ಹಿರಿಯರ ರಕ್ಷಣೆಗೆ ಹೆಚ್ಚುತ್ತಿದೆ ಕಾನೂನು ಬಲ!
ಸಹಾಯಕ ಆಯುಕ್ತರ ಕಚೇರಿಗೆ ಹೆಚ್ಚುತ್ತಿರುವ ದೂರುಗಳು,ವಾಸ್ತವ ನೆಲೆಗಟ್ಟಿನಲ್ಲಿ ವಿಚಾರಣೆ ನಡೆಸಿ ತೀರ್ಪು
Team Udayavani, Nov 26, 2020, 5:39 PM IST
ರಾಯಚೂರು: ವಯಸ್ಸಾಗುತ್ತಿದ್ದಂತೆ ಹೆತ್ತವರನ್ನು ಕಡೆಗಣಿಸುತ್ತಿದ್ದ ಮಕ್ಕಳಿಗೆ ತಕ್ಕ ಶಾಸ್ತಿ ಕಲಿಸಲೆಂದೇಸರ್ಕಾರ 2007ರಲ್ಲಿ ಹಿರಿಯ ನಾಗರಿಕರ ಪಾಲನೆ, ಪೋಷಣೆ, ರಕ್ಷಣೆ ಕಾಯ್ದೆ ಜಾರಿ ಮಾಡಿತ್ತು. ಇಷ್ಟು ವರ್ಷ ಇದ್ದೂ ಇಲ್ಲದಂತಿದ್ದ ಈ ಕಾಯ್ದೆ ಜಿಲ್ಲೆಯಲ್ಲಿ ಈಚೆಗೆ ಸಮರ್ಪಕವಾಗಿ ಬಳಕೆಯಾಗುತ್ತಿದೆ.
ಸಹಾಯಕ ಆಯುಕ್ತರೇ ಪ್ರಕರಣಗಳ ವಿಚಾರಣೆ ನಡೆಸಿ ನ್ಯಾಯ ಕೊಡಿಸಬಹುದಾಗಿದ್ದು, ಈ ವರ್ಷ 17ದೂರುಗಳು ದಾಖಲಾಗಿವೆ. ಬಹುತೇಕ ದೂರುಗಳು ಆಸ್ತಿ, ಹಣಕಾಸಿನ ವಿಚಾರಕ್ಕೆ ಸಂಬಂಧಿ ಸಿದ್ದಾಗಿರುವುದುಗಮನಾರ್ಹ. 2019ರಲ್ಲಿ ಕೇವಲ 3 ದೂರುಗಳು ಮಾತ್ರಬಂದಿದ್ದವು. ಮಕ್ಕಳಿಂದಲೋ, ಮನೆಯವರಿಂದಲೋತೊಂದರೆಗೆ ಸಿಲುಕುವ 60 ವರ್ಷ ಮೇಲ್ಪಟ್ಟ ಹಿರಿಯನಾಗರಿಕರು ಈ ಕಾಯ್ದೆಯಡಿ ದೂರು ಸಲ್ಲಿಸಿ ನ್ಯಾಯಪಡೆಯಬಹುದು. ಸಹಾಯಕ ಆಯುಕ್ತರೇ ಸಕ್ಷಮಅಧಿ ಕಾರದಡಿ ವಿಚಾರಣೆ ಕೈಗೊಂಡು ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷ 8 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ಉಳಿದ 9ರಲ್ಲಿ ಎರಡು ಪ್ರಕರಣಗಳು ರಾಜಿ ಸಂಧಾನದಡಿ ಇತ್ಯರ್ಥಗೊಂಡರೆ, ಎರಡು ದೂರುಗಳು ತಿರಸ್ಕೃತಗೊಂಡಿವೆ. ಇನ್ನೂ ಐದು ಪ್ರಕರಣಗಳ ಇತ್ಯರ್ಥ ಬಾಕಿಯಿದೆ.
ಆಸ್ತಿಯೇ ಮೂಲ ಕಾರಣ: ತಂದೆ-ತಾಯಂದಿರಿಂದ ಆಸ್ತಿ ಬರೆಯಿಸಿಕೊಳ್ಳುವುದು, ಅವರ ಬಳಿಯಿದ್ದಹಣ ಪಡೆದು ಬಳಿಕ ಅವರನ್ನು ತಾತ್ಸಾರ ಮಾಡುವಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆತ್ತವರಿಂದ ಬಲವಂತದಿಂದ ಆಸ್ತಿ ಪರಭಾರೆ ಮಾಡಿಸಿಕೊಂಡು ಅವರನ್ನು ಹೊರದಬ್ಬುವುದು. ಮಕ್ಕಳು ದುಡಿಯುತ್ತಿದ್ದರೂ ಕುಟುಂಬ ನಿರ್ವಹಣೆಗೆ ಬಿಡಿಗಾಸು ನೀಡದಿರುವಂಥ ದೂರುಗಳು ಬಂದಿವೆ.ಆದರೆ, ಸಾಕಷ್ಟು ಹಿರಿಯ ನಾಗರಿಕರಿಗೆ ತಮಗೆ ಇಂಥದ್ದೊಂದು ಕಾನೂನು ಇದೆ ಎಂಬ ಪರಿಕಲ್ಪನೆಇಲ್ಲದೇ ನರಳುತ್ತಿದ್ದಾರೆ. ಸಹಾಯಕ ಆಯುಕ್ತರ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಂಡರೆ ಅಲ್ಲಿನ ಸಿಬ್ಬಂದಿಯೇ ದೂರು ದಾಖಲಿಸಿಕೊಂಡು ಸಂಬಂ ಧಿಸಿದವರ ವಿಚಾರಣೆ ಕೈಗೊಳ್ಳಲಿದೆ.
