ಆರೋಗ್ಯ ಉಪಕೇಂದ್ರ ಉದ್ಘಾಟನೆ
Team Udayavani, Jul 24, 2022, 5:33 PM IST
ಮಾನ್ವಿ: ಚಿಕಲಪರ್ವಿ ಗ್ರಾಮವು ತುಂಗಭದ್ರಾ ನದಿ ಪಾತ್ರದಲ್ಲಿ ಬರುವುದರಿಂದ ನೆರೆ ಹಾವಳಿಯ ಅಪಾಯ ಹೆಚ್ಚಾಗಿದೆ. ನವಗ್ರಾಮದಲ್ಲಿ ಸುರಕ್ಷಿತ ಸ್ಥಳದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಿಸಲಾಗಿದ್ದು, ಗ್ರಾಮದ ಜನರು ಹಾಗೂ ಸುತ್ತಲಿನ ಗ್ರಾಮಸ್ಥರು ಇದರ ಉಪಯೋಗ ಪಡೆಯಬೇಕು ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ತಿಳಿಸಿದರು.
ನವಗ್ರಾಮದಲ್ಲಿ ಎನ್‌ಎಚ್‌ಎಸ್ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಆರೋಗ್ಯ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗಂಭೀರ ಕಾಯಿಲೆ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು 25 ಲಕ್ಷ ರೂ. ವೆಚ್ಚದಲ್ಲಿ ಆಂಬ್ಯುಲೆನ್ಸ್ ಮಂಜೂರು ಮಾಡಲಾಗಿದೆ. ತಾಲೂಕಿನ ಉಪಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ತಾಲೂಕು ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಸೇರಿದಂತೆ ತಜ್ಞ ವೈದ್ಯರಿಂದ ಚಿಕಿತ್ಸೆ ಸೌಲಭ್ಯ ಹಾಗೂ ಉಚಿತ ಔಷಧಗಳನ್ನು ನೀಡಲಾಗುತ್ತಿದೆ. ಜನರು ಆರೋಗ್ಯ ಇಲಾಖೆಯ ಸೇವೆ ಪಡೆದು ಆರೋಗ್ಯವಂತರಾಗುವಂತೆ ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರಯ್ಯಸ್ವಾಮಿ ಮಾತನಾಡಿದರು. ಚಿಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಅರಹಳ್ಳಿ ಮಠದ ಶರಣ ಬಸವ ಸ್ವಾಮಿಗಳು, ಡಾ| ರಾಜೇಂದ್ರ, ಆರೋಗ್ಯ ಇಲಾಖೆಯ ಬಾಲಪ್ಪ ನಾಯಕ, ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ನಗರ ಘಟಕದ ಅಧ್ಯಕ್ಷ ಖಲೀಲ ಖುರೀಷಿ, ಮುಖಂಡರಾದ ಕೆ. ವೆಂಕಟೇಶ ನಾಯಕ, ಗ್ರಾಪಂ ಸದಸ್ಯರಾದ ಮರೇಗೌಡ ಬುದ್ದಿನ್ನಿ, ಚಂದ್ರಪ್ಪ ಗೌಡ, ಖಾಸಿಂ, ತಿಮ್ಮಣ್ಣ ಗೌಡ, ಪಿ.ರವಿಕುಮಾರ್, ಹನುಮಂತ ಭೋವಿ, ಆರ್ ಬಸವರಾಜ ಶೆಟ್ಟಿ, ಗೋಪಾಲ ನಾಯಕ, ಬುಡ್ಡಪ್ಪ ನಾಯಕ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.