ಅವ್ಯವಸ್ಥೆ ಆಗರಗಳಾದ ಬಸ್ ತಂಗುದಾಣಗಳು
Team Udayavani, Sep 14, 2022, 6:17 PM IST
ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದ ಪ್ರಯಾಣಿಕರಿಗೆಂದೇ ನಿರ್ಮಿಸಲಾದ ಬಸ್ ತಂಗುದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಕೇವಲ ಆರೇಳು ಜನ ಪ್ರಯಾಣಿಕರು ಮಾತ್ರ ಕುಳಿತುಕೊಳ್ಳುವಷ್ಟು ತಂಗುದಾಣ ನಿರ್ಮಿಸಿದ್ದರಿಂದ ಒಬ್ಬರು ಕುಳಿತರೆ ಮತ್ತೂಬ್ಬರು ನಿಂತುಕೊಳ್ಳಬೇಕು. ಅದರಲ್ಲೂ ಮೇಲ್ಛಾವಣಿ ಕುಸಿದು ಬಿದ್ದು, ಕಬ್ಬಿಣದ ರಾಡುಗಳು ಕಾಣುತ್ತಿವೆ. ಮಳೆ ಬಂದಾಗಲಂತೂ ಪ್ರಯಾಣಿಕರ ಪರಿಸ್ಥಿತಿ ಹೇಳತೀರದಾಗಿದೆ.
ಇಂದಿರಾನಗರ, ಕರಿಗುಡ್ಡ, ಜಂಬಲದಿನ್ನಿ, ನಿಲವಂಜಿ, ಕರಡಿಗುಡ್ಡ, ಅಮರಾಪೂರ, ಬುಂಕಲದೊಡ್ಡಿ, ಯರಗುಡ್ಡ ಸೇರಿದಂತೆ ರಾಜ್ಯ ಹೆದ್ದಾರಿಯಲ್ಲಿ ಬರುವ ತಂಗುದಾಣಗಳ ಸ್ಥಿತಿಯಂತೂ ಹೇಳತೀರದು. ಸಿರವಾರ ಕ್ರಾಸ್‌ನಿಂದ ಹಿಡಿದು ಗಬ್ಬೂರು ಗ್ರಾಮದವರೆಗೆ ಬರುವ ತಂಗುದಾಣಗಳು ಅವ್ಯವಸ್ಥೆಯಲ್ಲಿವೆ. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರ ಅಧಿಕಾರವಧಿಯಲ್ಲಿ ಈ ತಂಗುದಾಣಗಳನ್ನು ನಿರ್ಮಿಸಲಾಗಿದ್ದು, ಬರೋಬ್ಬರಿ ಹತ್ತು ವರ್ಷ ಕಳೆದಿವೆ. ಇಲ್ಲಿಯವರೆಗೆ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯ ವಹಿಸಲಾಗಿದೆ.
ತಂಗುದಾಣ ಒಳಗೆ ಹಾಕಿರುವ ಬಂಡೆಗಳು ಕಿತ್ತು ಹೋಗಿವೆ. ಕೆಲ ಕಿಡಿಗೇಡಿಗಳು ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳಿದ್ದಾರೆ. ಇನ್ನು ಕೆಲ ಕಿಡಿಗೇಡಿಗಳು ರಾತ್ರಿ ಹೊತ್ತು ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲ್‌ಎಸೆದು ಪ್ರಯಾಣಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಬಹುತೇಕರು ಬೇಸತ್ತಿದ್ದಾರೆ. ಇಂತಹ ಅವ್ಯವಸ್ಥೆಯ ತಂಗುದಾಣದಲ್ಲಿ ಪ್ರಯಾಣಿಕರು ಒಳಗೆ ಕುಳಿತುಕೊಳ್ಳುವಂತಾಗಿದೆ. ಕೆಲವು ಜನರು ಮಧ್ಯಾಹ್ನ ಆದ ನಂತರ ತಂಗುದಾಣದಲ್ಲಿಯೇ ಚಕ್ಕರ್ ಕಟ್ಟಿ ಆಟವಾಡುತ್ತ ಕುಳಿತುಕೊಳ್ಳುತ್ತಾರೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ನೀಡದೇ ತೊಂದರೆ ನೀಡಲಾಗುತ್ತದೆ.
-ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.