ವಾಸ್ತವ ನೆಲೆಗಟ್ಟಿನಲ್ಲಿ ವಿಚಾರಣೆ: ಈ ಪ್ರಕರಣಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಲಾಗುತ್ತಿದೆ. ಪರ-ವಿರೋಧಕ್ಕೆ ವಕೀಲರ ನೇಮಕಕ್ಕೆಅವಕಾಶವಿಲ್ಲದ ಕಾರಣ ಸಹಾಯಕ ಆಯುಕ್ತರೇ ಇಬ್ಬರನ್ನು ಕರೆಯಿಸಿ ವಿಚಾರಣೆ ಮಾಡುತ್ತಾರೆ. ಸತ್ಯಾಸತ್ಯತೆ ಆಧರಿಸಿ ತೀರ್ಪು ನೀಡಲಾಗುತ್ತಿದೆ. ಮಕ್ಕಳ ವಿರುದ್ಧ ಹೆತ್ತವರ ದೂರು ಎಷ್ಟರ ಮಟ್ಟಿಗೆ ಸತ್ಯ, ಅವರ ನೈಜ ಸ್ಥಿತಿ ಏನು ಎಂಬುದನ್ನು ತಳಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕವೇ ಮುಂದಿನ ವಿಚಾರಣೆ ನಡೆಸಲಾಗುತ್ತಿದೆ.
ವ್ಯತಿರಿಕ್ತ ದೂರು ಸಾಧ್ಯತೆ: ಎಲ್ಲ ದೂರುಗಳಲ್ಲಿ ಹೆತ್ತವರ ಆರೋಪವೇ ಅಂತಿಮವಲ್ಲ. ಕೆಲವೊಮ್ಮೆ ವ್ಯತಿರಿಕ್ತ ದೂರುಗಳು ಬರುತ್ತಿವೆ. 80 ವರ್ಷದ ವೃದ್ಧರೊಬ್ಬರು ಮಗನ ವಿರುದ್ಧ ದೂರು ನೀಡಿದ್ದು, ನಿರಾಧಾರ ಆರೋಪಗಳನ್ನು ಮಾಡಿದ ಪ್ರಕರಣ ನಡೆದಿದೆ. ಸಹಾಯಕ ಆಯುಕ್ತರು ವಿಚಾರಣೆ ನಡೆಸಿದಾಗ 80ರ ಹರೆಯದಲ್ಲೂ ಹೆಂಡತಿ ಮೇಲೆ ಶಂಕಿಸುವುದು, ಆಸ್ತಿ ತನ್ನ ಹೆಸರಿಗಿದ್ದರೂ ಮಕ್ಕಳನ್ನು ದೂಷಿಸುವುದು ಗೊತ್ತಾಗಿದೆ. ತಂದೆ ಮಾಡಿದ ಅವಾಂತರಗಳನ್ನು ಕೇಳಿ ತಿಳಿದ ಬಳಿಕ ಪ್ರಕರಣ ರದ್ದು ಮಾಡಲಾಗಿದೆ. ಅಲ್ಲದೇ, ಮಕ್ಕಳು ಬಲವಂತವಾಗಿ ಆಸ್ತಿಯನ್ನು ಉಡುಗೊರೆ ರೂಪದಲ್ಲಿ ಪಡೆದು ಬಳಿಕ ಹೆತ್ತವರನ್ನು ಹೊರದಬ್ಬಿದಲ್ಲಿ ಅಂಥ ಆಸ್ತಿ ನೋಂದಣಿ ರದ್ದುಪಡಿಸುವ ಅವಕಾಶವೂ ಸಹಾಯಕ ಆಯುಕ್ತರಿಗಿದೆ.
ಸಹಾಯಕ ಆಯುಕ್ತರಿಗೆ ಇಂಥದ್ದೊಂದು ಅಧಿಕಾರ ಇರುವ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಸರ್ಕಾರ 2007ರಲ್ಲಿ ಜಾರಿಗೊಳಿಸಿದ ಹಿರಿಯ ನಾಗರಿಕರ ಪಾಲನೆ, ಪೋಷಣೆ, ರಕ್ಷಣೆ ಕಾಯ್ದೆ ಬಗ್ಗೆ ಈಚೆಗೆ ಜಾಗೃತಿ ಮೂಡುತ್ತಿದೆ. ಕಾನೂನು ಪ್ರಕಾರ ತಮಗೆ ಸಿಗಬೇಕಾದ ಗೌರವ, ಹಕ್ಕುಗಳು ಸಿಗುತ್ತಿಲ್ಲವಾದರೆ ಕಚೇರಿಗೆ ಬಂದು ದೂರು ನೀಡಿದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ತಪ್ಪು ಮಾಡಿದಲ್ಲಿ ಸೂಕ್ತ ಎಚ್ಚರಿಕೆ ನೀಡಿ ಮುಚ್ಚಳಿಕೆಬರೆಯಿಸಿಕೊಂಡು ಹೆತ್ತವರಿಗೆ ನ್ಯಾಯ ಒದಗಿಸಲಾಗುವುದು. ತೀಪುì ಉಲ್ಲಂಘಿಸುವವರ ವಿರುದ್ಧ ಅರೆಸ್ಟ್ ವಾರೆಂಟ್ ಕೂಡ ಜಾರಿಗೊಳಿಸಬಹುದು. – ಸಂತೋಷ ಎಸ್. ಕಾಮಗೌಡ ಸಹಾಯಕ ಆಯುಕ್ತ, ರಾಯಚೂರು
-ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.