ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

ಸರ್ವಿಸ್‌ ರಸ್ತೆಯಲ್ಲೇ ಪಾರ್ಕಿಂಗ್‌: ವಾಹನ ಸವಾರರ ಪರದಾಟ

Team Udayavani, Oct 18, 2024, 1:15 PM IST

9-maski

ಮಸ್ಕಿ: ಸ್ಥಳೀಯ ವಾಹನ ಸವಾರರು ಸುಗಮವಾಗಿ ಓಡಾಡಲು ಅನುಕೂಲವಾಗಲೆಂದು ಸರ್ಕಾರ ಕೋಟ್ಯಾಂತರ ರೂ. ವ್ಯಯಿಸಿ ಡಿವೈಡರ್‌, ಚರಂಡಿ ಹಾಗೂ ಸರ್ವಿಸ್‌ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಬಸ್‌ ಸರ್ವಿಸ್‌ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಟಂಟಂ, ಟ್ಯಾಕ್ಸಿಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಸುಗಮವಾಗಿ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.

ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಸುಮಾರು ರೂ.10 ಕೋಟಿ ವೆಚ್ಚದಲ್ಲಿ ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ 2 ಬದಿಯಲ್ಲಿ ಸರ್ವಿಸ್‌ ರಸ್ತೆ ಮಾಡಲಾಗುತ್ತಿದೆ. ರಸ್ತೆ ನಿರ್ಮಿಸಲು ಮುಂಚಿತವಾಗಿ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಬೇಕಾದ ಅಗತ್ಯ ಸಿದ್ದತೆ ಕೈಗೊಳ್ಳದೇ ಇರುವುದರಿಂದ ಎಡವಟ್ಟಾಗಿದ್ದು ಜನರಿಗೆ ತಲೆ ನೋವಾಗಿ ಪರಿಣಿಮಿಸಿದೆ.

ರಸ್ತೆಯಲ್ಲೇ ಪಾರ್ಕಿಂಗ್:‌ ಪಟ್ಟಣದ ಜನತೆ ಸುಗಮವಾಗಿ ಓಡಾಡಲು ಹೆದ್ದಾರಿಯ ಎರಡು ಬದಿಯಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಲಾಗಿದ್ದು, ಆದರೆ ಪಟ್ಟಣಕ್ಕೆ ಬರುವ ಜನರು ಹಾಗೂ ವಿವಿಧ ಕೆಲಸಕ್ಕೆ ಅಂಗಡಿಗಳಿಗೆ ಬರುವ ಜನರು ಸರ್ವಿಸ್‌ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದು, ಹಳೆ ಬಸ್‌ ನಿಲ್ದಾಣದ ಬಳಿ ವಾಹನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಗಡಗಿ ಖಾನಾವಳಿಗೆ ಜನರು ಊಟಕ್ಕೆ ತೆರಳಿದರೆ ತಾಸು ಗಟ್ಟಲೇ ಜನರು ಪರದಾಡುವಂತಾಗಿದೆ.

