Mantralayam; ಸಿದ್ದರಾಮಯ್ಯರೂ ರಾಮನ ಆದರ್ಶ, ಜನಾನುರಾಗ ಪಡೆಯಲಿ: ಸುಬುಧೇಂದ್ರ ತೀರ್ಥರು
Team Udayavani, Jan 2, 2024, 2:56 PM IST
ರಾಯಚೂರು: ಸಿಎಂ ಸಿದ್ದರಾಮಯ್ಯನವರು ಶ್ರೀರಾಮನ ಹೆಸರಿಟ್ಟುಕೊಂಡಿದ್ದಾರೆ. ಆದ್ದರಿಂದ ಅವರೂ ಶ್ರೀರಾಮನ ಆದರ್ಶ, ಜನಾನುರಾಗ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಭು ಶ್ರೀರಾಮ ಎಲ್ಲ ರೀತಿಯಿಂದಲೂ ಆದರ್ಶನೀಯ, ಅನುಕರಣನೀಯ. ಶ್ರೀ ರಾಮನ ಹೋಲಿಕೆ ಮತ್ತೊಬ್ಬರಿಗೆ ಮಾಡುವುದು ಸರಿಯಲ್ಲ ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಯಾವುದೇ ದೇಶವಿದ್ರೋಹದ ಕೆಲಸವಾಗಲಿ, ಸಮುದಾಯಗಳ ನಡುವಿನ ಸಂಘರ್ಷವಾಗಲಿ ಅಲ್ಲ. ಅಲ್ಲಿ ಮಂದಿರ ನಿರ್ಮಿಸುವುದು ನಮ್ಮೆಲ್ಲರ ಹಕ್ಕು. ದೇವಸ್ಥಾನ ಉದ್ಘಾಟನೆ ದಿನ ಇಡೀ ವಿಶ್ವಕ್ಕೆ ಶಕ್ತಿದಾಯಕ ದಿನವಾಗಲಿದೆ. ಬಾಲರಾಮನ ವಿಗ್ರಹ ಮತ್ತು ಶಿಲ್ಪಿ ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ಬಂದಿದೆ. ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹೊಂದಿಸಿಕೊಂಡು ಪಾಲ್ಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಹೋಗಲಾರದವರು ಇರುವಲ್ಲಿಂದಲೇ ಪ್ರಾರ್ಥನೆ, ಪೂಜೆ ಸಲ್ಲಿಸಬೇಕು. ಅವರವರ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.