ಮಿನಿ ವಿಧಾನಸೌಧದ ಹಿಂಬಾಗಿಲೂ ಬಂದ್!
30ಕ್ಕೂ ಹೆಚ್ಚು ಇಲಾಖೆ ಶಿಫ್ಟ್ ಮಾಡುವ ಉದ್ದೇಶ ಈಡೇರಿಲ್ಲ; ಚರ್ಚೆಗೆ ಗ್ರಾಸವಾದ ನೋಂದಣಿ ಇಲಾಖೆ
Team Udayavani, Aug 20, 2021, 8:15 PM IST
ಮಿನಿ ವಿಧಾನಸೌಧದ ಮುಂಬಾಗಿಲು ಮೂಲಕ ಉಪನೋಂದಣಿ ಕಚೇರಿಗೆ ಧಾವಿಸುವ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದ ಹಿನ್ನೆಲೆಯಲ್ಲಿ ಈ ಕಚೇರಿಗೆ ಪ್ರತ್ಯೇಕ ದ್ವಾರ ಒದಗಿಸಲು ಬೆನ್ನು ಗೋಡೆ ಒಡೆದು ಹಿಂಬಾಗಿಲು ತೆರೆಯಲಾಗಿತ್ತು. ವೃದ್ಧರು, ವಿಕಲಚೇತನರನ್ನು ವೀಲ್ ಚೇರ್ ಮೂಲಕ ಹಿಂಬಾಗಿಲು ಮೂಲಕ ಕರೆದೊಯ್ಯುವುದು ಕಷ್ಟ ಎಂದು ದೂರು ಸಲ್ಲಿಕೆಯಾದ ನಂತರ ಈ ಬಾಗಿಲನ್ನು ಮುಚ್ಚಲಾಗಿದೆ.
ಸಿಂಧನೂರು: ಸರಕಾರಿ ಸೇವೆ ಕಲ್ಪಿಸುವ ಯಾವುದೇ ಇಲಾಖೆ ಕೂಡ ತನ್ನ ಸೇವೆಗಾಗಿ ಮುಂದಿನ ಬಾಗಿಲನ್ನೇ ತೆರೆದಿರಬೇಕಾಗುತ್ತದೆ. ಆದರೆ ಇಲ್ಲೊಂದು ಇಲಾಖೆಗೆ ಹಿಂಬಾಗಿಲು ತೆರೆದ ಮೇಲೂ ಸಮಸ್ಯೆ ನೀಗದ ಹಿನ್ನೆಲೆಯಲ್ಲಿ ತಾಲೂಕಾಡಳಿಕ್ಕೆ ದಿಕ್ಕು ತೋಚದಂತಾಗಿದೆ. ಥೇಟ್ ಕೋರ್ಟ್ ಮಾದರಿ ಹೋಲುವ ರೀತಿಯಲ್ಲಿ ತಲೆ ಎತ್ತಿದ ಇಲ್ಲಿನ ಮಿನಿ ವಿಧಾನಸೌಧ ಈಗ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವ 30ಕ್ಕೂ ಹೆಚ್ಚು ಇಲಾಖೆಗಳನ್ನು ಇಲ್ಲಿಗೆ ಶಿಫ್ಟ್ ಮಾಡುವ ಉದ್ದೇಶ ಈಡೇರಿಲ್ಲ. ತಾತ್ಕಾಲಿಕವಾಗಿ ಉಪ ನೋಂದಣಿ ಹಾಗೂ ಖಜಾನೆ ಇಲಾಖೆಯನ್ನು ಮಾತ್ರ ಸ್ಥಳಾಂತರಿಸಿದ್ದರೂ ಆಡಳಿತ ಸುಗಮವಾಗಿಲ್ಲ. ಇನ್ನು 30ಕ್ಕೂ ಹೆಚ್ಚು ಇಲಾಖೆಗೆ ಪೂರಕವಾಗಿ ಈ ಮಿನಿ ವಿಧಾನಸೌಧ ಕೇಂದ್ರವಾಗುವುದು ಅನುಮಾನ ಎಂಬಂತಾಗಿದೆ.
