ನಟಿ -ನಿರ್ದೇಶಕನ ಪ್ರೇಮ ಪ್ರಕರಣಕ್ಕೆ ತಿರುವು; ಗಂಡನ ಮನೆಯಲ್ಲಿ ನಟಿ ವಿಜಯಲಕ್ಷ್ಮಿ ಪ್ರತ್ಯಕ್ಷ
Team Udayavani, Jan 9, 2020, 1:06 PM IST
ರಾಯಚೂರು: ನಟಿ ಹಾಗೂ ಸಹ ನಿರ್ದೇಶಕನ ಪ್ರೇಮ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತಮಗೆ ಜೀವ ಭಯವಿದ್ದು ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ನಟಿ ವಿಜಯಲಕ್ಷ್ಮಿ ನಾನು ಇಷ್ಟಪಟ್ಟು ಮದುವೆಯಾಗಿದ್ದು, ಮನೆಯವರು ನಮ್ಮನ್ನು ಬೇರ್ಪಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಗಂಗಾವತಿಯಲ್ಲಿ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದು, ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡಿ ಎಂದು ಬೇಡಿಕೊಂಡಿದ್ದಾರೆ. ರಾಯಚೂರಿನ ಸಿರವಾರ ಸಮೀಪದ ಹಳ್ಳಿಹೊಸುರು ನನ್ನ ಗಂಡನ ಮನೆ. ಹೀಗಾಗಿ ರಾಯಚೂರು ಎಸ್‍ಪಿ ಡಾ. ಸಿ.ಬಿ ವೇದಮೂರ್ತಿಯವರನ್ನು ಭೇಟಿ ಮಾಡಿ ರಕ್ಷಣೆಗಾಗಿ ಮನವಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ, ನಾವು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇವೆ ಅಂತ ವಿಜಯಲಕ್ಷ್ಮಿ ಹಾಗೂ ಆಂಜಿನಪ್ಪ ಮನವಿ ಮಾಡಿದ್ದಾರೆ.
ನಾನು ಸಹ ನಿರ್ದೇಶಕ ಆಂಜಿನಪ್ಪರನ್ನು ಲವ್ ಮಾಡಿ ಮದುವೆ ಆಗಿದ್ದೇನೆ. ನಾನು ಯಾವ ನಿರ್ಮಾಪಕರ ಬಳಿ ಹಣ ಪಡೆದು ಪರಾರಿಯಾಗಿಲ್ಲ. ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಮ್ಮ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
ನನ್ನ ತಾಯಿ ಈ ರೀತಿ ವಿಷ ಸೇವಿಸುವುದಾಗಿ ಈ ಮುಂಚೆಯೂ ನಾಟಕ ಮಾಡಿದ್ದರು. ನನ್ನ ತಂದೆ-ತಾಯಿ ಬೇರೆಯಾಗಿ 6 ವರ್ಷವಾಗಿದೆ. ನನ್ನ ತಾಯಿ ಮತ್ತು ನನ್ನ ಸಾಕು ತಂದೆ ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ನನಗೆ ಚಿತ್ರ-ವಿಚಿತ್ರ ಹಿಂಸೆ ನೀಡಿದ್ದಾರೆ. ನಾನು ಮದುವೆ ಆಗಿರುವ ವಿಷಯ ತಿಳಿದು ನನ್ನ ಗಂಡನನ್ನು ಸಾಯಿಸಲು ಪ್ಲಾನ್ ಮಾಡಿದ್ದರು ಎಂದು ವಿಜಯಲಕ್ಷ್ಮಿ ದೂರಿದ್ದಾರೆ
ನಾವು ಬರುವಾಗ ಯಾರ ಬಳಿಯೂ ಹಣ, ಒಡವೆಯಾಗಲಿ ತಂದಿಲ್ಲ. ನನ್ನ ತಾಯಿಗೆ ಹಾಗೂ ಸಾಕು ತಂದೆ ಹಣದಾಹಿಗಳಾಗಿದ್ದು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂದೆ ನಾವು ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.