ಅಶೋಕ ವೃತ್ತ, ಹಳೇ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಸರ್ವಿಸ್‌ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಇನ್ನೂ ವಾಲ್ಮೀಕಿ ವೃತ್ತದ ಬಳಿ ಜಾಗದ ಮಾಲೀಕರೊಬ್ಬರು ಹೈಕೋರ್ಟ್‌ನಿಂದ ತಡೆ ತಂದಿರುವುದರಿಂದ ಬಳಗನೂರು ರಸ್ತೆಯ ಕಡೆ ಸರ್ವಿಸ್‌ ರಸ್ತೆ ಇನ್ನೂ ಆಗಿಲ್ಲ. ಅ.20 ರಂದು ಹೈಕೋರ್ಟ್ ನಲ್ಲಿ ವಿಚಾರಣೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎನ್ನಲಾಗಿದೆ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಡಿವೈಡರ್‌ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕಿರುವ ಅಧಿಕಾರಿಗಳು‌ ಯಾವುದೇ ರೀತಿ ಕ್ರಮ ಕೈಗೊಳ್ಳದ್ದರಿಂದ ಡಿವೈಡರ್‌, ಸರ್ವಿಸ್‌ ರಸ್ತೆ ಕಾಮಗಾರಿ ವಿಳಂಬವಾಗಿದೆ. ರಸ್ತೆ ಕಾಮಗಾರಿ ಕೈಗೊಳ್ಳುವುದಕ್ಕೆ ವಿದ್ಯುತ್‌ ಕಂಬಗಳು ಹಾಗೂ  ಪ್ರಮುಖ ವೃತ್ತಗಳಲ್ಲಿನ ಪ್ರತಿಮೆ ತೆರವುಗೊಳಿಸಬೇಕು. ಸರ್ವಿಸ್‌ ರಸ್ತೆಗೆ ಅಂಟಿಕೊಂಡಿರುವ ಕೆಲ ಕಟ್ಟಡಗಳನ್ನು ತೆರವುಗೊಳಿಸಬೇಕು. ಇದ್ಯಾವುದನ್ನೂ ಮಾಡದೇ ಹೆದ್ದಾರಿ ಪ್ರಾಧಿಕಾರಿಗಳು ವಿನಾಃಕಾರಣ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ವಿಳಂಬವಾಗುತ್ತಿರುವ ಕಾಮಗಾರಿಯನ್ನು ಬೇಗನೆ ಮುಗಿಸಬೇಕು. ಸರ್ವಿಸ್‌ ರಸ್ತೆಯಲ್ಲಿ ನಿಲ್ಲಿಸುತ್ತಿರುವ ವಾಹನಗಳಿಗೆ ಕಡಿವಾಣ ಹಾಕಬೇಕು. ಆಟೋ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಸ್ಕಿ ಪಟ್ಟಣದ ಡಿವೈಡರ್‌, ಸರ್ವಿಸ್‌ ರಸ್ತೆ ಕಾಮಗಾರಿಯ ಸಂಬಂಧ ಜಾಗದ ಮಾಲೀಕರೊಬ್ಬರು ಹೈಕೋರ್ಟ್‌ನಿಂದ ಸ್ಟೇ ತಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಅ.20 ರಂದು ಹೈಕೋರ್ಟಿನಲ್ಲಿ ಸ್ಟೇ ವಿಚಾರಣೆ ಮುಗಿದ ಬಳಿಕ ಪುರಸಭೆಯವರು ಪೊಲೀಸ್‌ ಇಲಾಖೆ ಸಹಕಾರದಿಂದ ರಸ್ತೆ ಮೇಲಿನ ಕಟ್ಟಡ ತೆರವುಗೊಳಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನಂತರ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಲಾಗುವುದು. – ಭೀಮನಗೌಡ ಬೀರದಾರ, ಎಇಇ, ಹೆದ್ದಾರಿ ಪ್ರಾಧಿಕಾರ ಹುನಗುಂದ.‌

 

ಟಾಪ್ ನ್ಯೂಸ್

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqew-e

Raichur; ಒಳ ಮೀಸಲಾತಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

3-maski

Maski: ಮಾಂಸದೂಟ ಸೇವಿಸಿ ಮೂವರು ಅಸ್ವಸ್ಥ

1-trfff

Sirwar; ಭೀಕರ ಅಪಘಾ*ತ; ಮೂವರು ಸ್ಥಳದಲ್ಲೇ ಸಾ*ವು

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

12-bng

Bengaluru: ಜೂಜಾಟದಿಂದ ಮಾಡಿದ್ದ ಭಾರೀ ಸಾಲ ತೀರಿಸಲು ಮನೆ ಕಳ್ಳತನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

11-bng

Bengaluru: ಉದ್ಯಮಿ ಮನೆಯಲ್ಲಿ 1.22 ಕೋಟಿ ಚಿನ್ನ ಕಳವು; ಇಬ್ಬರ ಸೆರೆ

6

Kundapura: ಮರವಂತೆ ಮಾರಸ್ವಾಮಿ ಸ್ಟಾಪ್‌ನಲ್ಲಿ ನಿಲ್ಲದ ಸರಕಾರಿ ಬಸ್‌!

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.