ನಿರ್ವಹಣೆ ಕೊರತೆಯಿಂದ ಯಂತ್ರಗಳು ನಿರುಪಯುಕ್ತ
Team Udayavani, Mar 16, 2022, 4:42 PM IST
ದೇವದುರ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆಗಳ ವೈಜ್ಞಾನಿಕ ಬೆಲೆ ನಿಗದಿಗಾಗಿ 65ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ತೂಕದ ಯಂತ್ರಗಳು ಸದ್ಬಳಕೆ ಆಗದೇ ತುಕ್ಕು ಹಿಡಿದಿವೆ.
ಶನಿವಾರ ವಾರದ ಸಂತೆ ದಿನ ಕುರಿ-ಮೇಕೆಗಳ ತೂಕವೇ ನಡೆಯುವುದಿಲ್ಲ. ಬಾಯಿಗೆ ಬಂದಂತೆ ಕುರಿ, ಮೇಕೆಗೆ ದರ ನಿಗದಿ ಮಾಡಲಾಗುತ್ತಿದೆ. ಕುರಿ, ಮೇಕೆ ವ್ಯಾಪಾರ-ವಹಿವಾಟು ಕುರಿ ಮತ್ತು ಉಣ್ಣೆ ನಿಗಮಕ್ಕೆ ಟೆಂಡರ್ ಆಗಿದ್ದು, ಅದರ ನಿರ್ವಹಣೆಯನ್ನೂ ನಿಗಮಕ್ಕೆ ವಹಿಸಲಾಗಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ವಹಿವಾಟನ್ನು ಪ್ರತಿವರ್ಷ ರಾಯಚೂರು ಎಪಿಎಂಸಿಗೆ ವಿಲೀನ ಮಾಡಲಾಗುತ್ತಿರುವುದರಿಂದ ಇಲ್ಲಿ ಯಾವುದೇ ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟು ನಡೆಯುವುದಿಲ್ಲ. ಹೀಗಾಗಿ ಪ್ರತಿ ಶನಿವಾರ ಎತ್ತು, ಕುರಿ, ಮೇಕೆ, ಕೋಳಿ ಸಂತೆಗೆ ಮಾತ್ರ ಎಪಿಎಂಸಿ ಸೀಮಿತವಾದಂತಾಗಿದೆ. ಹೀಗಾಗಿ ವ್ಯಾಪಾರ-ವಹಿವಾಟು ಸ್ಥಗಿತವಾಗಿದ್ದರಿಂದ ಲಕ್ಷಾಂತರ ರೂ.ವೆಚ್ಚ ಭರಿಸಿ ಅಳವಡಿಸಿದ ಯಂತ್ರಗಳು ತುಕ್ಕು ಹಿಡಿಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.