ಕನ್ನಡ ಭಾಷೆ ಜಗತ್ತಿನಲ್ಲೇ ಶ್ರೀಮಂತ; ಡಾ|ಜಯಪ್ರಕಾಶರೆಡ್ಡಿ
ಸಮಾಜ ಕಟ್ಟುವಲ್ಲಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಸಾಹಿತಿಗಳ ನೀಡಿರುವ ಅಪಾರ ಕೊಡುಗೆ
Team Udayavani, Feb 22, 2021, 3:52 PM IST
ಮಾನ್ವಿ: ಕನ್ನಡ ಭಾಷೆ ಮತ್ತು ಸಾಹಿತ್ಯ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತಿಕೆಯ ಹೊಂದುವುದರ ಜತೆಗೆ ಎಲ್ಲಾ ಭಾಷೆಗಳ ಪೈಕಿ 12ನೇ ಸ್ಥಾನ ಪಡೆದಿರುವ
ಕೀರ್ತಿ ನಮ್ಮ ಕನ್ನಡಕ್ಕೆ ಸಲ್ಲುತ್ತದೆ. ಮುಂದೆ ಪ್ರಾರಂಭವಾಗುವ ಶೂದ್ರ ಯುಗವೇ ಸ್ವರ್ಣಯುಗ ಎಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಸರ್ವಾಧ್ಯಕ್ಷ ಡಾ|ಜಯಪ್ರಕಾಶರೆಡ್ಡಿ ಎಸ್.ಪಾಟೀಲ್ ಹೇಳಿದರು.
ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಹೇಳಿದ ನಾಲ್ಕು ಯುಗಗಳಾದ ಬ್ರಾಹ್ಮಣ ಯುಗ, ಕ್ಷತ್ರೀಯ ಯುಗ, ವೈಶ್ಯ ಯುಗ ಹಾಗೂ ಶೂದ್ರ ಯುಗಗಳಲ್ಲಿ ಶೂದ್ರ ಯು ಶ್ರೇಷ್ಠವಾಗಿದ್ದು, ಶ್ರಮಿಕರ, ಬಡವರ, ಕೆಳವರ್ಗದವರ ಕಾಲ ಬರಲಿದೆ ಎಂದರು.
ಕವಿರಾಜ ಮಾರ್ಗದಿಂದ ಆರಂಭಗೊಂಡ ಕನ್ನಡ ಭಾಷೆ, ಸಾಹಿತ್ಯ ನಿರಂತರವಾಗಿ ಬೆಳೆಯುವುದರ ಜೊತೆಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು
ತಿದ್ದುವ ಮೂಲಕ ಸಮಾಜ ಕಟ್ಟುವಲ್ಲಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಸಾಹಿತಿಗಳ ನೀಡಿರುವ ಅಪಾರ ಕೊಡುಗೆ ನೀಡಿದೆ ಎಂದರು.
12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ, ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಮಹಿಳೆಯರಿಗೆ ಪ್ರಾಧಾನ್ಯತೆ, ಕಾಯಕ, ದಾಸೋಹದ
ವಿಚಾರಗಳು ಹಾಗೂ ನ್ಯಾಯಶಾಸ್ತ್ರದ ಬಗ್ಗೆ ತಾವು ರಚಿಸಿರುವ ಕೃತಿಗಳ ತಿಳಿಸಿದ ಡಾ.ಜೆ.ಎಸ್ .ಪಾಟೀಲರು, ಕನ್ನಡ ಸಾರಸ್ವತ ಲೋಕಕ್ಕೆ ಈ ಭಾಗದ
ಹಿರಿಯ ಸಾಹಿತಿಗಳಾದ ಶಾಂತರಸು, ವೀರನಗೌಡ ನೀರಮಾನ್ವಿ, ರಾಜಶೇಖರ ನೀರಮಾನ್ವಿ, ಚನ್ನಬಸ್ಸಪ್ಪ ಬೆಟ್ಟದೂರು, ಅಮರೇಶ ನುಗಡೋಣಿ, ಶರಣೇಗೌಡ
ಯರದೊಡ್ಡಿ, ಡಾ.ಬಸವಪ್ರಭುಪಾಟೀಲ್, ಅಲ್ಲಮ ಪ್ರಭುಪಾಟೀಲ, ಸಾಹಿತಿಗಳನ್ನು ನೆನೆದರು. ಕಾರ್ಯಕ್ರಮ ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಸಮ್ಮೇಳನದ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ, ಶಾಸಕ ಬಸನಗೌಡ ದದ್ದಲ್, ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಫಾ.ಜ್ಞಾನಪ್ರಕಾಶಂ, ಆನ್ವರ್‌ಪಾಷಾ ಉಮ್ರಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಹಂಪಯ್ಯ ನಾಯಕ, ಸಮ್ಮೇಳನದ ಉದ್ಘಾಟಕರಾದ ಡಾ.ಶೀಲಾದಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭು ಪಾಟೀಲ್, ಕಸಾಪ ಅಧ್ಯಕ್ಷ ಮಹ್ಮದ್ ಮುಜೀಬ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರಡ್ಡಿ ಭೋಗಾವತಿ, ಗೌರವ ಕಾರ್ಯದರ್ಶಿ ಬಸವರಾಜ ಭೋಗಾವತಿ ಸೇರಿದಂತೆ
ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.