ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣಪತ್ರ ನೀಡಲು ಆಗ್ರಹ
Team Udayavani, Dec 6, 2017, 3:45 PM IST
ರಾಯಚೂರು: ಜಿಲ್ಲೆಯ ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಅಖೀಲ ಕರ್ನಾಟಕ ಡಾ| ಅಂಬೇಡ್ಕರ್ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ಜಿಲ್ಲಾದಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಆದೇಶ ನೀಡುವ ಮೂಲಕ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
1950ರಲ್ಲಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರು ಜಂಗಮ ಸಮಾಜದ ಉಪಜಾತಿಗಳಾದ ಬೇಡ (ಬುಡ್ಗ) ಜಂಗಮ ಮತ್ತು ಮಾಲಜಂಗಮ ಜಾತಿಗಳನ್ನು ಕುಲ ಕಸುಬಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಹಿಂದು ಜಂಗಮ ಸಮುದಾಯವೂ 1921ನೇ ಸಾಲಿನಲ್ಲಿ ದಲಿತ ವರ್ಗ ಪಟ್ಟಿಯಲ್ಲಿ ಸೇರಿದೆ. 1956ರಲ್ಲಿ
ರಾಷ್ಟ್ರಪತಿಗಳು ಬೇಡ (ಬುಡ್ಗ) ಜಂಗಮ ಜನಾಂಗದವರನ್ನು ಕೇವಲ ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಾತ್ರ ವಾಸವಾಗಿರುತ್ತಾರೆ ಎಂದು ವಿಧಿಸಿದ್ಧ ಕ್ಷೇತ್ರ ನಿರ್ಬಂಧನೆಯನ್ನು 1976ನೇ ಸಾಲಿನಲ್ಲಿ ತೆಗೆದು ಹಾಕಿರುವುದರಿಂದ 1977ರಿಂದ ಜಾರಿಗೆ ಬರುವಂತೆ ಬೇಡ ಜಂಗಮ ರಾಜ್ಯಾದ್ಯಂತ ವಾಸವಾಗಿರುತ್ತಾರೆ ಎಂದು ತಿದ್ದುಪಡಿ ಆದೇಶ ಮಾಡಲಾಗಿದೆ. ಅದರ ಆದೇಶದ ಮೇರೆಗೆ ಬೇಡ ಜಂಗಮರಿಗೆ ಪ್ರಮಾಣ ಪತ್ರ ವಿತರಿಸಲು ಯಾವುದೇ ತಕರಾರಿಲ್ಲ ಎಂದು ತಿಳಿಸಿದರು.
ಬೇಡ ಜಂಗಮ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವಾಗ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ರಾಜ್ಯದ ಬಹುತೇಕ ತಹಶೀಲ್ದಾರರು ಉಲ್ಲಂಘಿಸುತ್ತಿದ್ದಾರೆ. ಇದು ಕಾನೂನಿನಡಿ ಅಪರಾಧವಾಗುತ್ತದೆ. ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಸದಸ್ಯರಾದ ಸಂಗಯ್ಯಸ್ವಾಮಿ ಸಿಂಧನೂರು, ಶಿವಕುಮಾರಸ್ವಾಮಿ, ಸಿದ್ಧಯ್ಯಸ್ವಾಮಿ ಮನ್ಸಲಾಪುರ, ಮಲ್ಲಯ್ಯಸ್ವಾಮಿ, ವೀರಯ್ಯಸ್ವಾಮಿ ಆಶಾಪುರ, ಕಿಡಿಗಣ್ಣಯ್ಯಸ್ವಾಮಿ, ಪ್ರಭುರಾಜ್ ಕರ್ಪೂರಮಠ, ಶಿವಮೂರ್ತಿ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಜೆ.ವಿಜಯಕುಮಾರ, ಎನ್.ಬಸವರಾಜ ಸ್ವಾಮಿ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.