ಶಿಕ್ಷಣದಿಂದಲೇ ಬದಲಾವಣೆ
ಸರ್ವ ಕ್ಷೇತ್ರದಲ್ಲೂ ಮಹಿಳೆ ಸಾಧನೆಗೋದುತಾಯಿ ಮೊದಲ ಕವಯಿತ್ರಿ
Team Udayavani, Feb 24, 2020, 4:30 PM IST
ಕಲಬುರಗಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದಕ್ಕೆ ಶಿಕ್ಷಣವೇ ಕಾರಣವಾಗಿದೆ ಎಂದು ಕೆಪಿಎಸ್‌ಸಿ ಮಾಜಿ ಸದಸ್ಯ ಡಾ| ನಾಗಾಬಾಯಿ ಬುಳ್ಳಾ ಹೇಳಿದರು.
ಪೂಜ್ಯ ಗೋದುತಾಯಿ ಅವ್ವಾ ಅವರ 49ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಭಾಷಣ, ಗಾಯನ ಮತ್ತು ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಿಳೆ ಈಗ ಸಬಲಳಾಗಿದ್ದಾಳೆ. ಪುರುಷರ ಸರಿಸಮಾನವಾಗಿ ಬೆಳೆದಿದ್ದಾಳೆ. ಬಾಹ್ಯಾಕಾಶ, ರಾಜಕಾರಣ, ಕ್ರೀಡೆ, ವಿಜ್ಞಾನ, ವೈದ್ಯ, ಎಂಜಿನಿಯರ್ ಪ್ರತಿಯೊಂದು ಕ್ಷೇತ್ರಗಳಲ್ಲೂ ಛಾಪು ಮೂಡಿಸಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪ್ರತಿವರ್ಷ ಶೈಕ್ಷಣಿಕ ಫಲಿತಾಂಶದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಓದಿದ ಹೆಣ್ಣುಮಕ್ಕಳಿಗೆ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ ಸಹಜವಾಗಿ ಬರುತ್ತದೆ. ಅವರು ಹೊರ ಪ್ರಪಂಚದಲ್ಲಿ ಯಾವುದೇ ತೊಂದರೆಯಿಲ್ಲದೆ ಜೀವನ ಸಾಗಿಸುತ್ತಾರೆ ಎಂದರು.
ಗೋದುತಾಯಿ ಅವ್ವಾ ಈ ಭಾಗದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಅವರ ಸರಳ ಜೀವನ, ಕಾಳಜಿಯ ಮನಸ್ಸು ಎಂತಹವರನ್ನು ಸೆಳೆಯುವಂತದ್ದು. ಅಂತಹವರ ಪುಣ್ಯಸ್ಮರಣೋತ್ಸವವನ್ನು ಏಳು ದಿನಗಳವರೆಗೆ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜನ ಪ್ರಾಚಾರ್ಯೆ ಡಾ|ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಗೋದುತಾಯಿ ಅವ್ವಾ ಸ್ತ್ರೀ ಕುಲದ ಸಂಕೇತವಾಗಿದ್ದಾರೆ. ಅವರು ಕಲ್ಯಾಣ ಕರ್ನಾಟಕ ಭಾಗದ ಆಧುನಿಕ ಮೊದಲ ಮಹಿಳಾ ಕವಿಯಿತ್ರಿಯಾಗಿದ್ದರು ಎನ್ನುವುದಕ್ಕೆ ಉಲ್ಲೇಖಗಳು ಸಿಗುತ್ತವೆ ಎಂದರು.
ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ|ಶಾಂತಲಾ ನಿಷ್ಠಿ, ಮಹಾವಿದ್ಯಾಲಯ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಪ್ರೊ| ರೇವಯ್ಯ ವಸ್ತ್ರದಮಠ ವೇದಿಕೆಯಲ್ಲಿದ್ದರು. ಡಾ| ಪುಟ್ಟಮಣಿ ದೇವಿದಾಸ ಸ್ವಾಗತಿಸಿದರು, ಡಾ| ಸೀಮಾ ಪಾಟೀಲ ನಿರೂಪಿಸಿದರು, ಪ್ರೊ| ರೇವಯ್ಯ ವಸ್ತ್ರದಮಠ ವಂದಿಸಿದರು. ಡಾ| ಸಿದ್ಧಮ್ಮ ಗುಡೇದ, ಡಾ| ಇಂದಿರಾ ಶೇಟಕಾರ, ಸಾವಿತ್ರಿ ಜಂಬಲದಿನ್ನಿ, ಜಾನಕಿ ಹೊಸೂರ, ಡಾ| ಛಾಯಾ ಭರತನೂರ, ಡಾ| ಎಂ.ಎಸ್. ಪಾಟೀಲ, ಕೃಪಾಸಾಗರ ಗೊಬ್ಬುರ ಹಾಗೂ ವಿವಿಧ ಮಹಾ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.