ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ
Team Udayavani, Jan 9, 2022, 5:30 PM IST
ಸಿಂಧನೂರು: ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಶುಕ್ರವಾರ ಬಲೆಗೆ ಕೆಡವಿದ್ದಾರೆ.
ಕೋಲಾರ ಜಿಲ್ಲೆಯ ಅರಕುಂಟಿ ಗ್ರಾಮದ ನಾರಾಯಣಸ್ವಾಮಿ (41) ಎಂಬಾತ ಬಂಧಿತ. ಈತನ ಬಳಿ 20 ಎಟಿಎಂ ಕಾರ್ಡ್‌ಗಳು ದೊರಕಿವೆ. 40 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿ ಸಂಗನಗೌಡ ಎಂಬಾತ ನಿರಂತರ ನಿಗಾ ಇಟ್ಟು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬೆನ್ನತ್ತಿ ನೀಡಿದ ಸುಳಿವು ಆಧರಿಸಿ ಈ ಪ್ರಕರಣ ಬಯಲಿಗೆಳೆಯಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಏನಿದು ವಂಚನೆ ತಂತ್ರ?
ಎಲ್ಲ ಬ್ಯಾಂಕ್‌ನ ಎಟಿಎಂಗಳನ್ನು ಹೋಲುವ ಕಾರ್ಡ್ ಜತೆಗೆ ಇಟ್ಟುಕೊಂಡು ಎಟಿಎಂನೊಳಗೆ ಹೋಗುವ ವಂಚಕರು, ಅನಕ್ಷರಸ್ಥರು, ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಪಿನ್ ನಂಬರ್ ಒತ್ತಿ, ನಂತರ ಬೇರೆ ಆಪ್ಷನ್ ಬಳಸಿ ಹಣ ಬಂದಿಲ್ಲವೆಂದು ಅದೇ ಬಣ್ಣದ ಕಾರ್ಡ್ ಬದಲಿಸಿ ಕೊಡುತ್ತಿದ್ದರು. ಬಳಿಕ ಬೇರೆ ಎಟಿಎಂಗಳಿಗೆ ತೆರಳಿ ದಿಢೀರ್ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಹತ್ತಾರು ಜನರು ಇಂತಹ ವಂಚನೆ ಬಲೆಗೆ ಬಿದ್ದರೂ ಕಳ್ಳರನ್ನು ಹಿಡಿಯುವುದು ದುಸ್ತರವಾಗಿತ್ತು.
ತನಿಖಾ ತಂಡ ರಚನೆ
ಇಂತಹ ಪ್ರಕರಣದ ವಿಷಯದಲ್ಲಿ ಯಾರಿಗೆ ದೂರಬೇಕೆಂಬ ಗೊಂದಲಕ್ಕೆ ಬೀಳುತ್ತಿದ್ದ ಜನ ಬೇಸರ ವ್ಯಕ್ತಪಡಿಸುತ್ತಿದ್ದರು. ಇದನ್ನು ಬೇಧಿಸಲು ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಪ್ರೋಬೆಷನರಿ ಡಿವೈಎಸ್ಪಿ ಆರ್.ಲಕ್ಷ್ಮೀಕಾಂತ್, ಸಿಪಿಐ ಉಮೇಶ್ ಕಾಂಬಳೆ, ಪಿಎಸ್‌ಐ ಸೌಮ್ಯ, ಸಿಬ್ಬಂದಿ ಸಂಗನಗೌಡ, ಆದಯ್ಯ, ಅನಿಲ್ ಕುಮಾರ್, ಚಾಂದಾಪಾಷಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಇವರು ತನಿಖೆ ನಡೆಸಿ ಎಟಿಎಂ ಕಾರ್ಡ್ ಬದಲಿಸುವ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಆಸಕ್ತಿ ತೋರಿದ ಪೊಲೀಸರು
ಅಮಾಯಕರ ಎಟಿಎಂ ಕಾರ್ಡ್ ಬದಲಿಸಿ ವಂಚನೆ ಮಾಡುತ್ತಿದ್ದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದವು. ಇದೇ ಮೊದಲ ಬಾರಿಗೆ ಅಂತಹ ಒಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ನೀಡುವುದಕ್ಕೆ ಆಯಾ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಅವಕಾಶ ಇರಲಿಲ್ಲ. ಅವರು ಮೇಲಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆಯುವಷ್ಟರಲ್ಲಿ ವಾರ ಹಿಡಿಯುತ್ತಿತ್ತು. ಬಳಿಕ ತನಿಖೆ ನಡೆಸಬೇಕಿತ್ತು. ಇಂತಹ ವಿಳಂಬ ಕಾರಣಕ್ಕೆ ಬಹುತೇಕರು ದೂರು ನೀಡದೇ ಉಳಿಯುತ್ತಿದ್ದರು. ಈ ಬಾರಿ ಪ್ರಕರಣ ಬೇಧಿಸುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.