ಹಾರುಬೂದಿ ನಿಯಂತ್ರಣಕ್ಕೆ ಒತ್ತಾಯ
Team Udayavani, Mar 16, 2022, 4:49 PM IST
ರಾಯಚೂರು: ಚಿಕ್ಕಸುಗೂರು ವ್ಯಾಪ್ತಿಯಲ್ಲಿ ಹಾರು ಬೂದಿ ಸಮಸ್ಯೆ ಹೆಚ್ಚಾಗಿದ್ದು, ತಿರಸ್ಕರಿಸಿದ ಕಲ್ಲಿದ್ದಲು ಬೇರೆಡೆ ಸ್ಥಳಾಂತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತಿರಸ್ಕರಿಸಿದ ಕಲ್ಲಿದ್ದಲು ಚಿಕ್ಕಸುಗೂರಿನ ಗ್ರಾಮದ ಪಕ್ಕದಲ್ಲಿ ಹಾಕಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಮಸ್ಯೆ ವಿವರಿಸಿದರು.
ಹಾರು ಬೂದಿಗಳ ವಾಹನ ಹೆಚ್ಚಾಗಿ ಸಾಗಣೆ ಮಾಡುವ ಹಿನ್ನೆಲೆಯಲ್ಲಿ ಚರ್ಮರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾರುಬೂದಿ ಹಾವಳಿ ಹಾಗೂ ಹೊಗೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಕೂಡಲೇ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರಿಗೆ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಹೆಗ್ಗಸನಹಳ್ಳಿ ಹಾಗೂ ವಡ್ಲೂರು ಗ್ರಾಮಸ್ಥರ ನೇತೃತ್ವದಲ್ಲಿ ವೈಟಿಪಿಎಸ್ ದ್ವಾರದ ಬಳಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ಬಡೇಸಾಬ್, ಕೃಷ್ಣಮೂರ್ತಿ, ಮಂಜುನಾಥ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Karkala: ಸೆಲ್ಫಿ ಕಾರ್ನರ್ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.