ಮಹಾನಗರ ಪಾಲಿಕೆಗೆ ಸದಸ್ಯರ ಸಮ್ಮತಿ


Team Udayavani, Dec 15, 2020, 4:46 PM IST

ಮಹಾನಗರ ಪಾಲಿಕೆಗೆ ಸದಸ್ಯರ ಸಮ್ಮತಿ

ರಾಯಚೂರು: ಸುತ್ತಲಿನ ಹಳ್ಳಿಗಳನ್ನು ಸೇರಿಸಿಕೊಂಡು ರಾಯಚೂರುನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ನಗರಸಭೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮೊದಲ ಸಾಮಾನ್ಯ ಮಹಾಸಭೆಯಲ್ಲಿ ಅಧ್ಯಕ್ಷ ಈ.ವಿನಯಕುಮಾರ ವಿಷಯ ಮಂಡಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌.ಎಸ್‌.ಬೋಸರಾಜ, ನಗರ ಶಾಸಕ ಡಾ| ಶಿವರಾಜ ಪಾಟೀಲ್‌ ಈ ದಿಸೆಯಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈಗಾಗಲೇಸರ್ಕಾರದ ಮಟ್ಟದಲ್ಲಿ ಪ್ರಗತಿಯಲ್ಲಿದೆ. 2011ರಜನಗಣತಿ ಪ್ರಕಾರ 2.34 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, 2021ರ ಜನಗಣತಿಯ ಪ್ರಕಾರ ಪ್ರಸ್ತಾವನೆ ಸಲ್ಲಿಸಿದರೆ ಅರ್ಹತೆ ಸಿಗಲಿದೆ.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 14 ಗ್ರಾಮಗಳಿದ್ದು, ಸುತ್ತಲಿನ ಗ್ರಾಮಗಳನ್ನು ಸೇರಿಸಿಕೊಳ್ಳಬೇಕು ಎಂದರು.

ಸದಸ್ಯ ಈ ಶಶಿರಾಜ್‌, ನಾಗರಾಜ ಮಾತನಾಡಿ, ವಾರ್ಡ್‌ಗಳ ಹಂಚಿಕೆ ಹಾಗೂಸೇರ್ಪಡೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಬೇಕು ಎಂದರು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಈಗಾಗಲೇ ಹಿರಿಯ ನಾಯಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 2011ರ ಜನಗಣತಿ ಪ್ರಕಾರದಾಖಲೆ ಸಲ್ಲಿಸಲಾಗಿದೆ. 2021ರ ಜನಸಂಖ್ಯೆ ಪ್ರಕಾರ ವಿವರ ಸಲ್ಲಿಸಬೇಕು. ಸುತ್ತಲಿನ ಗ್ರಾಮಗಳ ಸೇರ್ಪಡೆ ಬಗ್ಗೆ ಸೂಕ್ತ ಮಾಹಿತಿ ಪಡೆದು ನಿರ್ಧರಿಸಬೇಕು. ಪೌರಾಯುಕ್ತರು ಈ ವಿಚಾರದಲ್ಲಿ ಚನ್ನಾಗಿ ಕೆಲಸ ಮಾಡಬೇಕಿದೆ ಎಂದರು.

ನಗರಸಭೆ ಸದಸ್ಯೆ ಬಸರಾಜ ಪಾಟೀಲ್‌ ದರೂರು ಮಾತನಾಡಿ, ನಗರಸಭೆಯಮಳಿಗೆಗಳು ಎಷ್ಟಿವೆ. ಎಷ್ಟು ಮಳಿಗೆಗಳಿಂದ ಬಾಡಿಗೆ ಬರುತ್ತಿದೆ ಎಂಬುವುದೇ ತಿಳಿಯುತ್ತಿಲ್ಲ.ನಗರಸಭೆ ಅನುದಾನವನ್ನು ಮಳಿಗೆಗಳಿಗೆಮೂಲ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ನಗರಸಭೆ ಆದಾಯ ಕುಸಿತ ಕಂಡಿದೆ ಎಂದುದೂರಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಎನ್‌.ಶ್ರೀನಿವಾಸರೆಡ್ಡಿ, ಕೇವಲ ಶೇ.30ರಷ್ಟು ಮಾತ್ರಬಾಡಿಗೆ ಬರುತ್ತಿದೆ. 292 ಮಳಿಗೆಗಳಿದ್ದು, 91ಮಳಿಗೆಗಳು ಮಾತ್ರ ಬಾಡಿಗೆ ಕಟ್ಟುತ್ತಿವೆ. ಕ್ಯಾಪ್ಟನ್‌ಚೌದ್ರಿ ಎನ್ನುವವರು 12 ವರ್ಷದಿಂದ ಬಾಡಿಗೆ ಪಾವತಿಸಿಲ್ಲ. ಹೇಳುವವರು ಕೇಳುವವರೇಇಲ್ಲದಾಗಿದೆ. ಮುಂದಿನ ಸಭೆಯೊಳಗೆ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು.

