Mantralayam: ಅತೀ ಎತ್ತರದ ಶ್ರೀರಾಮನ ಪ್ರತಿಮೆಗೆ ಶಂಕು ಸ್ಥಾಪನೆ
ವರ್ಚುವಲ್ ಆಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ
Team Udayavani, Jul 24, 2023, 7:10 AM IST
ರಾಯಚೂರು: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ಮಂತ್ರಾಲಯದ ಸಮೀಪ ವಿಶ್ವದ ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ರವಿವಾರ ಅಡಿಗಲ್ಲು ಹಾಕಲಾಗಿದೆ.
ಪ್ರಭು ಶ್ರೀರಾಮಚಂದ್ರನ 108 ಅಡಿ ಎತ್ತರದ ಬೃಹತ್ ಪಂಚಲೋಹ ಪ್ರತಿಮೆ ನಿರ್ಮಾಣದ ಶಂಕು ಸ್ಥಾಪನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಆಗಿ ಭಾಗವಹಿಸಿ ಶುಭ ಹಾರೈಸಿದ್ದಾರೆ. ಈಗಾಗಲೇ ಮಂತ್ರಾಲಯ ಮಠದಿಂದ 52 ಅಡಿಗಳ ಕಲ್ಲಿನ ಪ್ರತಿಮೆ ಸ್ಥಾಪನೆಯಾಗಿದ್ದು, ಅದರ ಜತೆ ಮಂತ್ರಾಲಯದಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿಮತ್ತೊಂದು ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳ್ಳಲಿದೆ. ಜೈ ಶ್ರೀರಾಮ ಫೌಂಡೇಶನ್‌ನಿಂದ ಈ ಪ್ರತಿಮೆ ಯನ್ನು ನಿರ್ಮಿಸಲಾಗುತ್ತಿದೆ.
ಈಗಾಗಲೇ ನಿರ್ಮಿಸಿರುವ 52 ಅಡಿಯ ಅಭಯಾಂಜನೇಯ ಸ್ವಾಮಿ ಮೂರ್ತಿ ಎದುರಿನ ಪ್ರದೇಶದಲ್ಲೇ ಶ್ರೀ ರಾಮನ ಪ್ರತಿಮೆ ನಿರ್ಮಿಸಲಾಗುತ್ತದೆ. ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರತೀರ್ಥರು ಭೂಮಿಪೂಜೆ ನೆರವೇರಿಸಿದರು. ಬಳಿಕ ಜರಗಿದ ಕಾರ್ಯಕ್ರಮದಲ್ಲಿ ಅಮಿತ್ ಶಾ ವರ್ಚುವಲ್ ಆಗಿ ಭಾಗಿಯಾಗಿ ಮಾತನಾಡಿದರು.
ಮಂತ್ರಾಲಯದಲ್ಲಿ ಪ್ರಭು ಶ್ರೀರಾಮನ 108 ಎತ್ತರದ ಪಂಚಲೋಹದ ಪ್ರತಿಮೆ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಸನಾತನ ಧರ್ಮವನ್ನು ಪ್ರತಿನಿಧಿ ಸಲಿದೆ. ದೇಶ-ವಿದೇಶಗಳಲ್ಲಿ ವೈಷ್ಣವ ಪರಂಪರೆ ಬೆಳಗಲಿದೆ. ಹಿಂದೂ ಸಂಸ್ಕೃತಿಯಲ್ಲಿ 108 ಸಂಖ್ಯೆ ಅತ್ಯಂತ ಪವಿತ್ರ. ಇಂಥ ಮಹೋನ್ನತ ಕಾರ್ಯಕ್ಕೆ ಮುಂದಾಗಿರುವ ಮಂತ್ರಾಲಯದ ಮಠದ ಶ್ರೀಗಳ ಚಿಂತನೆ ಶ್ಲಾಘನೀಯ. ಇಂಥ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಮಿತ್ ಶಾ ಅವರು ಹೇಳಿದರು.
ಇದು ಬಹುಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಎರಡೂವರೆ ವರ್ಷಗಳಲ್ಲಿ ಮುಗಿಸುವ ಗುರಿ ಹೊಂದಿದ್ದಾಗಿ ಶ್ರೀಗಳು ತಿಳಿಸಿದ್ದಾರೆ ಎಂದರು.
ಬಳಿಕ ಅನುಗ್ರಹ ಸಂದೇಶ ನೀಡಿದ ಶ್ರೀಮಠದ ಪೀಠಾ ಧಿಪತಿ ಡಾ| ಸುಬುಧೇಂದ್ರತೀರ್ಥರು, ಶ್ರೀರಾಮ ದಂಡಕಾರಣ್ಯ ವಾಸ ದಲ್ಲಿದ್ದಾಗ ಅವನ ಪಾದಸ್ಪರ್ಶದಿಂದ ಈ ಪ್ರದೇಶ ಪವಿತ್ರಗೊಂಡಿದೆ. ಅವನು ಕುಳಿತಿದ್ದ ಶಿಲೆಯಲ್ಲಿಯೇ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ನಿರ್ಮಿಸ ಲಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧ್ಯದೈವರಾದ ಶ್ರೀ ರಾಮಚಂದ್ರನ 108 ಅಡಿ ಎತ್ತರದ ಮೂರ್ತಿ ನಿರ್ಮಿಸುವ ಉದ್ದೇಶ ಇದೆ. ಸುತ್ತಲೂ ಉದ್ಯಾನವನ ಹಾಗೂ ಸನಾತನ ಧರ್ಮ, ಸಂಸ್ಕೃತಿಯನ್ನು ಬಿಂಬಿಸುವ ಕಟ್ಟಡ ನಿರ್ಮಿಸುವ ಯೋಜನೆ ಇದೆ ಎಂದರು.
ನಿರ್ಮಾಣ:ಜೈ ಶ್ರೀರಾಮ ಫೌಂಡೇಶನ್
ಸ್ಥಳ: ಮಂತ್ರಾಲಯದಿಂದ ಎಮ್ಮಿಗನೂರಿಗೆ ಹೋಗುವ ಮಾರ್ಗದಲ್ಲಿ
ರಚನೆ: ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಬೃಹತ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮಹಾಂಜಿ ಸುತಾರ್‌ಗೆ ಜವಾಬ್ದಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.