ಕೈ ಹೊಸ್ತಿಲಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ?
ಮಾಜಿ ಶಾಸಕ ಹಂಪನಗೌಡರ ಜತೆ ಮಾತುಕತೆ,ಜೆಡಿಎಸ್ ಬಿಡದಂತೆ ಮನವೊಲಿಕೆ ಯತ್ನ
Team Udayavani, Dec 22, 2020, 4:43 PM IST
ಸಿಂಧನೂರು: ಕಳೆದ 12 ವರ್ಷಗಳಿಂದ ಸುದೀರ್ಘ ಅವಧಿಯವರೆಗೆ ಜೆಡಿಎಸ್ ತಾಲೂಕು ಅಧ್ಯಕ್ಷರಾಗಿದ್ದ ಲಿಂಗಪ್ಪ ದಢೇಸುಗೂರು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆಂಬ ಮಾತು ಕೇಳಿ ಬಂದಿವೆ.
ಅವರ ರಾಜೀನಾಮೆ ಪತ್ರ ಶನಿವಾರ ಸಾಮಾಜಿಕ ತಾಣದಲ್ಲಿ ಹರಿದಾಡಿದ ನಂತರದಲ್ಲಿ ಪಕ್ಷಾಂತರದ ಗುಮಾನಿ ಶುರುವಾಯಿತು. ಈ ಬೆಳವಣಿಗೆಬೆನ್ನಲ್ಲೇ ಶಾಸಕ ವೆಂಕಟರಾವ್ ನಾಡಗೌಡಅವರು ಲಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿಭಾನುವಾರ ಮಾತುಕತೆ ನಡೆಸಿದ್ದರು. ಹಲವು ಜೆಡಿಎಸ್ ಮುಖಂಡರು ಅವರ ಜತೆಯಲ್ಲಿ ಉಳಿದುವಾತಾವರಣ ತಿಳಿಸಿಗೊಳಿಸಿದ್ದಾಗಿ ಹೇಳಿದ್ದರು.ಎರಡು ದಿನ ಕಳೆದರೂ ಮನವೊಲಿಕೆಯ ಕಸರತ್ತುಮುಂದುವರಿದಿದ್ದು, ಒಳಗೊಳಗೆ ಮತ್ತೂಂದುರಾಜಕೀಯ ಬೆಳವಣಿಗೆ ನಡೆದಿದೆ ಎಂಬ ಗುಮಾನಿಗೆ ಆಸ್ಪದ ನೀಡಿದೆ.
ಕಾಂಗ್ರೆಸ್ ಸೇರಲು ಉತ್ಸುಕ: ಗ್ರಾಮ ಪಂಚಾಯಿತಿ ಚುನಾವಣೆ ಹೊತ್ತಿನಲ್ಲಿ ಪಕ್ಷಸೇರ್ಪಡೆ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಚುರುಕಾಗಿವೆ.ಇದೇ ಸಮಯದಲ್ಲಿ ಜೆಡಿಎಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಸಂಗತಿ ಗೊತ್ತಾದ ನಂತರ ಕಾಂಗ್ರೆಸ್ ಆಹ್ವಾನ ನೀಡಿದೆ.ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯಾಗಿದ್ದು, ಕಾಂಗ್ರೆಸ್ ಸೇರ್ಪಡೆ ಮುಹೂರ್ತಅಂತಿಮಗೊಳಿಸಲಾಗಿದೆ. ಮುಂದಿನ ಜಿಪಂ, ತಾಪಂ ಚುನಾವಣೆ ಸಂದರ್ಭದಲ್ಲಿ ಸೂಕ್ತ ಜವಾಬ್ದಾರಿ ಕೊಡುವ ಬಗ್ಗೆ ಆಫರ್ ನೀಡಿದ್ದು, ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಲಾಗಿದೆ.
ಮನೆಗೆ ಜೆಡಿಎಸ್ ನಿಯೋಗ: ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಸುಳಿವು ದೊರೆಯುತ್ತಿದ್ದಂತೆ 2ನೇ ದಿನ ಜೆಡಿಎಸ್ ಮುಖಂಡರಾದ ಧರ್ಮನಗೌಡ ಮಲ್ಕಾಪುರ, ಜಿಲಾನಿಪಾಷಾ, ಸತ್ಯನಾರಾಯಣ ದಾಸರಿ ಹಾಗೂ ವೆಂಕೋಬ ಕಲ್ಲೂರು ಅವರಿದ್ದನಿಯೋಗ ಲಿಂಗಪ್ಪ ಅವರ ನಿವಾಸಕ್ಕೆ ತೆರಳಿ, ಪಕ್ಷ ಬಿಡದಂತೆ ಮನವೊಲಿಸಲು ಯತ್ನಿಸಿದೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಜೆಡಿಎಸ್ ಮುಖಂಡರು, ಲಿಂಗಪ್ಪ ಅವರು ಯಾವುದೇ ಕಾರಣಕ್ಕೂ ಪಕ್ಷಬಿಡಲ್ಲ. ಭಿನ್ನಾಭಿಪ್ರಾಯ ಸರಿ ಹೋಗಿವೆ ಎಂದರು.
ಶಾಸಕರ ಸಹೋದರರೊಬ್ಬರ ಜತೆಯಲ್ಲೇ ಮುನಿಸಿಕೊಂಡಿರುವುದರಿಂದ ಮಾತುಕತೆ ಫಲಪ್ರದವಾಗುವ ಲಕ್ಷಣಗಳಿಲ್ಲ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ತಾಲೂಕಾಧ್ಯಕ್ಷರ ಸಹೋದರ ನಾಗರಾಜ್ ಸಾಹುಕಾರ್ ಅವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ತಮ್ಮ ಹೋದ ಮೇಲೆಅಣ್ಣ ಕಾಂಗ್ರೆಸ್ ಸೇರುವುದರಲ್ಲಿ ಅನುಮಾನವೇ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಅತ್ತ ತಡೆಯುವ ಕಸರತ್ತು ಸಾಗಿದ್ದರೆ, ಇತ್ತ ತಮ್ಮ ಪಕ್ಷದತ್ತ ಸೆಳೆಯುವ ವಿದ್ಯಮಾನಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಕಾಂಗ್ರೆಸ್‌ನವರು ಮನೆಗೆ ಬಂದು ಹೋಗಿದ್ದಾರೆ. ಇಂದು ಸಂಜೆ 5 ಗಂಟೆಗೆ ಸೇರ್ಪಡೆಯಾಗುವವನಿದ್ದೆ. ಆದರೆ, ಹಲವರು ನನ್ನನ್ನು ಬಿಡುತ್ತಿಲ್ಲ. ಸದ್ಯ ಬೇಡ; ಮುಂದೆ ನಾವೆಲ್ಲರೂ ಹೋಗೋಣ ಎನ್ನುತ್ತಿದ್ದಾರೆ. –ಲಿಂಗಪ್ಪ ದಢೇಸುಗೂರು ತಾಲೂಕಾಧ್ಯಕ್ಷ, ಜೆಡಿಎಸ್
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.