![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 7, 2021, 1:24 PM IST
ರಾಯಚೂರು: ಕೊಟ್ಟ ಖಾತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಯಾವುದೇ ಖಾತೆ ನೀಡಿದ್ರೂ ಆ ಖಾತೆಗೆ ನಾವು ಶಕ್ತಿ ತುಂಬಬೇಕು ಎಂದು ವಸತಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ. ನನಗೆ ವಸತಿ ಖಾತೆ ಹೊಸದೇನಲ್ಲ. ಯಾವುದೇ ಖಾತೆ ನೀಡಿದರೂ ಅದರೊಳಗಿನ ನ್ಯೂನತೆ ಸರಿಪಡಿಸಿಕೊಂಡು ಕೆಲಸ ಮಾಡಬೇಕು. ನನಗೆ ಹಿಂದೆ ಬಂಧಿಖಾನೆ ಖಾತೆ ಕೊಟ್ಟಾಗಲೂ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಅಭಿವೃದ್ದಿಗೆ ಒತ್ತು ನೀಡಿದ್ದೇನೆ ಎಂದರು.
ಇದನ್ನೂ ಓದಿ:ಸಚಿವ ಮುನೇನಕೊಪ್ಪ ಮಾದರಿ ನಡೆ; ಹಾರ-ತುರಾಯಿ ಬದಲು ಪುಸ್ತಕಕ್ಕೆ ಮನವಿ
ವಸತಿ ಖಾತೆಯನ್ನು ನಾನು ಮತ್ತೆ ಉತ್ತಮವಾಗಿ ನಿಭಾಯಿಸುತ್ತೇನೆ. ಕೋವಿಡ್ ಹಾಗೂ ಪ್ರವಾಹದ ಕುರಿತು ಪರಿಸ್ಥಿತಿ ಅವಲೋಕಿಸಿ ಸಭೆ ನಡೆಸಲು ಸಿಎಂ ಸೂಚಿಸಿದ್ದಾರೆ. ಜಿಲ್ಲೆಯಲ್ಲಿನ ಪರಿಸ್ಥಿತಿ ನೋಡಲು ಬಂದಿದ್ದೇನೆ. ಎರಡು ದಿನ ನಾನು ಜಿಲ್ಲಾದ್ಯಂತ ಪ್ರವಾಸ ಮಾಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗ್ಗೆ ಪರಾಮರ್ಶಿಸುವೆ ಎಂದರು.
You seem to have an Ad Blocker on.
To continue reading, please turn it off or whitelist Udayavani.