ಬಾಡುತ್ತಿರುವ ಬೆಳೆ ರಕ್ಷಣೆಗೆ ಟ್ಯಾಂಕರ್‌ನಿಂದ ನೀರು
ತೇವಾಂಶ ಕೊರತೆ ಅಂತರ್ಜಲ ಕುಸಿತ
Team Udayavani, Feb 12, 2020, 4:27 PM IST
ಮುದಗಲ್ಲ: ತೇವಾಂಶ ಕೊರತೆಯಿಂದ ಬಾಡುತ್ತಿರುವ ಬೆಳೆ ರಕ್ಷಣೆಗೆ ರೈತರು ನೀರು ಖರೀದಿಸಿ ಟ್ಯಾಂಕರ್ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಿತ್ತು. ರೈತರು ಬೋರವೆಲ್ ನೀರು ನಂಬಿ ತರಕಾರಿ, ತೋಟಗಾರಿಕೆ ಬೆಳೆ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಯಲಾರಂಬಿಸಿದ್ದರು. ಆದರೆ ಕಳೆದ 2-3ತಿಂಗಳಿಂದ ಮಳೆಯಾಗದ ಪರಿಣಾಮ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿದೆ. ಬೆಳೆದ ಬೆಳೆಗಳು ಬಾಡುತ್ತಿವೆ. ಇವುಗಳ ರಕ್ಷಣೆಗಾಗಿ ರೈತರು ದೂರದ ಪ್ರದೇಶದಿಂದ ಟ್ಯಾಂಕರ್ ಇಲ್ಲವೇ ವಾಹನಗಳಲ್ಲಿ ಟಾಟಾ ಏಸ್ ಸರಕು ವಾಹನದಲ್ಲಿ ಸಿಂಟೆಕ್ಸ್ ಟ್ಯಾಂಕ್ ಇರಿಸಿಕೊಂಡು ಹೋಗಿ ನೀರು ಖರೀದಿಸಿ ತಂದು ಬೆಳೆಗೆ ಹಾಯಿಸುತ್ತಿದ್ದಾರೆ.
ನಾಗಲಾಪುರ ಗ್ರಾಮದ ರೈತ ಆಂಜನೇಯ ಮೂರು ತಿಂಗಳು ಹಿಂದೆ ತನ್ನ ಜಮೀನಿನಲ್ಲಿ ಬದನೆ ಬೆಳೆ ನಾಟಿ ಮಾಡಿದ್ದು, ಈಗ ಕಾಯಿ ಬಿಟ್ಟು ಫಲ ನೀಡುವ ಸಮಯದಲ್ಲಿ ತೇವಾಂಶ ಕಡಿಮೆಯಾಗಿ ಬೆಳೆ ಬಾಡುತ್ತಿದೆ. ದಿನಕ್ಕೆ 10ರಿಂದ 15 ಪುಟ್ಟಿ ಬದನೆಕಾಯಿ ಕಟಾವು ಮಾಡಿ ಮುದಗಲ್ಲ, ತಾವರಗೆರೆ, ಕನಕಗಿರಿ ಪಟ್ಟಣಗಳಿಗೆ ಹೋಗಿ ಮಾರಿ ನಿತ್ಯ 1500 ರೂ.ಗಳಿಂದ 2000 ರೂ. ಆದಾಯ ಪಡೆಯುತ್ತಿದ್ದರು. ಆದರೆ ಕಳೆದ 20ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬದನೆ ಗಿಡಗಳು ಬಾಡಿ ಫಸಲು ಮಾಯವಾಗುತ್ತಿರುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನೀರು ಖರೀದಿಸಿ ತಂದು ಬೆಳೆಗೆ ಹಾಯಿಸುತ್ತರುವುದಾಗಿ ರೈತ ಆಂಜನೇಯ ತಿಳಿಸಿದ್ದಾರೆ. ಇದರಂತೆ ಯರದೊಡ್ಡಿ, ದೇಸಾಯಿ ಭೋಗಾಪುರ, ವ್ಯಾಕರನಾಳ ರೈತರು ಸಹ ಟ್ಯಾಂಕರ್ ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur ಬಾಣಂತಿ ಸಾವು ಶೂನ್ಯಕ್ಕಿಳಿಸಲು ಶ್ರಮ: ಸಚಿವ ದಿನೇಶ್ ಗುಂಡೂರಾವ್
Dinesh Gundu Rao: ಬಾಣಂತಿರ ಸಾವಿನ ತನಿಖೆ ವಾರದಲ್ಲಿ ಸಲ್ಲಿಕೆ
Raichur: ಮೈಕ್ರೊ ಫೈನಾನ್ಸ್ ಗಳ ಕಿರಿಕಿರಿಗೆ ಯುವಕ ಆತ್ಮಹತ್ಯೆ?
Sindhanur: ಕ್ರೂಸರ್ ಪಲ್ಟಿಯಾಗಿ ನಾಲ್ವರು ಯುವಕರು ಮೃ*ತ್ಯು
Raichur: ಏಗನೂರು ಬಳಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಗೋಶಾಲೆ ತೆರವುಗೊಳಿಸಿದ ಪಾಲಿಕೆ
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