ಕೋರಂ ಕೊರತೆ; ಜಿಪಂ ಸಭೆ ಮತ್ತೆ ಮುಂದಕ್ಕೆ
Team Udayavani, Feb 8, 2019, 9:53 AM IST
ರಾಯಚೂರು: ಕೋರಂ ಕೊರತೆಯಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮತ್ತೂಮ್ಮೆ ಮುಂದೂಡಿದ್ದು ಸದಸ್ಯರ ವ್ಯಾಪಕ್ಕೆ ಅಸಮಾಧಾನಕ್ಕೆ ಕಾರಣವಾದರೆ; ಮತ್ತೂಂದೆಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗಳು ಜಿಪಂ ಆಡಳಿತ ವೈಫಲ್ಯ ಕುರಿತು ಸಮಗ್ರ ವರದಿ ನೀಡುವಂತೆ ಸಿಇಒಗೆ ಆದೇಶ ಮಾಡಿದ್ದಾರೆ.
ಈ ಮುಂಚೆ ಸತತ ಮೂರು ಸಭೆಗಳು ಕೋರಂ ಕೊರತೆಯಿಂದ ರದ್ದಾಗಿದ್ದವು. ಆದರೆ, ಕಳೆದ ಸಭೆ ನಡೆಸಲಾಗಿತ್ತು. ಗುರುವಾರ ಹಮ್ಮಿಕೊಂಡ ಸಭೆಯೂ ಕೋರಂ ಕೊರತೆಗೆ ಬಲಿಯಾಯಿತು. 2019ನೇ ಸಾಲಿನ ಮೊದಲ ಸಭೆಯಾದರೂ ನಡೆಯಬಹುದಾ ಎಂಬ ನಿರೀಕ್ಷೆ ಹುಸಿಯಾಯಿತು. ಇದರಿಂದ ಈ ಆಡಳಿತದ ಮೂರು ವರ್ಷದ ಅವಧಿಯಲ್ಲಿ ಎಂಟು ಬಾರಿ ಸಭೆ ಕರೆದಿದ್ದು, ಅದರಲ್ಲಿ ನಾಲ್ಕು ಬಾರಿ ಮುಂದೂಡಿದಂತಾಗಿದೆ.
ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಶುರುವಾಗಬೇಕಿದ್ದ ಸಭೆ 12 ಗಂಟೆಯಾದರೂ ಆರಂಭವಾಗಲಿಲ್ಲ. ಅಧ್ಯಕ್ಷೆ ಸೇರಿದಂತೆ ಯಾವೊಬ್ಬ ಸದಸ್ಯರು ಬರಲಿಲ್ಲ. ಇದರಿಂದ ಸಿಇಒ ನಲೀನ್ ಅತುಲ್ ಕಾದು ಕುಳಿತಿದ್ದರು. 12 ಗಂಟೆ ಬಳಿಕ ಒಬ್ಬರಾದ ಬಳಿಕ ಒಬ್ಬರಂತೆ ಸದಸ್ಯರು ಆಗಮಿಸಿದರು. ಅಧ್ಯಕ್ಷರು ಪಾಲ್ಗೊಂಡ ಸದಸ್ಯರ ಹಾಜರಾತಿ ಪಡೆಯುವಂತೆ ಸೂಚಿಸಿದರು. ಇಂದಿನ ಸಭೆಗೆ ಕೇವಲ 24 ಸದಸ್ಯರು ಮಾತ್ರ ಹಾಜರಾಗಿದ್ದಾರೆ. ಜಿಪಂ ಸಾಮಾನ್ಯ ಸಭೆ ನಡೆಸಲು ಕನಿಷ್ಠ 28 ಸದಸ್ಯರ ಬೆಂಬಲ ಬೇಕಿದ್ದು, ಕೊರಂ ಕೊರತೆ ಎದುರಾಯಿತು. ಹೀಗಾಗಿ ವಿಧಿ ಇಲ್ಲದೇ ಅಧ್ಯಕ್ಷೆ ಆದಿಮನಿ ವೀರಲಕ್ಷಿ ್ಮೕ ಅವರು ಸಭೆ ಮುಂದೂಡಲಾಗಿದೆ ಎಂದು ಘೋಷಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಡಿಸಿದ ಗಬ್ಬೂರು ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಶರಬಣ್ಣ ಸಾಹುಕಾರ, ವಿಧಾನಸಭೆ ಅಧಿವೇಶನದ ವೇಳೆ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಅಧ್ಯಕ್ಷೆ, ಸಿಇಒರನ್ನು ಪ್ರಶ್ನಿಸಿದರು. ಆದರೆ, ಅದಕ್ಕೆ ನಿರುತ್ತರರಾದ ಅಧ್ಯಕ್ಷರು ಅಲ್ಲಿಂದ ನಿರ್ಗಮಿಸಿದರು.
ಜಿಪಂ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಕಳೆದ ಮೂರು ವರ್ಷದ ಅಧಿಕಾರ ಅವಧಿಯಲ್ಲಿ ಎಂಟು ಬಾರಿ ಸಭೆ ಕರೆದಿದ್ದು, ಅದರಲ್ಲಿ 4 ಬಾರಿ ಕೋರಂ ಕೊರತೆಯಿಂದಲೇ ಮುಂದೂಡಿದಂತಾಯಿತು. ಅಧ್ಯಕ್ಷರು ಸದಸ್ಯರೊಂದಿಗೆ ಉತ್ತಮ ಸಮನ್ವಯತೆ ಕಾಯ್ದುಕೊಳ್ಳುತ್ತಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾದಂತಾಯಿತು. ಅಚ್ಚರಿ ಎಂದರೆ ಕಾಂಗ್ರೆಸ್‌ನ ಒಬ್ಬ ಸದಸ್ಯರು ಮಾತ್ರ ಸಭೆಗೆ ಬಂದಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಅಷ್ಟರೊಳಗೆ ಬಾಕಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.