ಕಾಂಗ್ರೆಸ್‌ನಿಂದ ಸದಸ್ಯತ್ವ ನೋಂದಣಿ ಅಭಿಯಾನ
Team Udayavani, Feb 15, 2022, 4:43 PM IST
ಸಿಂಧನೂರು: ಇದು ಈಗಾಗಲೇ ಚುನಾವಣೆ ವರ್ಷ. ಈಗಿನಿಂದಲೇ ಪ್ರತಿಯೊಬ್ಬರೂ ತಯಾರಿ ನಡೆಸಬೇಕು. ಅಂತಿಮವಾಗಿ ಜನರೇ ತೀರ್ಪು ಕೊಡುತ್ತಾರೆ. ಈ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು. ಬಿಜೆಪಿ ಸರಕಾರ ಹೀಗೆ ಮುಂದುವರಿದರೆ, ಇಡೀ ದೇಶ ಇನ್ನೊಂದು 20 ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. ಈಗಾಗಲೇ ಜನರಿಗೆ ಗೊತ್ತಾಗಿದೆ. ಅವರ ಬಳಿ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ. ಅಧಿಕಾರಕ್ಕೆ ಬರಬೇಕಾದರೆ, ಮಾಡಬೇಕಾದ ಅಜೆಂಡಾವೇ ಅವರದ್ದು. ಇದನ್ನು ಜನ ಗಮನಿಸಿದ್ದಾರೆ ಎಂದರು.
ನನ್ನ 36 ವರ್ಷದ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಸರಕಾರ ಇದ್ದಾಗ ಸಿಕ್ಕಷ್ಟು ಅನುದಾನ ಯಾವತ್ತೂ ಸಿಗಲಿಲ್ಲ. ಅದರ ಪರಿಣಾಮವಾಗಿ ಇಡೀ ಸಿಂಧನೂರು ಚಿತ್ರಣವೇ ಬದಲಾಗಿದೆ. ಬರೀ 5 ವರ್ಷದಲ್ಲಿ ಇದು ಸಾಧ್ಯವಾಗಿದೆ. ಹಿಂದೆ-ಇಂದು ಸಿಂಧನೂರು ಎಷ್ಟು ಬದಲಾಗಿದೆ ಎಂಬುದನ್ನು ಗಮನಿಸಬೇಕು. ಸಿದ್ದರಾಮಯ್ಯ ಅವರ ಕಾಲದಲ್ಲಿ ಕಾಲೇಜು ಬಂದವು, ಪಿಜಿ ಸೆಂಟರ್ ಬಂದವು. ಆರ್ಥಿಕವಾಗಿ ಸುಧಾರಣೆ ಸಾಧ್ಯವಾಯಿತು. ಇದನ್ನೆಲ್ಲ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರ ಬ್ಲಾಕ್ ಕಾಂಗ್ರೆಸ್ ಖಾಜಿ ಮಲ್ಲಿಕ್ ವಕೀಲರು, ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್. ವೈ, ಮುಖಂಡರಾದ ಶ್ರೇಣಿಕರಾಜ್, ಅಮರೇಶ್ ಪಾಟೀಲ್, ಡಿ.ನಾಗವೇಣಿ ಪಾಟೀಲ್, ಛತ್ರಪ್ಪ ಕುರುಕುಂದಿ, ನಿರುಪಾದೆಪ್ಪ ಗುಡಿಹಾಳ, ಅಮರಗುಂಡಪ್ಪ ಗಸ್ತಿ, ತಿಮ್ಮಯ್ಯಸ್ವಾಮಿ, ಶಪ್ಪುಖಾನ್, ಬಸವರಾಜ್ ಪಾಟೀಲ್, ವಾಗೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.