ಸದಸ್ಯ ಶಶಿರಾಜ್‌ ಮಾತನಾಡಿ, ಬಾಡಿಗೆದಾರರಿಗೆ ಐದಾರು ಬಾರಿ ನೋಟಿಸ್‌ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಗಮನಿಸಿದರೆ ನಗರಸಭೆ ನಿಯಮಾನುಸಾರ ಕೆಲಸ ಮಾಡುವುದೋ ಇಲ್ಲವೋ ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷ ಮಾತನಾಡಿ, ಈಗಾಗಲೇ ನಗರಸಭೆ ಕಟ್ಟಡಗಳಿಂದ ಬಂದ ಬಾಡಿಗೆ ಹಣ ಸಾಕಷ್ಟು ಸಂಗ್ರಹವಾಗಿದೆ. ಅದರಿಂದಲೇ ಹರಿಹರ ರಸ್ತೆ ಮತ್ತು ಪೇಟ್ಲ ಬುರ್ಜ ಬಳಿಯ ಮಳಿಗೆಗಳನ್ನು ನವೀಕರಣ ಮಾಡಿ ಬಳಿಕ ಹರಾಜು ಪ್ರಕ್ರಿಯೆನಡೆಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ಉಪಾಧ್ಯಕ್ಷ ನರಸಮ್ಮ ನರಸಪ್ಪ ಮಾಡಗಿರಿ, ಪೌರಾಯಕ್ತ ಡಾ| ದೇವಾನಂದ ದೊಡ್ಡಮನಿ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

ಕ್ರಿಯಾಯೋಜನೆ ರದ್ದತಿಗೆ ತಾಕೀತು: ನಗರಸಭೆ 15ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ 3.95 ಕೋಟಿಗೆ ರೂಪಿಸಿದ ಕ್ರಿಯಾ ಯೋಜನೆ ರದ್ದುಗೊಳಿಸಿ ಮತ್ತೆ ರೂಪಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ತಾಕೀತು ಮಾಡಿದರು.ಸದಸ್ಯ ಶ್ರೀನಿವಾಸರೆಡ್ಡಿ, ಸಣ್ಣ ನರಸರೆಡ್ಡಿ ಮಾತನಾಡಿ, ಕೆಲವೊಂದು ವಾರ್ಡ್‌ಗಳಿಗೆ ಅನುದಾನವೇ ನೀಡಿಲ್ಲ. ಸೌಜನ್ಯಕ್ಕೂ ನಮ್ಮನ್ನೇನು  ಕೇಳಿಲ್ಲ. ಕೂಡಲೇ ರದ್ದುಗೊಳಿಸಬೇಕು. ಎಲ್ಲರಿಗೂ ಸಮನಾಗಿ ಹಂಚಬೇಕು ಎಂದರು.

ಸದಸ್ಯ ನಾಗರಾಜ್‌ ಮಾತನಾಡಿ, ಡಿಸಿಯವರೇಖುದ್ದು ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದು ಬದಲಿಸುವುದು ಸರಿಯಲ್ಲ ಎಂದರು. ಇದಕ್ಕೊಪ್ಪದ ಸದಸ್ಯ ಶ್ರೀನಿವಾಸರೆಡ್ಡಿ, ಇಲ್ಲಿ ನಾವೇ ಅಂತಿಮ. ಡಿಸಿ ಬಗ್ಗೆ ಗೌರವವಿದೆ. ಆದರೆ, ಬಹುಮತ ಇರುವ ನಮಗೆ ಬದಲಿಸಲು ಅಧಿಕಾರವಿದೆ ಎಂದರು.

ಹೊರಗಿನವರೇ ಜಾಸ್ತಿ : ಸಭೆಯಲ್ಲಿ ಸದಸ್ಯರು, ನಗರಸಭೆ ಸಿಬ್ಬಂದಿಗಿಂತ ಸದಸ್ಯೆಯರ ಗಂಡಂದಿರು, ಸಂಬಂಧಿಗಳು, ಸದಸ್ಯರ ಬೆಂಬಲಿಗರೇ ಹೆಚ್ಚಾಗಿ ಕಂಡುಬಂದರು. ಕೂಡಲು ಸ್ಥಳ ಇಲ್ಲದಿದ್ದರೂ ಯಾರು ಹೊರಗೆ ಹೋಗುವ ಮನಸು ಮಾಡಲಿಲ್ಲ. ಸ್ಥಳ ಇಕ್ಕಟ್ಟಾಗಿರುವ ಕಾರಣ ಪ್ರೇಕ್ಷಕರ ಗ್ಯಾಲರಿ ಕೂಡ ಇಲ್ಲ. 35 ಸದಸ್ಯಬಲದ ನಗರಸಭೆಯಲ್ಲಿ 17 ಸದಸ್ಯೆಯರಿದ್ದಾರೆ.ಅವರ ಪರವಾಗಿ ಬಂದವರು ಕೂಡ ಸಭೆಯಲ್ಲಿ ತುಂಬಿದ್ದು ಕಂಡು ಬಂತು.

 

ಟಾಪ್ ನ್ಯೂಸ್

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.