ಮೌಡ್ಯ ತೊಲಗಿಸುವ ಕೆಲಸವೇ ನಮ್ಮ ಗುರಿ: ವೀರಭದ್ರಪ್ಪ
Team Udayavani, Aug 5, 2022, 7:15 PM IST
ಸಿಂಧನೂರು: ಜನರಲ್ಲಿ ಸಾಕಷ್ಟು ಮೌಡ್ಯ ಆಚರಣೆಗಳ ಬಗ್ಗೆ ನಂಬಿಕೆಯಿದೆ. ಬಸವಣ್ಣನವರ ಆಶಯದಂತೆ ಅವುಗಳನ್ನು ತೊಲಗಿಸುವುದೇ ನಮ್ಮ ಉದ್ದೇಶ ಎಂದು ಬಸವ ಕೇಂದ್ರದ ಜಿಲ್ಲಾ ಗೌರವಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.
ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ಇರುವ ಅನುದಾನಿತ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಬಸವ ಕೇಂದ್ರದಿಂದ ಗುರುವಾರ ಹಮ್ಮಿಕೊಂಡಿದ್ದ ಬಸವ ಪಂಚಮಿಯಲ್ಲಿ ಅವರು ಮಾತನಾಡಿದರು.
ಮೌಡ್ಯತೆಯನ್ನು ಬಿತ್ತುವ ಕೆಲಸ ಈ ಸಮಾಜದಲ್ಲಿ ನಡೆಯುತ್ತಿದೆ. ಅದನ್ನು ತೊಲಗಿಸುವ ನಿಟ್ಟಿನಲ್ಲಿ ನಾವು ಬಸವ ಪಂಚಮಿ ಆಚರಣೆ ಮಾಡುತ್ತಿದ್ದು, ನಾಗರ ಪಂಚಮಿಯ ದಿನ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಧುನಿಕ ಸಮಾಜ ಪ್ರಗತಿಪರವಾಗಿ ಮುನ್ನಡೆಯಬೇಕು. ಯಾವುದೋ ಪುರಾತನ ಮೌಡ್ಯಗಳಿಗೆ ಜೋತು ಬೀಳಬಾರದು. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಪರಿವರ್ತನೆ ಬಯಸಿದ್ದ ಬಸವೇಶ್ವರರ ಆದರ್ಶಗಳನ್ನು ಇಂದು ಸಮಾಜ ಪಾಲನೆ ಮಾಡಬೇಕಿದೆ ಎಂದರು.
ಬಸವ ಕೇಂದ್ರ ಮುಖ್ಯಸ್ಥರಾದ ಸಿದ್ದರಾಮಪ್ಪ ಸಾಹುಕಾರ ಮಾಡಸಿರವಾರ, ಎಚ್.ಜಿ. ಹಂಪಣ್ಣ, ಬಸವ ಕೇಂದ್ರ ಮಾಜಿ ಅಧ್ಯಕ್ಷ ಕೆ.ಶರಣಪ್ಪ ಟೆಂಗಿನಕಾಯಿ, ಗುಂಡಪ್ಪ ಬಳಿಗಾರ ಸೇರಿದಂತೆ ಅನೇಕರು ಇದ್ದರು. ಶಾಲೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ಸನ್ಮಾನ: ಇದೇ ವೇಳೆ ನಿವೃತ್ತ ಶಿಕ್ಷಕರಾದ ಗಂಗನಗೌಡ ಪಾಟೀಲ್, ವೆಂಕಟನಗೌಡ ವಟಗಲ್, ಲಕ್ಷ್ಮೀದೇವಿ ಅವರನ್ನು ಬಸವ ಕೇಂದ್ರದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.