ಕ್ವಾರಂಟೈನ್ ಕೇಂದ್ರದಲ್ಲಿರುವ ಸದಸ್ಯರಿಗೆ ಸೋಂಕು
Team Udayavani, Jun 6, 2020, 6:26 AM IST
ರಾಯಚೂರು: ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 88 ಪ್ರಕರಣಗಳಲ್ಲಿ ಬಹುತೇಕ ಕ್ವಾರಂಟೈನ್‌ನಲ್ಲಿರುವ ಕುಟುಂಬ ಸದಸ್ಯರಲ್ಲೇ ಹರಡಿವೆ. ಬಹುತೇಕ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗದಲ್ಲಿ 75, ರಾಯಚೂರಿನಲ್ಲಿ 9, ಲಿಂಗಸುಗೂಗುರು ತಾಲೂಕಿನಲ್ಲಿ 2, ಮಾನ್ವಿ, ಸಿಂಧನೂರಿನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ನಗರದಲ್ಲಿ ಪಶ್ಚಿಮ ಠಾಣೆ ಮೂವರು ಪೇದೆಗಳು, ಅಸ್ಕಿಹಾಳನ ಆಶಾ ಕಾರ್ಯಕರ್ತೆ, ರಾಂಪುರದ ಪೋಸ್ಟ್‌ಮ್ಯಾನ್‌ಗೆ ಸೋಂಕು ತಗುಲಿದೆ. ಇನ್ನೂ ನಾಲ್ವರು ಕ್ವಾರಂಟೈನ್‌ನಲ್ಲಿದ್ದು, ಅವರಿಗೆ ಮಹಾರಾಷ್ಟ್ರದ ಹಿನ್ನೆಲೆಯಿದೆ. ಹೀಗಾಗಿ ಗೋಲ್ ಮಾರ್ಕೆಟ್, ರಾಂಪುರ, ಅಸ್ಕಿಹಾಳಗಳನ್ನು ಕಂಟೆನ್ಮೆಂಟ್ ಏರಿಯಾ ಎಂದು ಘೋಷಿಸಿರುವುದಾಗಿ ತಿಳಿಸಿದರು.
ಕೃಷಿ ವಿವಿಯಲ್ಲಿರುವ ಕ್ವಾರಂಟೈನ್‌ನಿಂದ ಪೊಲೀಸರು, ಪೋಸ್ಟ್ ಮ್ಯಾನ್‌ಗೆ ಸೋಂಕು ತಗುಲಿರಬಹುದು. ಆಶಾ ಕಾರ್ಯಕರ್ತೆಯ ಪ್ರಯಾಣ ಹಿನ್ನೆಲೆ ಪತ್ತೆ ಹಚ್ಚಲಾಗುತ್ತಿದೆ. ಅವರ ಸೋದರ ಬೆಂಗಳೂರಿಗೆ ಹೋಗಿ ಬಂದಿದ್ದರು. ಮಾನ್ವಿಯಲ್ಲಿ ಹೈದರಾಬಾದ್‌ನಿಂದ ಬಂದ ಸಾಫ್ಟವೇರ್ ಉದ್ಯೋಗಿಗೆ ಸೋಂಕು ತಗುಲಿದೆ. ಮತ್ತೂಬ್ಬ ವೃದ್ಧನಿಗೆ ಸೋಂಕು ತಗುಲಿದ್ದು, ಅವರ ಸ್ಥಿತಿ ತುಸು ಗಂಭೀರವಾಗಿದೆ. ಲಿಂಗಸುಗೂರು ತಾಲೂಕು ಕಡ್ಕಲ್, ಹಟ್ಟಿಯಲ್ಲಿ ಮಹಾರಾಷ್ಟ್ರದಿಂದ ಬಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ ದೇವದುರ್ಗದ ಕೊತ್ತದೊಡ್ಡಿ ಕ್ವಾರಂಟೈನ್ ನಲ್ಲಿ 46, ನಾಗರಗುಂಡಾ ಕ್ವಾರಂಟೈನ್‌ನಲ್ಲಿ 29 ಪ್ರಕರಣ ದೃಢಪಟ್ಟಿವೆ. ಅವರೆಲ್ಲ ಮುಂಬೈನಿಂದ ಬಂದಿದ್ದು, ಕುಟುಂಬದ ಸದಸ್ಯರಿಗೆ ಹೆಚ್ಚಾಗಿ ಸೋಂಕು ತಗುಲಿದೆ ಎಂದು ತಿಳಿಸಿದರು.
ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಕ್ವಾರಂಟೈನ್ ನಿಂದ ರೋಗಿಗಳು ತಪ್ಪಿಸಿಕೊಂಡು ಹೋಗಿಲ್ಲ. ಮಸ್ಕಿಯಿಂದ ಮೂವರು ತಪ್ಪಿಸಿಕೊಂಡು ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಪೇದೆಗಳಿಗೆ ಸೋಂಕು ತಗುಲಿದ್ದು, ಅವರ ಸಂಪರ್ಕಿತರನ್ನು ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು. ಎಡಿಸಿ ದುರುಗೇಶ, ಸಹಾಯಕ ಆಯುಕ್ತ ಸಂತೋಷ ಎಸ್. ಕಾಮಗೌಡ, ಆರೋಗ್ಯ ಇಲಾಖೆ ಡಾ| ರಾಮಕೃಷ್ಣ, ಡಾ| ನಾಗರಾಜ್ ಇದ್ದರು.
ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಕೆಲವೊಂದು ತಪ್ಪುಗಳಾಗಿದ್ದು, ಅಲ್ಲಿ ಉಲ್ಲೇಖೀಸಿದ ರೋಗಿಗಳ ಸಂಖ್ಯೆಗೂ ಸೋಂಕಿತರ ಸಂಖ್ಯೆಗೂ ತಾಳೆ ಆಗುತ್ತಿಲ್ಲ. ಸೋಂಕು ಹೆಚ್ಚಾಗಿ ಬಂದಿರುವ ಕ್ವಾರಂಟೈನ್‌ನಗಳಲ್ಲಿ ಆ ಸಂಖ್ಯೆಯ ರೋಗಿಗಳೇ ಇಲ್ಲ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಸರ್ಕಾರದ ಗಮನಕ್ಕೆ ತರಲಾಗಿದೆ. -ಆರ್. ವೆಂಕಟೇಶಕುಮಾರ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.