ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಪಾಸ್
Team Udayavani, May 7, 2020, 1:36 PM IST
ಮುದಗಲ್ಲ: ಸ್ವಗ್ರಾಮಕ್ಕೆ ತೆರಳಲು ಧಾವಂತದಲ್ಲಿರುವ ಜನರು.
ಮುದಗಲ್ಲ: ಕೋವಿಡ್ ತಡೆಗೆ ವಿಧಿಸಲಾಗಿದ್ದ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬರುತ್ತಿದ್ದಾರೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದ ಬೆಂಗಳೂರು, ಮಂಗಳೂರು, ಹಾಸನ, ಹುಬ್ಬಳ್ಳಿ, ಧಾರವಾಡಗಳಿಂದಲೂ ಜನರು ಬಂದು ತಮ್ಮ ಸ್ವಗ್ರಾಮ ಸೇರುತ್ತಿದ್ದಾರೆ. ಲಾಕ್ಡೌನ್ ಸಡಿಲಿಗೊಂಡಿದ್ದರಿಂದ ಅಧಿಕಾರಿಗಳು ಸಹ ಅಷ್ಟೊಂದು ಬಂದೋಬಸ್ತ್ಗೆ ಮುಂದಾಗುತ್ತಿಲ್ಲ.
ಇದರಿಂದ ಮಹಾಮಾರಿ ವಕ್ಕಸಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ. ಪ್ರತಿಯೊಬ್ಬರು ಮುಖಗವಸು ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಬೇಕಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.