ಪುರಸಭೆ ಹೈಟೆಕ್ ಕಟ್ಟಡ ಹಸ್ತಾಂತರಕ್ಕೆ ಗ್ರಹಣ
Team Udayavani, Oct 19, 2021, 4:13 PM IST
ಮಸ್ಕಿ: ಪುರಸಭೆ ಕಚೇರಿಗಾಗಿ 2 ಕೋಟಿ ಮೊತ್ತದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಾಮಗಾರಿಯೂ ಮುಕ್ತಾಯವಾಗಿ ಹಲವು ದಿನ ಕಳೆದಿವೆ. ಆದರೆ ಹೊಸ ಕಟ್ಟಡ ಆರಂಭಕ್ಕೆ ಇನ್ನು ಮೀನಮೇಷ ಎಣಿಸಲಾಗುತ್ತಿದೆ!
ಗ್ರಾಮ ಪಂಚಾಯಿತಿಯಿಂದ ನೇರವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅದೇ ಹಳೆಯ ಕಟ್ಟದಲ್ಲೇ ಇಲ್ಲಿನ ಆಡಳಿತ ನಡೆಯಿತಿತ್ತು. ಹಳೆಯ ಮತ್ತು ಕಿರಿದಾದ ಕಟ್ಟಡದಲ್ಲಿ ಸುಗಮ ಆಡಳಿತಕ್ಕೆ ಕಷ್ಟವಾಗಿದ್ದರಿಂದ ಹಳೆ ಕಟ್ಟಡ ತೆರವು ಮಾಡಿ ಹೊಸದಾಗಿ ಹೈಟೆಕ್ ಕಟ್ಟಡ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಕಾಮಗಾರಿ ವಹಿಸಲಾಗಿತ್ತು. ಆರಂಭದಲ್ಲಿ ವಿವಿಧ ಕಾರಣಕ್ಕೆ ವಿಳಂಬವಾಗಿದ್ದ ಕೆಲಸ ಈಗ ಪೂರ್ಣಗೊಂಡಿದೆ. ಆದರೆ ಪೂರ್ಣಗೊಂಡ ಕಟ್ಟಡ ಬಳಕೆ ಮಾಡಿಕೊಳ್ಳಲು ಪುರಸಭೆ ಇದುವರೆಗೂ ವಿಳಂಬ ಮಾಡುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ತಾತ್ಕಾಲಿ ಕಚೇರಿ
ಪುರಸಭೆಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ತಾತ್ಕಾಲಿಕವಾಗಿ ಪುರಸಭೆ ಕಚೇರಿಯನ್ನು ಎಪಿಎಎಂಸಿ ಮಳಿಗೆಯಲ್ಲಿ ನಡೆಸಲಾಗುತ್ತಿದೆ. ಪಟ್ಟಣದ ಹೊರ ವಲಯದಲ್ಲಿರುವ ತಾತ್ಕಾಲಿಕ ಕಚೇರಿಗೆ ತೆರಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಟ್ಟಡ ನಿರ್ಮಾಣ ಹಂತದಲ್ಲಿದ್ದರಿಂದ ಅನಿವಾರ್ಯವಾಗಿ ದೂರದ ಕಟ್ಟಡಕ್ಕೆ ತೆರಳಬೇಕಿತ್ತು. ಆದರೆ ಈಗ ಹೊಸ ಕಟ್ಟಡ ನಿರ್ಮಾಣ ಪೂರ್ಣವಾದರೂ ಆಡಳಿತ ಶಿಫ್ಟ್ ಆಗದೇ ಇರುವುದರಿಂದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಇನ್ನು ಕಟ್ಟಡ ಹಸ್ತಾಂತರ ಕುರಿತು ಲ್ಯಾಂಡ್ ಆರ್ಮಿ ಮತ್ತು ಪುರಸಭೆ ಅಧಿಕಾರಿಗಳ ನಡುವೆ ಸೂಕ್ತ ಸಂವಹನದ ಕೊರತೆಯೂ ಕಾಣುತ್ತಿದೆ.
ಇದನ್ನೂ ಓದಿ: ಹಾವೇರಿ ಜಿಲ್ಲೆ ಉದಯಕ್ಕೆ ದಿ| ಉದಾಸಿ ಕಾರಣ : ಸಿಎಂ ಬಸವರಾಜ ಬೊಮ್ಮಾಯಿ
ರಾಜಕೀಯ ತಿಕ್ಕಾಟ?
ಇಲ್ಲಿನ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಶಾಸಕ ಪ್ರತಾಪಗೌಡ ಪಾಟೀಲ್ ಶಾಸಕರಾಗಿದ್ದ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಕಳೆದ ಉಪಚುನಾವಣೆಯಲ್ಲಿ ಅವರು ಸೋತು ಮಾಜಿಯಾಗಿದ್ದಾರೆ.
ಆರ್.ಬಸನಗೌಡ ತುರುವಿಹಾಳ ಈಗ ಹಾಲಿ ಶಾಸಕರಾಗಿದ್ದು, ಇವರ ಕೈಯಿಂದಲೇ ಈಗ ಈ ಹೊಸ ಕಟ್ಟಡ ಉದ್ಘಾಟನೆಯಾಗಬೇಕಿದೆ. ಇದೇ ಕಾರಣಕ್ಕಾಗಿಯೇ ಕಟ್ಟಡ ಹಸ್ತಾಂತರ ಪಡೆಯಲು ಪುರಸಭೆ ಹಿಂದೇಟು ಹಾಕುತ್ತಿದೆ ಎನ್ನುವ ಅನುಮಾನಗಳು ಬಲವಾಗಿವೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವ ಧಿಯಲ್ಲೇ ಈ ಕಟ್ಟಡ ಬಳಕೆಗೆ ಅರ್ಪಣೆಯಾಗಬೇಕಿತ್ತು. ಆದರೆ ಈಗ ಉದ್ಘಾಟನೆ ಮಾಡಿದರೆ ಹೇಗೆ? ಎನ್ನುವ ಪ್ರಶ್ನೆಯನ್ನು ಪುರಸಭೆಯ ಹಲವು ಮಾಜಿ ಸದಸ್ಯರು ಎತ್ತಿದ್ದಾರೆ ಎನ್ನಲಾಗುತ್ತಿದೆ. ಈ ರಾಜಕೀಯ ತಿಕ್ಕಾಟದ ಫಲವಾಗಿ ಪುರಸಭೆ ಅಧಿಕಾರಿಗಳು ಹೊಸ ಕಟ್ಟಡದ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಮೂತ್ರ ವಿಸರ್ಜನೆ ತಾಣ
ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪುರಸಭೆ ಹೊಸ ಕಟ್ಟಡ ಕಾಮಗಾರಿ ಮುಗಿದರೂ ಬಳಕೆಗೆ ಅರ್ಪಣೆಯಾಗದೇ ಇರುವುದರಿಂದ ಇಲ್ಲಿನ ಪ್ರದೇಶ ಈಗ ಬಯಲು ಮಲ, ಮೂತ್ರ ವಿಸರ್ಜನೆ ತಾಣವಾಗಿದೆ. ಕಟ್ಟಡ ಬಳಸದೇ ಕೈ ಬಿಟ್ಟಿದ್ದರಿಂದ ಮಸ್ಕಿ ಪಟ್ಟಣದ ಹೃದಯ ಭಾಗದಲ್ಲಿರುವ ಈ ಪ್ರದೇಶಕ್ಕೆ ಜನರು ಆಗಮಿಸಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
-ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.