ಸೊರಗುತ್ತಿದೆ ಆಕ್ಸಿಜನ್ ಪಾಯಿಂಟ್
Team Udayavani, Jan 4, 2018, 4:26 PM IST
ಹಟ್ಟಿ ಚಿನ್ನದ ಗಣಿ: ಗೋಲಪಲ್ಲಿ ಸೇತುವೆ ಹತ್ತಿರ ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡು ಅರಣ್ಯ ಇಲಾಖೆಯಿಂದ ನಿರ್ಮಿಸಿದ ಆಕ್ಸಿಜನ್ ಪಾಯಿಂಟ್ ಎಂಬ ಉದ್ಯಾನ ನಿರ್ವಹಣೆ ಕೊರತೆಯಿಂದ ಸೋರಗಿದೆ.
ಅರಣ್ಯ ಇಲಾಖೆ ಮೂರು ವರ್ಷದ ಹಿಂದೆ ಪ್ರವಾಸಿಗರ ವಿಶ್ರಾಂತಿಗಾಗಿ ಗೋಲಪಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಆಕ್ಸಿಜನ್ ಪಾಯಿಂಟ್ ಉದ್ಯಾನ ಆರಂಭಿಸಿದೆ. ಈ ಮಾರ್ಗದಲ್ಲಿ ಹಾದು ಹೋಗುವ ಪ್ರಯಾಣಿಕರು ಹಾಗೂ ಪ್ರವಾಸಿಗರು ವಿಶ್ರಮಿಸಿ ಶುದ್ಧಗಾಳಿ ಸೇವಿಸಲಿ ಎಂಬ ಉದ್ದೇಶದಿಂದ ಈ ಪಾಯಿಂಟ್ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಸಸಿಗಳು, ಗಿಡಗಳು ಒಣಗುತ್ತಿವೆ.
ಆಕ್ಸಿಜನ್ ಪಾಯಿಂಟ್‌ನಲ್ಲಿ ಎಲ್ಲ ರೀತಿಯ ಸಸಿಗಳನ್ನು ನೆಡಲಾಗಿದೆ. ಆದರೆ ಅರಣ್ಯ ಇಲಾಖೆ ಸಸಿಗಳ ಪಾಲನೆ ಪೋಷಣೆಗೆ ಗಮನಹರಿಸದ್ದರಿಂದ ಸಸಿಗಳು, ಗಿಡಗಳು ಒಣಗುತ್ತಿವೆ. ವನದ ಸುತ್ತುವರಿದ ಮುಳ್ಳಿನ ಗಿಡದಿಂದಲೇ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಒಳ ಪ್ರವೇಶಿಸಲು ದ್ವಾರವೊಂದಕ್ಕೆ ಕಟ್ಟಿಗೆ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅವು ಹಾಳಾಗಿವೆ. ಅರಣ್ಯ ಇಲಾಖೆಯಿಂದ ಸಮರ್ಪಕ
ನಿರ್ವಹಣೆ ನಡೆಯದ ಪರಿಣಾಮ ಕೆಲವು ಸಸಿಗಳು ಬೆಳದರೆ ಇನ್ನೂ ಕೆಲವು ಸಸಿಗಳು ಒಣಗಿವೆ.
ಸರಿಯಾದ ಪಾಲನೆ ಪೋಷಣೆ ನಡೆದಿದ್ದರೆ ಈ ಆಕ್ಷಿಜನ್ ಪಾಯಿಂಟ್ ಉದ್ಯಾನ ಪ್ರವಾಸಿಗರ ಆಕರ್ಷಣೆಯ ತಾಣವಾಗುತ್ತಿತ್ತು. ಅರಣ್ಯ ಇಲಾಖೆಯಲ್ಲಿ ಯೋಜನೆ ಇದೆ ಎಂದು ಹೆಸರಿಗೆ ಮಾತ್ರ ಎಂಬಂತೆ ಆಕ್ಸಿಜನ್ ಪಾಯಿಂಟ್ ಉದ್ಯಾನವನ ಆರಂಭಿಸಿದಂತಿದೆ.
ದನ-ಕುರಿಗಳಿಗೆ ಮೇಯುವ ತಾಣ: ಸಸಿಗಳು ಬೆಳೆದು ನೆರಳು ಕೊಡುವವರೆಗೂ ಸಂರಕ್ಷಣೆ ಮಾಡಿದರೆ ಮಾತ್ರ ಆಕ್ಸಿಜನ್
ಪಾಯಿಂಟ್ ಪ್ರವಾಸಿಗರನ್ನು ಸೆಳೆಯಲಿದೆ. ಇಲ್ಲವಾದರೆ ಹಾಳಾಗಿ ಹೋಗುವುದರಲ್ಲಿ ಅನುಮಾನವಿಲ್ಲ. ಸುತ್ತಮುತ್ತಲಿನ ದೊಡ್ಡಿಗಳ ದನ, ಕುರಿಗಳು ಇಲ್ಲಿಗೆ ಮೇಯಲು ಬರುತ್ತಿವೆ. ಇವುಗಳ ಬಾಯಿಗೆ ಸಿಕ್ಕು ಸಸಿಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂರಕ್ಷಣೆಗೆ ಮುಂದಾಗಬೇಕಾಗಿದೆ.
ಗುರುಗುಂಟಾ ಹಾಗೂ ಗೋಲಪಲ್ಲಿ ಮಧ್ಯದಲ್ಲಿ ಅರಣ್ಯ ಇಲಾಖೆಯವರು ಸ್ಥಾಪಿಸಿರುವ ಆಕ್ಸಿಜನ್ ಪಾಯಿಂಟ್ ಉದ್ಯಾನದಲ್ಲಿ ನಿರ್ವಹಣೆ ಇಲ್ಲದೆ ಸಸಿಗಳು ಹಾಳಾಗಿವೆ. ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡು ಇದನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದುರುಗಪ್ಪ, ಗುರುಗುಂಟಾ ನಿವಾಸಿ
ಗೋಲಪಲ್ಲಿ ಸೇತುವೆ ಹತ್ತಿರದಲ್ಲಿರುವ ಆಕ್ಸಿಜನ್ ಪಾಯಿಟ್‌ನಲ್ಲಿ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆಗಾಗಿ ಪ್ರತ್ಯೇಕ ಸಿಬ್ಬಂದಿ ಇಲ್ಲ. ನಮ್ಮ ಸಿಬ್ಬಂದಿ ನಿರ್ವಹಣೆ ಮಾಡುತ್ತಿದ್ದಾರೆ. ಆಕ್ಸಿಜನ್ ಪಾಯಿಂಟ್‌ನ್ನು ನಿರ್ಲಕ್ಷಿಸಿಲ್ಲ. ಎಸ್.ಕೆ. ಕಾಂಬ್ಳೆ, ವಲಯ ಅರಣ್ಯಾಧಿಕಾರಿ
ಲಿಂಗಸುಗೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.