ಭತ್ತ ಖರೀದಿ ಕೇಂದ್ರಕ್ಕೆ ಅಂಟಿದ ಶಾಪ ತೊಲಗೀತೇ?
Team Udayavani, Apr 24, 2021, 2:49 PM IST
ಸಿಂಧನೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಹೇರಳವಾಗಿ ಭತ್ತ ಬೆಳೆಯಲಾಗುತ್ತಿದ್ದರೂ ಬೆಂಬಲಬೆಲೆಯಡಿ ಖರೀದಿಸುವಲ್ಲಿ ಯಶಸ್ಸನ್ನೇ ಕಂಡಿಲ್ಲ.ಖರೀದಿ ಕೇಂದ್ರಗಳು ತೆರೆದರೂ ಬೆದರಗೊಂಬೆಗಳೆಂಬ ಶಾಪಕ್ಕೆ ಗುರಿಯಾಗಿದ್ದು, ಈ ಬಾರಿಯಾದರೂ ಶಾಪ ವಿಮೋಚನೆಯಾದೀತೇ? ಎಂಬ ಪ್ರಶ್ನೆ ಎದ್ದಿದೆ.
ಎಂದಿನಂತೆ ಈ ಬಾರಿಯೂ ಸರಕಾರ 2021-22ನೇಸಾಲಿಗೆ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರ ತೆರೆಯಲು ಹಸಿರು ನಿಶಾನೆ ತೋರಿಸಲಾಗಿದೆ. ಸಹಜವಾಗಿಯೇ ರೈತರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಕಳೆದ ಎರಡು ದಶಕಗಳಿಂದ ಹೋರಾಟದ ಬಳಿಕ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು.
ಸರಕಾರ ವಿಧಿ ಸಿದ ಷರತ್ತುಗಳನ್ನು ಪೂರೈಸಲಾಗದ ಹಿನ್ನೆಲೆಯಲ್ಲಿ ರೈತರು ಖಾಸಗಿ ವರ್ತಕರ ಕಡೆಗೆಮುಖ ಮಾಡುತ್ತಿದ್ದರು. ಸರಕಾರ ತೆರೆದ ಅಂಗಡಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುತ್ತಿದ್ದವು. 3.50 ಲಕ್ಷ ಕ್ವಿಂಟಲ್‌ನಷ್ಟು ಜೋಳವನ್ನು ಖರೀದಿ ಮಾಡಿರುವುದರಿಂದ ಅದೇ ಹುಮ್ಮಸ್ಸಿನಲ್ಲಿ ಭತ್ತವನ್ನುಕೂಡ ಖರೀದಿ ಮಾಡುತ್ತೇವೆ ಎಂಬ ಅಭಿಪ್ರಾಯಗಳುಆಡಳಿತ ವರ್ಗದಿಂದ ಕೇಳಿಬಂದಿದ್ದು, ಚರ್ಚೆಗೆನಾಂದಿ ಹಾಡಿದೆ.
ಇತಿಹಾಸದಲ್ಲೇ ಮೊದಲು, ಐದೇ ರೈತರು:ಮಾರುಕಟ್ಟೆಯಲ್ಲಿ ಬೆಲೆ ಚೇತರಿಕೆಗೆ ಪೂರಕವೆಂಬಕಾರಣಕ್ಕೆ ಬೆದುರುಗೊಂಬೆಯಂತೆ ಈ ಕೇಂದ್ರಗಳನ್ನುಬಳಸಿಕೊಳ್ಳಲಾಗುತ್ತಿತ್ತು. ಈ ಬಾರಿ ಖರೀದಿ ಮಾಡೇತೀರುತ್ತೇವೆ ಎಂದು ಸ್ವತಃ ಅ ಧಿಕಾರಿಗಳು ಕಳೆದವರ್ಷ ರೈತರ ಜಮೀನುಗಳಿಗೆ ಹೋಗಿದ್ದರು.
ಅಭಿಯಾನ ಮಾದರಿಯಲ್ಲಿ ಪ್ರತಿದಿನ ರೈತರಜಮೀನುಗಳಿಗೆ ಹೋಗಿ ಮನವೊಲಿಸಿ ಬಗ್ಗೆಯೂಹೇಳಿಕೊಂಡಿದ್ದರು. ಈ ಎಲ್ಲ ಕಸರತ್ತಿನ ಬಳಿಕ ಐವರುರೈತರಿಂದ ಮಾತ್ರ ತಲಾ 75 ಕ್ವಿಂಟಲ್‌ನಂತೆ 375ಕ್ವಿಂಟಲ್ ಖರೀದಿ ಮಾಡುವ ಮೂಲಕ ಒಂದೇಚೀಲ ಭತ್ತ ಖರೀದಿಸುವುದಿಲ್ಲವೆಂಬ ಅಪವಾದಿಂದಮುಕ್ತವಾಗಿದ್ದರು.
ಈ ಬಾರಿ ಮತ್ತೆ ನಿರೀಕ್ಷೆ: 2021-22ನೇ ಸಾಲಿಗೆಸಂಬಂಧಿ ಸಿ ಖರೀದಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ1,868 ರೂ., ಎ.ಗ್ರೇಡ್ ಭತ್ತ ಕ್ವಿಂಟಲ್‌ಗೆ 1,888ರೂ.ನಂತೆ ಖರೀದಿಸಬೇಕಿದೆ. ಕರ್ನಾಟಕ ಆಹಾರನಿಗಮದ 5 ಮಳಿಗೆಗಳು ಸೇರಿದಂತೆ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡುಜಿಲ್ಲೆಯಲ್ಲಿ 35 ಕೇಂದ್ರಗಳನ್ನು ನೋಂದಣಿಗೆ ಗುರುತಿಸಲಾಗಿದೆ.
ಏ.1ರಿಂದಲೇ ಅನ್ವಯಿಸುವಂತೆಕೃಷಿ ಇಲಾಖೆಯ ಪೂÅಟ್ಸ್ ಐಡಿಯ ಪ್ರಕಾರಹೆಸರುಗಳನ್ನು ರೈತರು ನಮೂದಿಸಬೇಕಿದೆ. ಏ.1ರಿಂದಜೂನ್, 30, 2021ರ ತನಕ ಖರೀದಿ ನಡೆಯಲಿದೆ.ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ದರ ಪ್ರತಿ ಕ್ವಿಂಟಲ್‌ಗೆ 1,650 ರೂ. ನಂತಿದ್ದರೆ, ಕಾವೇರಿ ಸೋನಾಕ್ಕೆ1,700 ರೂ. ಸಿಗುತ್ತಿದೆ.
ಬೆಂಬಲ ಬೆಲೆಗೂ ಮುಕ್ತಮಾರುಕಟ್ಟೆಯ ದರಕ್ಕೂ ವ್ಯತ್ಯಾಸ ಇರುವುದರಿಂದಖರೀದಿ ನಡೆದರೆ, ರೈತರಿಗೆ ಅನುಕೂಲವಾಗಲಿದೆ.ಕಳೆದ ಬಾರಿ ಸಮರೋಪಾದಿಯಲ್ಲಿ ಕೆಲಸಆರಂಭಿಸಿದಾಗಲೂ ವಿಫಲವಾಗಿದ್ದ ಆಡಳಿತ ವರ್ಗ,ಈ ಸಲವಾದರೂ ಭತ್ತ ಖರೀದಿಯ ಮೂಲಕರೈತರಲ್ಲಿ ನಿರೀಕ್ಷೆ ಮೂಡಿಸುವುದೇ? ಎಂಬುದನ್ನುಕಾದು ನೋಡಬೇಕಿದೆ.
ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.