ದೇವದುರ್ಗ ನ್ಯಾಯಾಲಯ ನಿವೇಶನ ವೀಕ್ಷಿಸಿದ ನ್ಯಾ| ಶಂಕರರಾಮ
Team Udayavani, Jan 25, 2019, 11:13 AM IST
ದೇವದುರ್ಗ: ಪಟ್ಟಣದ ಹೊರವಲಯದ ಅಂಚೆಸೂಗೂರು ರಸ್ತೆ ಮಧ್ಯದಲ್ಲಿ ದೇವದುರ್ಗ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಜಾಗೆಯನ್ನು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ ವೀಕ್ಷಿಸಿದರು.
ಅಂಚೆಸೂಗೂರು ರಸ್ತೆಯಲ್ಲಿನ ಸರ್ವೇ ನಂ: 103ರ ಸುಮಾರು 7 ಎಕರೆ ಜಾಗೆಯಲ್ಲಿ ದೇವದುರ್ಗ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗೆ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಜಾಗೆ ವೀಕ್ಷಿಸಿದ ನ್ಯಾ| ಬೈಲೂರು ಶಂಕರರಾಮ್, ನ್ಯಾಯಾಲಯ ಕಟ್ಟಡ ನಿರ್ಮಾಣದ ನೀಲನಕ್ಷೆ ವೀಕ್ಷಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ ಅವರಿಗೆ ಸೂಚಿಸಿದರು.
ನ್ಯಾಯಾಲಯ ಕಟ್ಟಡದಲ್ಲಿ ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ನಿರ್ಮಿಸಬೇಕು. ಸಿಬ್ಬಂದಿಗಾಗಿ ಪ್ರತ್ಯೇಕ ವಸತಿಗೃಹ ನಿರ್ಮಾಣಕ್ಕೆ ನಿವೇಶನದಲ್ಲಿ ಜಾಗೆ ಗುರುತಿಸಿ ನಕಾಶೆ ತಯಾರಿಸುವಂತೆ ಸೂಚಿಸಿದರು. ನ್ಯಾಯಾಲಯ ಕಟ್ಟಡದ ನಿವೇಶನದ ಗಡಿ ಗುರುತಿಸಿ ದಾಖಲೆ ನೀಡುವಂತೆ ಗ್ರೇಡ್-2 ತಹಶೀಲ್ದಾರ್ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.
ದೇವದುರ್ಗ ಹಿರಿಯ ಶ್ರೇಣಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರಕಾಶ ಚನ್ನಪ್ಪ ಕುರುಬೆಟ್ಟ, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ ಬಿ. ಕುಲಕರ್ಣಿ, ಉಪಾಧ್ಯಕ್ಷ ವೆಂಕಟೇಶ ಡಿ.ಚವ್ಹಾಣ, ಹನುಮಂತ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಮ್ಜದಖಾನ್ ಹವಾಲ್ದಾರ, ನಾಗರಾಜ ನಗರಗುಂಡ, ಖಜಾಂಚಿ ಹನುಮಂತರಾಯ ನಾಯಕ, ಹಿರಿಯ ನ್ಯಾಯವಾದಿ ವಿ.ಎಂ. ಮೇಟಿ, ಪ್ರಕಾಶ ಅಬಕಾರಿ, ಹನುಮಂತರಾಯ ಚಿಂತಲಕುಂಟಾ, ಅಮರೇಶ ಎಂ. ಪಾಟೀಲ, ಶರಣಬಸವ ಎಸ್.ಪಾಟೀಲ, ಬಸನಗೌಡ ದೇಸಾಯಿ, ರಾಘವೇಂದ್ರ ಕೋಲ್ಕಾರ, ಬಿ.ಆರ್.ಮನ್ನಾಪುರಿ, ವೇಣುಗೋಪಾಲಗೌಡ ಜಾಲಹಳ್ಳಿ, ಅಮರೇಗೌಡ ಬೇರಗಿ, ಪ್ರಕಾಶ ಪಾಟೀಲ ಅಮರಾಪುರು, ಸುಕುಮುನಿರೆಡ್ಡಿ ನಗರಗುಂಡ, ಮಲ್ಲಿಕಾರ್ಜುನ ಪಾಟೀಲ ನಾಗಡದಿನ್ನಿ, ರವಿಕುಮಾರ ಪಾಟೀಳ ಅಳ್ಳುಂಡಿ, ಚನ್ನಬಸವ ಗಲಗ ಇತರರು ಇದ್ದರು.
ವಕೀಲರ ಸಂಘದಲ್ಲಿ ಸತ್ಕಾರ: ನಿವೇಶನ ವೀಕ್ಷಿಸಲು ಆಗಮಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ್ ಅವರನ್ನು ದೇವದುರ್ಗ ವಕೀಲರ ಸಂಘದಿಂದ ಪದಾಧಿಕಾರಿಗಳು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.