ಅನಾಥವಾಗಿ ನಿಂತ ಸ್ತ್ರೀ ಶಕ್ತಿ ಭವನ
Team Udayavani, Feb 5, 2018, 4:21 PM IST
ದೇವದುರ್ಗ: ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಸ್ತ್ರೀ ಶಕ್ತಿ ಭವನ ಕಳೆದ ಮೂರ್ನಾಲ್ಕು ವರ್ಷಗಳಿಂದ ಸದ್ಬಳಕೆಯಾಗದೆ ಅನಾಥವಾಗಿ ಪಾಳು ಬೀಳುತ್ತಿದೆ. ಇದಲ್ಲದೇ ಭವನದ ಆವರಣದಲ್ಲಿ ಸಿಡಿಪಿಒ ಅಧಿಕಾರಿಗಳಿಗೆ ನೀಡಿದ ಜೀಪ್ ಬಳಕೆ ಇಲ್ಲದೇ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ.
ಶಿಶು ಅಭಿವೃದ್ಧಿ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಈ ಹಿಂದೆ ಸ್ತ್ರೀಶಕ್ತಿ ಭವನ ಸಿಡಿಪಿಒ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಕಟ್ಟಡದ ಛತ್ತು ಉದುರಿ ಅಲ್ಪಸ್ವಲ್ಪ ದುರಸ್ತಿಗೀಡಾದ ನೆಪದಲ್ಲಿ ಸಿಡಿಪಿಒ ಕಚೇರಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆಗಿಂದ ಸ್ತ್ರೀ ಶಕ್ತಿ ಭವನ ಸದ್ಬಳಕೆಯಾಗದೇ ನಿರುಪಯುಕ್ತವಾಗಿದೆ.
ಈ ಹಿಂದೆ ಇದ್ದ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸುನೀತಾ ಸಿದ್ರಾಮ ಸಿಡಿಪಿಒ ಕಚೇರಿಯನ್ನು ಬಾಡಿಗೆ ಕಟ್ಟಡದಿಂದ ಸ್ತ್ರೀ ಶಕ್ತಿ ಭವನಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈವರೆಗೆ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ. ಅಲ್ಲದೇ ಅಧಿಕಾರಿಗಳ ಆದೇಶಕ್ಕೆ ಇಲ್ಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಸ್ತ್ರೀ ಶಕ್ತಿ ಭವನದಲ್ಲಿ ಅಲ್ಪಸ್ವಲ್ಪ ದುರಸ್ತಿ ಇದ್ದು ಅದನ್ನೂ ಮಾಡುತ್ತಿಲ್ಲ. ಹೀಗಾಗಿ ಕಟ್ಟಡದ ಸಾಮರ್ಥಯ ದಿನೇದಿನೇ ಹಾಳಾಗುತ್ತಿದೆ. ಅಲ್ಲದೇ ಕಟ್ಟಡ ಪುಂಡ, ಪೋಕರಿಗಳ ಅನೈತಿಕ ಚಟುವಟಿಕೆಗಳಿಗೆ ತಾಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಟ್ಟಡದ ಸುತ್ತಲೂ ಜಾಲಿಗಿಡ, ಕಸಕಡ್ಡಿಗಳು ತುಂಬಿವೆ.
ವಾಹನ ನಿರುಪಯುಕ್ತ: ಸಿಡಿಪಿಒ ಅಧಿಕಾರಿಗಳಿಗೆ ಬಾಡಿಗೆ ವಾಹನ ಒದಗಿಸಲಾಗಿದೆ. ಹೀಗಾಗಿ ಇಲಾಖೆಯ ಜೀಪ್ ಬಳಕೆ ಇಲ್ಲದೇ ಸ್ತ್ರೀ ಶಕ್ತಿ ಭವನದ ಆವರಣದಲ್ಲಿ ನಿಂತಲ್ಲೇ ನಿಂತಿದೆ. ಸಿಡಿಪಿಒ ಇಲಾಖೆ ಬಾಡಿಗೆ ಕಟ್ಟಡ ಮತ್ತು
ವಾಹನಕ್ಕೆ ಪ್ರತಿ ವರ್ಷ ಲಕ್ಷಾಂತರ ರೂ. ವ್ಯಯಿಸುತ್ತಿದೆ. ಇಲಾಖೆಗೆ ಸ್ವಂತ ಕಟ್ಟಡ ಮತ್ತು ವಾಹನ ಇದ್ದರೂ ಅಧಿಕಾರಿಗಳು ಬಳಸಿಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ. ಕೂಡಲೇ ಸ್ತ್ರೀ ಶಕ್ತಿ ಭವನ ದುರಸ್ತಿಗೊಳಿಸಿ ಅಲ್ಲಿ ಸಿಡಿಪಿಒ ಕಚೇರಿ ಸ್ಥಳಾಂತರಿಸಬೇಕು ಮತ್ತು ವಾಹನ ಸದ್ಬಳಕೆಗೆ ಮುಂದಾಗಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಗೋಪಳಾಪುರ, ದಲಿತ ಸಂಘಟನೆ ಅಧ್ಯಕ್ಷ ರಂಗನಾಥ ಜಾಲಹಳ್ಳಿ ಇತರರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.