ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಜೆಸ್ಕಾಂ “ಶಾಕ್’
Team Udayavani, Feb 7, 2021, 12:52 PM IST
ದೇವದುರ್ಗ: ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್ ಸಂರ್ಪಕ ಕಲ್ಪಿಸುವ ಯೋಜನೆ ವಿಳಂಬವಾದ ಕಾರಣ ನಿತ್ಯ ಫಲಾನುಭವಿಗಳು ಜೆಸ್ಕಾಂ ಕಚೇರಿಗೆ ಅಲೆದಾಡುವಂತಾಗಿದೆ. ನೀರಾವರಿ ಸೌಲಭ್ಯ ವಂಚಿತ ಸಣ್ಣ, ಅತಿ ಸಣ್ಣ ಜಮೀನು ಹೊಂದಿದ ರೈತರಿಗೆ ನೀರಿನ ಅನುಕೂಲ ಒದಗಿಸುವ ಉದ್ದೇಶದಿಂದ ಡಾ| ಬಿ.ಆರ್. ಅಂಬೇಡ್ಕರ್, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನೂರಾರು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ನೀಡಲಾಗಿದೆ.
2017ರಿಂದ 2020ವರೆಗೆ ಎಸ್‌ಸಿ 60, ಎಸ್‌ಟಿ 157, ಹಿಂದುಳಿದ ವರ್ಗದ 20ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಜೆಸ್ಕಾಂ ಮತ್ತು ಟೆಂಡರ್ ಗುತ್ತಿಗೆ ಪಡೆದ ಹೈದಾರಾಬಾದ್ ಕಂಪನಿಯೊಂದು ವಿಳಂಬ ಮಾಡುತ್ತಿದೆ. ಹೀಗಾಗಿ ರೈತರು ನಿತ್ಯ ಕಚೇರಿಗೆ ಅಲೆದಾಟ ಮಾತ್ರ ತಪ್ಪುತ್ತಿಲ್ಲ.ಸರಕಾರ ನೀಡುವ ಅನುದಾನವನ್ನು ಕಡ್ಡಾಯವಾಗಿ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬಳಕೆ ಮಾಡಬೇಕು.
ಆದರೆ ಎರಡು ವರ್ಷಗಳಲ್ಲಿ ನೀಡಿದ ಅನುದಾನ ಸದ್ಬಳಕೆಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೊರೆದ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಳೆಗಳು ಹಾಳಾಗುತ್ತಿವೆ ಎಂಬ ಕಾರಣಕ್ಕೆ ಬೇಸಿಗೆ ಅವ ಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಚನೆ ಜೆಸ್ಕಾಂ ಅಧಿಕಾರಿಗಳ ಮಾತಾಗಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಆಗುತ್ತಿದೆ.
ಇದನ್ನೂ ಓದಿ:ಮೊದಲ ಸಾಹಿತ್ಯ ಸಮ್ಮೇಳನ ಮಸ್ಕಿಯ ಹಿರಿಮೆ
ರಾಜ್ಯ ಸರಕಾರ ಪ್ರತಿವರ್ಷ ವಿವಿಧ ನಿಗಮದಿಂದ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ಕೊಳವೆಬಾವಿ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಯೋಜನೆ ಉದ್ದೇಶ ಇಲ್ಲಿ ಬಡುಮೇಲಾಗಿದೆ. ನಿಗಮದಿಂದ ಯೋಜನೆ ಸೌಲಭ್ಯ ಪಡೆದ ನೂರಾರು ರೈತರು ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಸರಕಾರ ಜಾರಿಗೆ ತರುವಂತ ಪ್ರತಿಯೊಂದು ಯೋಜನೆಯನ್ನು ನಿಗ ದಿತ ಅವಧಿ ಯಲ್ಲಿ ಫಲಾನುಭವಿಗಳಿಗೆ ಮುಟ್ಟಿಸಬೇಕು ಎನ್ನುವ ನಿಯಮಗಳು ಜಾರಿಯಾಗುತ್ತಿಲ್ಲ ಎಂದು ರೈತ ಸಂಘಟನೆ ತಾಲೂಕಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.