ಒಂದೇ ಸೂರಿನಡಿ ಜಗಳ: ತಾಲೂಕು ಮಟ್ಟದಲ್ಲಿ ಎಲ್ಲ ಸರಕಾರಿ ಇಲಾಖೆ ಕಚೇರಿಗಳನ್ನು ಒಂದೇ ಸೂರಿನಡಿಗೆ ತರುವ ಉದ್ದೇಶದೊಂದಿಗೆ ಸ್ಥಾಪಿಸಲಾದ ಮಿನಿವಿಧಾನಸೌಧಕ್ಕೆ ಎಲ್ಲ ಇಲಾಖೆ ಬರುವ ಮುನ್ನವೇ ಒಂದು ಇಲಾಖೆ ಮಾತ್ರ ತಲೆನೋವಾಗಿದೆ.
ಉಪ ನೋಂದಣಾಧಿಕಾರಿಗಳ ಕಾರ್ಯಾಲಯ ಬಂದ ಮೇಲೆ ಕಂಗೆಟ್ಟಿರುವ ತಾಲೂಕಾಡಳಿತ, ವಿಧಾನಸೌಧದ ಗೋಡೆ ಒಡೆದು ಹಿಂಬಾಗಿಲು ಕೊಟ್ಟ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಗಮನಾರ್ಹ ಎಂದರೆ 40 ಸಾವಿರ ರೂ.ಗೂ ಹೆಚ್ಚು ಸರಕಾರಿ ಹಣ ಖರ್ಚು ಮಾಡಿ ತೆಗೆದ ಬಾಗಿಲನ್ನು
ಮುಚ್ಚಲಾಗಿದೆ. ಎಲ್ಲ ಇಲಾಖೆಗಳ ಪಟ್ಟಿಯಲ್ಲಿ ಒಂದು ಇಲಾಖೆಯಾಗಿ ಪರಿಗಣಿಸಲ್ಪಡುವ ನೋಂದಣಿ ಇಲಾಖೆಯೇ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಡ್ರೋನ್ ಪ್ರತಾಪ್ ವಂಚನೆ : ಪ್ರತಾಪ್ ಪಾತ್ರದಲ್ಲಿ ಪ್ರಥಮ್
ಇಬ್ಬರ ತಲೆದಂಡಕ್ಕೂ ಫಲವಿಲ್ಲ: ಈ ಹಿಂದೆ ಉಪನೋಂದಣಾಧಿ ಕಾರಿಯಾಗಿದ್ದ ಮಹಿಳಾ ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು
ಕೇಳಿ ಬಂದಿದ್ದವು. ಕೊನೆಗೆ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಸರಕಾರಕ್ಕೆ ಕಟ್ಟಬೇಕಿದ್ದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಮಾನತುಗೊಂಡರು. ನಂತರ ಆಗಮಿಸಿದ ಮಹಿಳಾ ಅಧಿ ಕಾರಿ ಕೂಡ ತಿಂಗಳಲ್ಲಿ ವಕೀಲರ ಜತೆಗಿನ ಜಗಳದಲ್ಲಿ ಸಿಂಧನೂರಿನಿಂದ
ಕಾಲ್ಕಿಳಬೇಕಾಯಿತು. ಸ್ವತಃ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರೇ ಈ ಎರಡು ಆದೇಶಗಳನ್ನು ಹೊರಡಿಸಿ ಮಹಿಳಾ ಅಧಿಕಾರಿಗಳನ್ನು ಸಿಂಧನೂರಿನಿಂದ ಬೇರೆಡೆ ಕಳುಹಿಸಿದ್ದಾರೆ. ಇದೀಗ ಹೊಸ ಅಧಿಕಾರಿ ಬಂದ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ.
