ನಿರ್ದೇಶಕರಿಗೆ ಪ್ರವಾಸ ಯೋಗ
ಮಾಕಾಪುರ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
Team Udayavani, Jan 13, 2020, 12:17 PM IST
ಮುದಗಲ್ಲ: ಸಮೀಪದ ಮಾಕಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಜ.17ರಂದು ಮುಹೂರ್ತ ನಿಗದಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಜನ ನಿರ್ದೇಶಕರು ಪ್ರವಾಸ ಕೈಗೊಂಡಿದ್ದಾರೆ.
ನಿರ್ದೇಶಕರ ಆಯ್ಕೆ: ಮಾಕಾಪುರ ಪಿಕೆಪಿಎಸ್‌ಗೆ ಈರಪ್ಪ ವೀರಭದ್ರಪ್ಪ ಮಾಕಾಪುರು, ಶಂಕ್ರಮ್ಮ ಈರಪ್ಪ ತಲೆಕಟ್ಟು, ಬಾಲಮ್ಮ ಅಡಿವೆಪ್ಪ ಆರ್ಯಭೋಗಾಪುರು (ಪರಿಶಿಷ್ಟ ಪಂಗಡ) ದೊಡ್ಡಬಸವ ನೀಲಪ್ಪ ಮಾಕಾಪುರು ಈ ನಾಲ್ವರು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಹನುಮೇಶ ತಿಮ್ಮಣ್ಣ ಹೂನೂರು, ಬಸವರಾಜ ಗಿರಿಯಪ್ಪಗೌಡ ಮಾಕಾಪುರು, ರವಿಚಂದ್ರ ಸಂಗಣ್ಣ ಹೂನೂರು, ಮಲ್ಲರಡ್ಡೆಪ್ಪ ಅಮರಪ್ಪ ಬ್ಯಾಲಿಹಾಳ, ಶರಣಪ್ಪಗೌಡ ಪರನಗೌಡ ತುರಡಗಿ, ಲಕ್ಷ್ಮಮ್ಮ ಹುಲುಗಪ್ಪ ತುರಡಗಿ (ಪರಿಶಿಷ್ಟ ಜಾತಿ) ಶಕುಂತಲಾ ಶರಣಪ್ಪ ಮರಳಿ (ಮಹಿಳಾ ಕ್ಷೇತ್ರ), ಅಕ್ಕಮಾಹದೇವಿ ವೀರಯ್ಯ ರಾಮತ್ನಾಳ (ಮಹಿಳಾ ಕ್ಷೇತ್ರ) ಇವರು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
ಜಿದ್ದಾಜಿದ್ದಿ: ಮಾಕಾಪುರು ಪಿಕೆಪಿಎಸ್‌ಗೆ ನಾಲ್ವರು ಅವಿರೋಧ,
8 ಜನ ಚುನಾಯಿತರು ಸೇರಿ 12 ಜನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ
ಪೂರ್ಣಗೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು 7
ಜನ ನಿರ್ದೇಶಕರ ಬಲ ಬೇಕು. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದವರು ಕಾಂಗ್ರೆಸ್ ಬೆಂಬಲಿತ 7 ಜನ ನಿರ್ದೇಶಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷರ ಅಧಿಕಾರಾವಧಿ 5 ವರ್ಷ ಇದ್ದು, 3 ಜನ ನಿರ್ದೇಶಕರು ತಲಾ 20 ತಿಂಗಳಂತೆ ಅಧಿಕಾರ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತ್ತಿದ್ದಾರೆನ್ನಲಾಗಿದೆ. ಮೊದಲ ಅವಧಿಗೆ ತಲೆಕಟ್ಟು ಗ್ರಾಮದ ಶಂಕ್ರಮ್ಮ ಈರಪ್ಪ ಅಧ್ಯಕ್ಷರಾಗಿ, ಬ್ಯಾಲಿಹಾಳ ಗ್ರಾಮದ ಮಲ್ಲರಡ್ಡೆಪ್ಪ ಅಮರಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ .ಆದರೆ ಕಾಂಗ್ರೆಸ್ ಬೆಂಬಲಿತ ಎರಡ್ಮೂರು ಜನ ನಿರ್ದೇಶಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆನ್ನಲಾಗಿದೆ. ಒಟ್ಟಾರೆ ಸಚಿವರು, ಸಂಸದರು, ಶಾಸಕರು, ಜಿಪಂ-ತಾಪಂ ಹಾಗೂ ಗ್ರಾಪಂ ಸದಸ್ಯರಲ್ಲಿ ಕಾಣುತ್ತಿದ್ದ ರೆಸಾರ್ಟ್ ರಾಜಕೀಯ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೂ ಕಾಲಿರಿಸಿರುವುದು ವಿಪರ್ಯಾಸವಾಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
ದೇವಪ್ಪ ರಾಠೋಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.