ಮಾನ್ವಿ: ಗಾಂಜಾ ಬೆಳೆ ಪತ್ತೆ ಹಚ್ಚಿದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ
Team Udayavani, Sep 10, 2022, 5:35 PM IST
ಮಾನ್ವಿ: ತಾಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿನ ಹತ್ತಿ ಬೆಳೆ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾವನ್ನು ಜಪ್ತಿ ಮಾಡಿಕೊಂಡು ಅರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವಲಯ ಅಬಕಾರಿ ನಿರೀಕ್ಷಕ ಬಸವರಾಜ ಕಾಕರಗಲ್ ತಿಳಿಸಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ತಾಲೂಕಿನ ಜಾಗೀರ ಪನ್ನೂರು ಗ್ರಾಮದಲ್ಲಿ ಹುಚ್ಚಪ್ಪ ಎಂಬುವವರ ಹತ್ತಿಯ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಲಾಗಿ ಜಮೀನಿನಲ್ಲಿ 17.180 ಕೆಜಿ ಅಂದಾಜು 2 ಲಕ್ಷ ಮೌಲ್ಯದ 42 ಹಸಿ ಗಾಂಜಾ ಗಿಡಗಳನ್ನು ಹಾಗೂ ಸಂಸ್ಕರಿಸಿದ 112 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು
ಅಬಕಾರಿ ನಿರೀಕ್ಷಕರಾದ ಕವಿತಾ, ನಾಗಣ್ಣ, ಉಪ ನಿರೀಕ್ಷಕರಾದ ಶಿವಲಿಂಗ ಸ್ವಾಮಿ, ಈರಮ್ಮ ಹಾಗೂ ಅಬಕಾರಿ ಪೇದೆಗಳಾದ ಆಂಜೀನೆಯ್ಯ, ವೆಂಕೋಬ, ಮೂರ್ತಿ, ನಿಂಗಪ್ಪ, ಶಿವಾನಂದ, ಮಹಿಬೂಬ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.