ಮುನಿದ ವರುಣ;ಕೈ ಕಟ್ಟಿ ಕುಳಿತ ರೈತರು..!
Team Udayavani, Jul 3, 2018, 12:10 PM IST
ರಾಯಚೂರು: ಮಳೆಗಾಲ ಶುರುವಾಗಿ ತಿಂಗಳೂ ಕಳೆದರೂ ಜಿಲ್ಲೆಗೆ ಮಾತ್ರ ವರುಣ ಕೃಪೆ ತೋರಿಲ್ಲ. ಬರೀ ಮೋಡ ಕವಿದ ವಾತಾವರಣ ಇದೆಯಾದರೂ ಮಳೆ ಮಾತ್ರ ಬರುತ್ತಿಲ್ಲ. ಇದರಿಂದ ಬಿತ್ತನೆಗಾಗಿ ಕಾದು ಕುಳಿತ ರೈತರು ಆಗಸದತ್ತ ಮುಖ ಮಾಡಿ ಕೂಡುವಂತಾಗಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದರೂ ಜಿಲ್ಲೆಯ ಮೇಲೆ ಮಾತ್ರ ವರುಣ ಕೃಪೆ ತೋರುತ್ತಿಲ್ಲ. ಜಿಲ್ಲೆಯ ಕೆಲವೆಡೆ ಒಂದಷ್ಟು ಮಳೆ ಸುರಿದಿದೆಯಾದರೂ ಬಿತ್ತನೆಗೆ ಭೂಮಿ ಹದವಾಗುವಷ್ಟು ಆಗಿಲ್ಲ. ಹೊಲವನ್ನು ಹಸನು ಮಾಡಿರುವ ರೈತರು, ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಇನ್ನೊಂದು ಮಳೆ ಬಂದರೆ ಬಿತ್ತನೆ ಮಾಡಬಹುದು ಎಂಬ ನಿರೀಕ್ಷೆಗಳು ಹುಸಿಯಾಗುತ್ತಿವೆ. ಜೂನ್‌ನಲ್ಲಿ ಮುಂಗಾರು ಹಂಗಾಮು ಸಂಪೂರ್ಣ ವಿಫಲಗೊಂಡ ಪರಿಣಾಮ ಕೃಷಿ ಚಟುವಟಿಕೆಗಳು ನಿಂತು ಬಿಟ್ಟಿವೆ. ನಿರೀಕ್ಷೆಯಷ್ಟು ಮಳೆಯಾಗಿಲ್ಲ. 98ರಿಂದ 100 ಎಂಎಂ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಈವರೆಗೆ ಕೇವಲ 40 ಎಂಎಂ ಕೂಡ ಮಳೆ ಬಿದ್ದಿಲ್ಲ. ಇದರಿಂದ ಈಗಾಗಲೇ ಬಿತ್ತನೆ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಾಡಿಕೆ ಮಳೆ ಬಂದಿಲ್ಲ: ಜಿಲ್ಲೆಯಲ್ಲಿ ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ 145.6 ಮಿ.ಮೀ. ವಾಡಿಕೆ ಮಳೆಯಲ್ಲಿ 160.5 ಮಿ.ಮೀ. ಮಳೆ ದಾಖಲಾಗಿತ್ತು. ಶೇ.10ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಅಡ್ಡಿ ಆತಂಕವಿಲ್ಲದೆ ಸಾಂಗವಾಗಿ ಸಾಗಿದ್ದವು. ಆದರೆ, ಈ ಬಾರಿ 100 ಮಿ.ಮೀ. ವಾಡಿಕೆ ಮಳೆ ಬೇಕಿದ್ದು, ಕೇವಲ 35-40 ಮಿ.ಮೀ. ಮಳೆಯಾಗಿದೆ. ಕಳೆದ ಸಾಲಿನ ಮುಂಗಾರಿನಲ್ಲಿ 3,55,757 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಪ್ರಸಕ್ತ ಸಾಲಿನಲ್ಲೂ ಸರಾಸರಿ 3,50,551 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ 13,455 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರಿಂದ ಮುಂಚಿತವಾಗಿ ಬಿತ್ತನೆ ಮಾಡಿರುವ ಬೆಳೆಗಳು ಮೊಳಕೆಯೊಡೆದಿದ್ದು, ನೀರಿಲ್ಲದೇ ಬಾಡುತ್ತಿವೆ. ವಾರದೊಳಗೆ ಮಳೆ ಬಾರದಿದ್ದಲ್ಲಿ ಅದನ್ನು ಅಳಿಸಿ ಪುನಃ ಹಿಂಗಾರಿಗೆ ಮತ್ತೆ ಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಲಿದೆ.
ಈಗಾಗಲೇ ಮಳೆಯಾಶ್ರಿತ ಕೃಷಿ ಪ್ರದೇಶದ ರೈತರು ಮುಂಗಾರು ಹಂಗಾಮಿನ ಆಸೆ ಕೈ ಬಿಟ್ಟಿದ್ದಾರೆ. ಆದರೆ, ನೀರಾವರಿ ಪ್ರಾಂತದ ರೈತರು ಮಾತ್ರ ಬತ್ತ, ಹತ್ತಿ, ತೊಗರಿ ಸೇರಿ ಇತರೆ ಬೆಳೆಗಳ ಬಿತ್ತನೆ ಮಾಡಿದ್ದು, ನೀರು ಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಟ್ಟಾರೆ ಬಿತ್ತನೆ ಮಾಡಿರುವ ರೈತರು, ಮಾಡಬೇಕೆಂದಿರುವ ರೈತರು ಆಗಸದತ್ತ ಮುಖ ಮಾಡಿ ವರುಣನ ಆಗಮನಕ್ಕಾಗಿ ಕಾದು ಕುಳಿತಿರುವುದಂತೂ ಸತ್ಯ.
ಮುಂಗಾರು ಮಳೆ ಜೂನ್ ತಿಂಗಳಲ್ಲಿ ನಿರೀಕ್ಷೆಯಷ್ಟು ಬಂದಿಲ್ಲ. 100 ಎಂ.ಎಂ. ಮಳೆ ನಿರೀಕ್ಷೆಯಲ್ಲಿ ಕೇವಲ 35ರಿಂದ 40 ಎಂಎಂ ಮಾತ್ರ ಸುರಿದಿದೆ. ಇನ್ನೂ ಒಂದೆರಡು ದಿನಗಳಲ್ಲಿ ಮಳೆ ಬರುವ ಸಾಧ್ಯತೆಗಳಿವೆ.
ವಿಶ್ವನಾಥ ಬಿರಾದಾರ, ಹವಾಮಾನ ತಜ್ಞರು
ಪ್ರಸಕ್ತ ಸಾಲಿನಲ್ಲೂ ಸರಾಸರಿ ಪ್ರಸಕ್ತ ಸಾಲಿನಲ್ಲೂ ಸರಾಸರಿ ,50,551 3,50,551 ಹೆಕ್ಟೇರ್ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪ್ರದೇಶದಲ್ಲಿ ಬಿತ್ತನೆ ಗುರಿ
ಈವರೆಗೆ ಕೇವಲ ಈವರೆಗೆ ಕೇವಲ 13,455 ಹೆಕ್ಟೇರ್ ಪ್ರದೇಶದಲ್ಲಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.