ಕೋವಿಡ್ ಕಾಲದಲ್ಲಿ ನೊಂದವರಿಗೆ ಆಸರೆ!
Team Udayavani, Feb 4, 2022, 2:52 PM IST
ಸಿಂಧನೂರು: ಕೊರೊನಾದಿಂದಾಗಿ ಕೌಟುಂಬಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳನ್ನು ಗುರುತಿಸಿ ಅವರಿಗೆ ವೃತ್ತಿಪರ ಕೌಶಲ್ಯ ಹೇಳಿಕೊಡುವ ಮೂಲಕ ಸದ್ದಿಲ್ಲದೇ ಆಸರೆ ಒದಗಿಸಲಾಗಿದೆ.
ಆರ್ಥಿಕವಾಗಿ ಮಹಿಳೆಯರು ಕೂಡ ದುಡಿಮೆಯ ಮಾರ್ಗ ಕಂಡುಕೊಳ್ಳಲಿಕ್ಕೆ ಈ ಉಚಿತ ತರಬೇತಿ ಪೂರಕವಾಗಿದೆ. ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶನಾಲಯ, ಪಾಟೀಲ್ ಅಕಾಡೆಮಿ ಸಹಭಾಗಿತ್ವದಲ್ಲಿ ಎರಡು ತಿಂಗಳ ಕಾಲ ತಾಲೂಕಿನ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿದವರು, ಆರ್ಥಿಕವಾಗಿ ದುರ್ಬಲರನ್ನು ಗುರುತಿಸಿ, ಅವರಿಗೆ ತರಬೇತಿ ಕಲ್ಪಿಸಲಾಗಿದೆ.
ವೃತ್ತಿಪರ ತರಬೇತಿಗೆ ಬೇಡಿಕೆ
ಬಡ ಮಹಿಳೆಯರಿಗೆ ಉಚಿತವಾಗಿ ಈ ತರಬೇತಿ ನೀಡುತ್ತಿದ್ದು, ಇಲ್ಲಿನ ದುದ್ದುಪುಡಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಬಿರಕ್ಕೆ 20 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಮದುವೆ ಸೇರಿದಂತೆ ಇತರ ಶುಭ ಸಂದರ್ಭದಲ್ಲಿ ಮೆಹಂದಿ ಹಾಕುವುದಕ್ಕೂ ಬೇಡಿಕೆಯಿದೆ. ಗೌರವ ಸಂಭಾವನೆಯೂ ದೊರೆಯುತ್ತದೆ. ಇನ್ನು ಬ್ಯೂಟಿಷಿಯನ್ ತರಬೇತಿ ಪಡೆದವರು ಮನೆಯಲ್ಲೇ ಕೇಂದ್ರ ಆರಂಭಿಸಬಹುದು. ಆರ್ಥಿಕವಾಗಿ ತೊಂದರೆ ಎದುರಿಸುತ್ತಿದ್ದವರಿಗೆ ಇದೊಂದು ಉತ್ತಮ ಮಾರ್ಗವೆನಿಸಿದೆ. ಕಳೆದ ತಿಂಗಳಿಂದ ತರಬೇತಿ ನಡೆಯುತ್ತಿದ್ದು, ಉಚಿತವಾಗಿಯೇ ಎಲ್ಲ ವ್ಯವಸ್ಥೆ ಒದಗಿಸಲಾಗಿದೆ.
ಕಿಟ್ ವಿತರಣೆ
ತರಬೇತಿ ಪೂರ್ಣಗೊಂಡ ಬಡ ಮಹಿಳೆಯರಿಗೆ ಅನುಕೂಲವಾಗಲು ಬ್ಯೂಟಿಷಿಯನ್ ಕಿಟ್ ಒದಗಿಸಲಾಗುತ್ತದೆ. ಅವರು ಆ ಕಿಟ್ ಬಳಸಿಕೊಂಡು ಮನೆಯಲ್ಲೇ ದುಡಿಮೆ ಆರಂಭಿಸಬಹುದು. ವೃತ್ತಿಪರ ಕೋರ್ಸ್ ಕಲಿಸಿದರೆ, ಯಾವುದೇ ನಷ್ಟವಿಲ್ಲ. ಮಹಿಳೆಯರ ಸ್ವಾವಲಂಬನೆಗೂ ಅನುಕೂಲವೆಂಬ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಬೋರ್ಸ್ ಕಂಪನಿ ಸಹಭಾಗಿತ್ವದಲ್ಲಿ ಈಗಾಗಲೇ ಕೇರ್ ಗಿವರ್ ತರಬೇತಿ ನೀಡಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿ ಸಿ ಕೌಶಲ್ಯ ತಿಳಿಸಲಾಗಿತ್ತು. ಬಿಪಿ, ಶುಗರ್, ಕೋವಿಡ್ ಪರೀಕ್ಷೆಯಂತಹ ಪ್ರಾಥಮಿಕ ತರಬೇತಿ ನೀಡಿದ್ದರಿಂದ ಹಲವು ಮಹಿಳೆಯರು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇದೀಗ ಬ್ಯೂಟಿಷಿಯನ್, ಮೆಹಂದಿ ತರಬೇತಿ ನೀಡುತ್ತಿದ್ದು, ಮಹಿಳೆಯರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ದುರ್ಬಲ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡಬೇಕೆಂಬ ಉದ್ದೇಶದಿಂದ ತರಬೇತಿ ಶಿಬಿರ ನಡೆಸಲಾಗಿದೆ. ಉಚಿತವಾಗಿಯೇ ಬ್ಯೂಟಿಷಿಯನ್ ಕಿಟ್ ವಿತರಿಸಲಾಗುತ್ತದೆ. -ಆರ್.ಸಿ. ಪಾಟೀಲ್,ಕಾರ್ಯದರ್ಶಿ, ದುದ್ದುಪುಡಿ ಮಹಾವಿದ್ಯಾಲಯ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.