ವಜ್ಜಲ್-ಪಾಟೀಲ್ಗೆಮತದಾರರಿಂದ ಪಾಠ
Team Udayavani, Jan 22, 2018, 4:43 PM IST
ಲಿಂಗಸುಗೂರು: ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಈಗ ಬಿಜೆಪಿ ಸೇರಿರುವ ಮಾನಪ್ಪ ವಜ್ಜಲ್, ಡಾ| ಶಿವರಾಜ್
ಪಾಟೀಲ್ರಿಗೆ ಮತದಾರರೇ ತಕ್ಕಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.
ಜೆಡಿಎಸ್ ತಾಲೂಕು ಘಟಕದಿಂದ ಪಟ್ಟಣದ ಶಾದಿಮಹಲ್ನಲ್ಲಿ ರವಿವಾರ ನಡೆದ ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ನಾಡಿಗೆ ಅನೇಕ ನಾಯಕರನ್ನು ನೀಡಿದ ಪಕ್ಷ ಜೆಡಿಎಸ್. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಆದರೆ ಪಕ್ಷದಿಂದ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡದೆ ಪಕ್ಷ ತೊರೆದ ಡಾ| ಶಿವರಾಜ ಪಾಟೀಲ್ ಹಾಗೂ ಮಾನಪ್ಪ ವಜ್ಜಲರು ತಾಯಿಗೆ ಮಾಡಿದ ದ್ರೋಹವಾಗಿದೆ. ಜೆಡಿಎಸ್ ಪಕ್ಷ ದೀನ, ದಲಿತ, ಬಡವರ ಪಕ್ಷವಾಗಿದೆ. ದುಡ್ಡಿನ ಅಹಂಕಾರದಿಂದ ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷಿಸಿ ಜನರ ದಿಕ್ಕು ತಪ್ಪಿಸುವ ದ್ರೋಹಿಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಮಾತನಾಡಿ ಪ್ರಜಾಪ್ರಭುತ್ವದ ಚಿಂತನೆ, ರಾಜಕೀಯ ವಿಶ್ಲೇಷಣೆ, ಸಂವಿಧಾನದ ಸಿದ್ಧಾಂತ, ಉದ್ದೇಶ, ಗುರಿಗಳು ಮತ್ತು ಅದರ ಅನುಕೂಲಗಳ ಮಂಥನವಾಗಬೇಕಿದೆ. ಮತದಾನದ ಹಕ್ಕು ಪವಿತ್ರ ಪ್ರಭುದ್ಧತೆಯ ಸಂಕೇತವಾಗಿದೆ. ರಾಜ್ಯದಲ್ಲಿ ಕೇವಲ 20 ತಿಂಗಳು ಅಧಿಕಾರ ನಡೆಸಿದ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಯಾವ ಮುಖ್ಯಮಂತ್ರಿಯಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಂಬುನಾಥ ಯಾದವ, ಜಿಲ್ಲಾ ವಕ್ತಾರ ಅಕºರ್ ಹುಸೇನ್, ಜಿಪಂ ಸದಸ್ಯರಾದ
ಸಂಗಣ್ಣ ದೇಸಾಯಿ, ಬಸನಗೌಡ ಕಂಬಳಿ, ತಾಪಂ ಸದಸ್ಯ ಭೀಮಣ್ಣ ಹುನಕುಂಟಿ, ಮುಖಂಡರಾದ ನಂದೇಶ ನಾಯಕ, ಇಮಿಯಾಜ್, ಖಾಜಾಹುಸೇನ, ಅಮೀರಬೇಗ್, ಹುಸೇನ್ ಪಾಷಾ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.