ದನದ ದೊಡ್ಡಿಯಾದ ಕಟ್ಟಡ
ಹೂನೂರು ಗ್ರಾಮದ ಹೊರವಲಯದಲ್ಲಿ ಕಟ್ಟಡ ನಿರ್ಮಾಣ ದನ-ಕುರಿ ಕಟ್ಟಲು ಬಳಕ
Team Udayavani, Jan 23, 2020, 1:15 PM IST
ಮುದಗಲ್ಲ: ಗ್ರಾಮೀಣ ಅಭಿವೃದ್ಧಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರ ಲಕ್ಷಾಂತರ ರೂ.ಖರ್ಚು ಮಾಡುತ್ತಿದೆ. ಆದರೆ ಸ್ಥಳೀಯ ಅಧಿಕಾರಿಗಳ ಬೇಜವಬ್ದಾರಿಯಿಂದ ಸರ್ಕಾರದ ಹಣ ನಾಗರಿಕರಿಗೆ ಸೌಕರ್ಯ ಕಲ್ಪಿಸುವ ಬದಲು ವ್ಯರ್ಥವಾಗುತ್ತಿದೆ. ಇದಕ್ಕೆ ಸಮೀಪದ ಹೂನೂರುದಲ್ಲಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡವೇ ಸಾಕ್ಷಿಯಾಗಿದೆ.
2016-17ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ
ಯೋಜನೆಯಡಿ ಒಟ್ಟು 16 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ರಾಜೀವ ಗಾಂಧಿ ಸೇವಾ ಕೇಂದ್ರ
ನಿರುಪಯುಕ್ತವಾಗಿದೆ. ಗ್ರಾಪಂ ಕೇಂದ್ರ ಸ್ಥಾನದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸಿ ಆ ಮೂಲಕ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ಮತ್ತು ಸರ್ಕಾರದ ಯೋಜನೆಯ ಸೇವೆ ಕಲ್ಪಿಸಬೇಕು ಎಂಬುದು ಯೋಜನೆ ಮೂಲ ಉದ್ದೇಶವಾಗಿದೆ. ಆದರೆ ಗ್ರಾಪಂ ಅ ಧಿಕಾರಿಗಳು ಗ್ರಾಪಂ ಕೇಂದ್ರದಿಂದ 1 ಕಿಮೀ ಅಂತರದಲ್ಲಿ ಜನವಸತಿ ಇಲ್ಲದ ಗ್ರಾಮದ ಹೊರವಲಯದಲ್ಲಿ
ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಿಸುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ. ಅಲ್ಲದೆ 16ಲಕ್ಷ ರೂ. ವೆಚ್ಚ ಮಾಡಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಬಾಗಿಲು, ಕಿಟಕಿ ಜೋಡಿಸಿಲ್ಲ.
ವಿದ್ಯುತ್ ಸಂಪರ್ಕವಿಲ್ಲ. ಇದರಿಂದಾಗಿ ಕಟ್ಟಡದಲ್ಲಿ ದನ, ಕುರಿಗಳನ್ನು ಕಟ್ಟುತ್ತಿದ್ದು,
ಕಟ್ಟಡದ ಸುತ್ತ ಜಾಲಿ ಗಿಡಗಳು ಬೆಳೆದು ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕಟ್ಟಡ ನಿರುಪಯುಕ್ತವಾಗಿದೆ. ಮೇಲಾಧಿಕಾರಿ ಗಳು ಗಮನ ಹರಿಸಿ ರಾಜೀವಗಾಂಧಿ ಸೇವಾ ಕೇಂದ್ರ ಜನಸೇವೆಗೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅಡಿ 16 ಲಕ್ಷ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲಾಗಿದೆ. ಗ್ರಾಪಂ ಕಾರ್ಯಾಲಯದಿಂದ 1 ಕಿ.ಮೀ. ಅಂತರದಲ್ಲಿ ಸೇವಾ ಕೇಂದ್ರವಿದೆ. ಕೇಂದ್ರದ ಸುತ್ತಲೂ ಜಾಲಿಗಿಡ ಬೆಳೆದು ಅಕ್ರಮ ಚಟುವಟಿಕೆ ತಾಣವಾಗಿದೆ. ಅಧಿಕಾರಿಗಳು ಗಮನ ಹರಿಸಿ ಸೇವಾ ಕೇಂದ್ರ ಆರಂಬಿಸಬೇಕು.
ಬಸವರಾಜ ಮರಳಿ, ಗ್ರಾಮಸ್ಥ
ಉದ್ಯೋಗ ಖಾತ್ರಿ ಯೋಜನೆ ಅಡಿ 16 ಲಕ್ಷ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲಾಗಿದೆ. ಗ್ರಾಪಂ ಕಾರ್ಯಾಲಯದಿಂದ 1 ಕಿ.ಮೀ. ಅಂತರದಲ್ಲಿ ಸೇವಾ ಕೇಂದ್ರವಿದೆ. ಕೇಂದ್ರದ ಸುತ್ತಲೂ ಜಾಲಿಗಿಡ ಬೆಳೆದು ಅಕ್ರಮ ಚಟುವಟಿಕೆ ತಾಣವಾಗಿದೆ. ಅಧಿಕಾರಿಗಳು ಗಮನ ಹರಿಸಿ ಸೇವಾ ಕೇಂದ್ರ ಆರಂಬಿಸಬೇಕು. ಬಸವರಾಜ ಮರಳಿ, ಗ್ರಾಮಸ್ಥ ನಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ವಿದ್ಯುತ್ ಸೌಕರ್ಯವಿಲ್ಲ. ಹೀಗಾಗಿ ಅಲ್ಲಿ ಸಿಬ್ಬಂದಿ ಕೆಲಸ ಮಾಡಲು ಆಗುವುದಿಲ್ಲ. ಕೇಂದ್ರದ ಸುತ್ತ ಸ್ವಚ್ಛತೆ ಮಾಡಿಸಿ ಕೇಂದ್ರಕ್ಕೆ ಬೀಗ ಹಾಕುವ ವ್ಯವಸ್ಥೆ ಮಾಡಲಾಗುವುದು.
ಈಶ್ವರಪ್ಪ
ಪಿಡಿಒ ಹೂನೂರು
ದೇವಪ್ಪ ರಾಠೋಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.