ಕಿತ್ತೂರು ಚನ್ನಮ್ಮ ವಿಜಯೋತ್ಸವ ಸರಳ


Team Udayavani, Oct 24, 2020, 6:02 PM IST

Rc-tdy-2

ರಾಯಚೂರು: ನಗರದ ರಂಗಮಂದಿರದಲ್ಲಿ ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ಎಂಎಲ್‌ಸಿ ಚುನಾವಣೆ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಲಾ ಬಿ.ನಾಯಕ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷ ಸರ್ಕಾರ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿತ್ತು. ಈ ಬಾರಿ ಕಾರಣಾಂತರಗಳಿಂದ ಸರಳವಾಗಿ ಆಚರಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಧೈರ್ಯದ ಪ್ರತಿರೂಪ. ಇಂದಿನ ಮಹಿಳೆಯರು ಚನ್ನಮ್ಮಳ ಆತ್ಮಸ್ಥೈರ್ಯ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲವನ್ನು ಎದುರಿಸಿ ಬಾಳುವ ಛಲ ತಂದುಕೊಳ್ಳಬೇಕು ಎಂದರು.

ಈ ವೇಳೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ಮುಖಂಡರಾದ ದಾನಮ್ಮ, ಅಂಜಿನಮ್ಮ, ರಂಗಕರ್ಮಿ ವಿ.ಎನ್‌. ಅಕ್ಕಿ ಸೇರಿದಂತೆ ಇತರರಿದ್ದರು.

ಚನ್ನಮ್ಮನ ತತ್ವಾದರ್ಶ ಪಾಲಿಸಿ: ನಾಡಗೌಡ :

ಸಿಂಧನೂರು: ನಗರದಲ್ಲಿ ತಾಲೂಕು ಪಂಚಮಸಾಲಿ ಸಮಾಜ ಹಾಗೂ ತಾಲೂಕು ಯುವ ಘಟಕದಿಂದ ಶುಕ್ರವಾರ ವೀರ ರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಆಚರಿಸಲಾಯಿತು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದವರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಒಬ್ಬಳು. ಚನ್ನಮ್ಮಳ ತತ್ವಾದರ್ಶ, ಸಿದ್ಧಾಂತ ಎಲ್ಲರೂ ಪಾಲಿಸುವಂತೆ ಸಲಹೆ ನೀಡಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕಿತ್ತೂರು ಚನ್ನಮ್ಮ ರಣರಂಗದಲ್ಲಿ ಪ್ರಾಣ ಲೆಕ್ಕಿಸದೇ ವೀರಭೂಮಿಗಾಗಿ ಹೋರಾಡಿದಳು ಎಂದು ಸ್ಮರಿಸಿದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಕೇವಲ ವಿಜಯೋತ್ಸವದಂದು ಕಿತ್ತೂರು ಚನ್ನಮ್ಮನನ್ನು ನೆನಪಿಸಿಕೊಳ್ಳುವುದು ಸರಿಯಲ್ಲ. ಅದರ ಬದಲು ಅವರ ತ್ಯಾಗ-ಬಲಿದಾನ ದಿನವೂ ಸ್ಮರಿಸಬೇಕು ಎಂದರು. ಈ ವೇಳೆ ಜಿಪಂ ಸದಸ್ಯ ಎನ್‌. ಶಿವನಗೌಡ ಗೊರೇಬಾಳ, ಟಿ. ಪಂಪನಗೌಡ, ಎಸ್‌.ಬಸವರಾಜ, ಸಿದ್ರಾಮೇಶ ಮನ್ನಾಪುರ, ವೀರಭದ್ರಪ್ಪ ಗಸ್ತಿ, ಶಿವಕುಮಾರಗೌಡ ಕುರಕುಂದಿ ಇತರರಿದ್ದರು.

ಟಾಪ್ ನ್ಯೂಸ್

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

Raichur; ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

Maski ವಾಹನ ಸವಾರರು ಹೈರಾಣು; ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಒತ್ತಾಯ

12-raichur

Balaganur: ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಇಂದು;ಶ್ರದ್ಧಾ ಭಕ್ತಿಯಿಂದ ಪೂಜೆ, ಚಿಣ್ಣರ ಸಂಭ್ರಮ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Mang-Airport

Mangaluru ವಿಮಾನ ನಿಲ್ದಾಣ:ಅಂತಾರಾಷ್ಟ್ರೀಯ ಕಾರ್ಗೋ ಸೇವೆ ಪ್ರಾರಂಭ

suicide

Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.