಪರಿಶೀಲನೆ ನಡೆಸಿ, ಟಿಪ್ಪರನ್ನು ಪೊಲೀಸ್ ಠಾಣೆಗೆ ರವಾನಿಸಿದರು. ಕೆಎ 36, ಬಿ6634 ನೋಂದಣಿ ಸಂಖ್ಯೆ ಇರುವ ಟಿಪ್ಪರ್ ಮಾನ್ವಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಸೇರಿದ್ದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತರ ಇಲಾಖೆ ಎಚ್ಚೆತ್ತುಕೊಳ್ಳಲಿ:
ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಮಾಹಿತಿ ನೀಡಿದಾಗ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿ ಇತರ ಇಲಾಖೆಯವರು ನಿದ್ರೆಯಲ್ಲಿದ್ದಾರೆ. ಅಕ್ರಮ ಮರಳು ಸಾಗಣೆ ತಡೆಯುವುದಕ್ಕೆ ಎಲ್ಲ ಇಲಾಖೆಯವರು ಸಕ್ರಿಯವಾಗಬೇಕು ಎಂದು ಮಾದಿಗ ಮಹಾಸಭಾದ ಅಧ್ಯಕ್ಷ ಅಮರೇಶ ಗಿರಿಜಾಲಿ ಒತ್ತಾಯಿಸಿದ್ದಾರೆ.
ಎರಡು ಕಡೆ ಚೆಕ್ ಪೋಸ್ಟ್:
ಮಾನ್ವಿ ಕಡೆಯಿಂದ ಮರಳು ತುಂಬಿದ ಟಿಪ್ಪರ್‍ಗಳು ಬರುತ್ತಿವೆ ಎಂದು ಕೆಲವರು ದೂರು ಕೊಟ್ಟಿದ್ದಾರೆ. ಪರಿಶೀಲನೆ ಕೈಗೊಳ್ಳಲು ಜವಳಗೇರಾ ಗ್ರಾಮದ ನೀರಾವರಿ ಇಲಾಖೆ ಬಳಿ ಒಂದು ಚೆಕ್‍ಪೋಸ್ಟ್, ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಒಂದು ಚೆಕ್‍ಪೋಸ್ಟ್ ತೆರೆಯಲಿದ್ದು, ಇದಕ್ಕೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಸಿಸಿ ಕ್ಯಾಮೆರಾ ಅಳವಡಿಸಲಿಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.