ಬದಲಾಗದ ಪರಿಸ್ಥಿತಿ: ಈಗಲೂ ತಹಶೀಲ್ ಕಚೇರಿಯ ಪ್ರವೇಶ ದ್ವಾರ ದಾಟಿ ಸಾಗುತ್ತಿದ್ದಂತೆ ಮಹಿಳೆಯರು, ವೃದ್ಧರು ಉದ್ಯಾನದಲ್ಲಿ ಕುಳಿತ ರೀತಿಯಲ್ಲಿ ಉಪನೋಂದಣಾಧಿಕಾರಿ ಕಚೇರಿ ಎದುರು ಕಾಣಿಸುವುದು ಸಾಮಾನ್ಯವಾಗಿದೆ. ಸರದಿ ಬರುವುದನ್ನೇ ತಬರರಂತೆ ಕಾಯುವುದು
ತಪ್ಪಿಲ್ಲ. ಮಿನಿವಿಧಾನಸೌಧಕ್ಕೆ ಭೇಟಿ ನೀಡಿದಾಗ ಸರಕಾರಿ ಇಲಾಖೆಯೊಂದರ ಸೇವೆ ಬಯಸಿ ಆಗಮಿಸಿದ ಜನ ಅನುಭವಿಸುತ್ತಿರುವ ಯಾತನೆ ಗಮನ ಸೆಳೆಯುತ್ತದೆ. ಸಹಜವಾಗಿಯೇ ತಾಲೂಕಾಡಳಿತಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದು, ಉಪನೋಂದಣಾಧಿಕಾರಿಗಳ ಕಚೇರಿ ಆಡಳಿತಾತ್ಮಕ ಕಾರ್ಯ ಸಾರ್ವಜನಿಕರಿಗೆ ಶಾಪವಾಗಿ ಪರಿಣಮಿಸಿದೆ.
ಅನಧಿಕೃತ ಸರದಿಯೇ ಸವಾಲು
ಮುಖ್ಯವಾಗಿ ದಿನವೊಂದಕ್ಕೆ 100 ದಸ್ತಾವೇಜುಗಳನ್ನು ನೋಂದಣಿ ಮಾಡಲಾಗುತ್ತದೆ. ಆದರೆ ದಿನಕ್ಕೆ 50ರಷ್ಟು ದಸ್ತಾವೇಜುಗಳು ಸರದಿ ಬದಲು ಅನಧಿಕೃತವಾಗಿ ನುಗ್ಗುತ್ತಿರುವ ಪರಿಣಾಮ ದಟ್ಟಣೆ ಹೆಚ್ಚುತ್ತಿದೆ ಎಂಬ ದೂರಿದೆ.
ಸೀಸನ್ ಸಂದರ್ಭದಲ್ಲಿ ಬ್ಯಾಂಕ್ ಸಾಲಕ್ಕಾಗಿ ಜಮೀನು ಒತ್ತೆ ಮಾಡಿಸುವ ಪ್ರಕರಣ ಹೆಚ್ಚಾಗುವುದರಿಂದ ಹೀಗಾಗುತ್ತಿದೆ. ಹೆಚ್ಚಿನ ಮಾನವ ಸಂಪನ್ಮೂಲ, ಕಂಪ್ಯೂಟರ್ ವ್ಯವಸ್ಥೆ ದೊರಕಿದರೆಇದನ್ನು ತಪ್ಪಿಸಲು ಸಾಧ್ಯವಿದೆ. ದಟ್ಟಣೆ ನಿಯಂತ್ರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ.
-ಶ್ರೀನಿವಾಸ ಭಂಗಿ, ಉಪನೋಂದಣಿ
ಅಧಿಕಾರಿಗಳು, ಸಿಂಧನೂರು.
ಕಟ್ಟಡದ ಹಿಂಬದಿ ಗೋಡೆ ಒಡೆದು ಹಿಂಬಾಗಿಲು ಮಾಡಿದರು. ಆಗಲೂ ಸಬ್‌ರಜಿಸ್ಟ್ರಾರ್ ಕಚೇರಿ ಸುಧಾರಣೆಯಾಗಿಲ್ಲ. ಈಗಲೂ ಜನ ಬೆಳಗ್ಗೆ ಯಿಂದ ಸಂಜೆಯತನಕ ಕಾಯುವುದು ತಪ್ಪಿಲ್ಲ. ಇದೆಂಥ ಇಲಾಖೆ ಎಂಬ ಜನರ ಪ್ರಶ್ನೆಗೆ ಆಡಳಿತವೇ ಉತ್ತರಿಸಬೇಕಿದೆ.
-ಎಚ್.ಎನ್.ಬಡಿಗೇರ್,
ಹೋರಾಟಗಾರ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.