ಕ್ವಾರಂಟೈನ್ ಕೇಂದ್ರಕ್ಕೆ ಸೌಲಭ್ಯ; ಬಿಲ್ ಪಾವತಿಸಲು ಮನವಿ
Team Udayavani, Jun 10, 2020, 12:25 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಿಂಗಸುಗೂರು: ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರಿಗೆ ಊಟದ ವ್ಯವಸ್ಥೆ ಸೇರಿ ಮೂಲ ಸೌಲಭ್ಯಗಳಿಗೆ ಖರ್ಚು ಮಾಡಿದ ಹಣದ ಬಿಲ್ ಪಾವತಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಮನವಿ ಸಲ್ಲಿಸಿದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳಿಗಾಗಿ ಹಣ ಖರ್ಚು ಮಾಡಲಾಗಿದೆ. ಆದರೆ ಈವರೆಗೆ ತಹಶೀಲ್ದಾರರು ಹಣ ಪಾವತಿ ಮಾಡಿಲ್ಲ. ತಕ್ಷಣವೇ ಬಿಲ್ ಪಾವತಿಸಬೇಕು. ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಕೋವಿಡ್ ತಡೆಗೆ ಸಮೂಹ ಜಾಗೃತಿ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡು ಜನರಲ್ಲಿ ಅರಿವು ಮೂಡಿಸಿದ್ದಾರೆ. ಆದರೂ ಕೂಡಾ ಅನ್ಯ ಇಲಾಖೆಗಳ ಅಧಿಕಾರಿಗಳು ವಿನಾಕಾರಣ ಆರ್ ಡಿಪಿಆರ್ ಅಧಿಕಾರಿಗಳು ಹಾಗೂ ನೌಕರರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದನ್ನು ಸಂಘ ಖಂಡಿಸುತ್ತದೆ. ಎಲ್ಲ ಇಲಾಖೆಗಳಿಗೆ ಕೋವಿಡ್-19 ಕೆಲಸಗಳನ್ನು ಸ್ಪಷ್ಟವಾಗಿ ಹಂಚಿಕೆ ಮಾಡಿ, ಅದನ್ನು ಆರ್‌ಡಿಪಿಆರ್ ಗೆ ವಹಿಸುವ ಕೆಲಸಗಳನ್ನು ಮಾಡಲು ಸಿದ್ಧರಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆರ್‌ಡಿಪಿಆರ್ ಅಧಿಕಾರಿಗಳು ಹಾಗೂ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾವ್ ನಾಯಕ, ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯಕ, ತಾಲೂಕು ಅಧ್ಯಕ್ಷೆ ಶೋಭಾರಾಣಿ, ಪದಾಧಿ ಕಾರಿಗಳಾದ ಸೋಮನಗೌಡ ಪಾಟೀಲ, ಬಸವರಾಜ ಶೆಟ್ಟಿ, ಮಂಜುನಾಥ, ಜ್ಯೋತಿರಾಣಿ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.