ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
Team Udayavani, Apr 23, 2022, 5:59 PM IST
ದೇವದುರ್ಗ: ಪಟ್ಟಣದ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಬೈಕ್‌ಗಳು, ವಾಹನಗಳು ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ನಿವಾರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೈಕ್ ಗಳನ್ನು ನಿಲ್ಲಿಸುವುದರಿಂದ ಕಚೇರಿಗೆ ಅಧಿಕಾರಿಗಳು ಜನಸಾಮಾನ್ಯರು ದಾಟಿ ಹೋಗಲು ಹರಸಾಹಸ ಪಡುವಂತಾಗಿದೆ. ಅದರಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದೆ.
ಎಸ್‌ಬಿಎಚ್ ಬ್ಯಾಂಕ್ ಮುಂಭಾಗದಲ್ಲಿ ಗ್ರಾಹಕರು ರಸ್ತೆ ಮಧ್ಯೆ ಬೈಕ್‌ಗಳು ಬಿಟ್ಟು ಹೋಗುವುದರಿಂದ ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಪೊಲೀಸ್ ಸಿಬ್ಬಂದಿಗೆ ತಲೆ ನೋವಾಗಿದೆ.
ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜೆಪಿ ವೃತ್ತದವರೆಗೆ ಹೆದ್ದಾರಿ ಕಿರಿದಾಗಿದೆ. ಹಿಗೀರುವಾಗಲೆ ಹೋಟೆಲ್, ಪಾನ್‌ಶಾಪ್ ಬ್ಯಾಂಕ್ ಸೇರಿದಂತೆ ಇತರೆ ಅಂಗಡಿಗಳ ಮುಂದೆ ಎಲ್ಲೆಂದರಲ್ಲಿ ಬೈಕ್ ಬಿಟ್ಟು ಹೋಗುವ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿ ಸಾಹಸ ಪಡಬೇಕಾಗಿದೆ.
ಬಸ್ ನಿಲ್ದಾಣ ಮುಂಭಾಗದ ರಾಜ್ಯ ಹೆದ್ದಾರಿ ಅಕ್ಕಪಕ್ಕದ ಅಂಗಡಿಗಳು ಮುಂದೆ ಅಲ್ಲಲ್ಲಿ ಬೈಕ್‌ಗಳು ನಿಲ್ಲಿಸುವುದರಿಂದ ಇನ್ನೊಂದು ಬೈಕಿಗೆ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಚಿಕ್ಕಬೂದುವರ ಕಾಂಪ್ಲೆಕ್ಸ್ ಮುಂದೆ ಟಂಟಂ ವಾಹನಗಳು, ಬೈಕ್‌ಗಳು ಬಿಟ್ಟು ಹೋಗುವುದರಿಂದ ಈ ರಸ್ತೆ ಮಾರ್ಗವಾಗಿ ಬರುವ ವಾಹನಗಳು ನಿಮಿಷವಾದರೂ ರಸ್ತೆ ಮಧ್ಯೆ ನಿಲ್ಲುವಂತಹ ಸ್ಥಿತಿ ಬಂದಿದೆ. ರಾಜ್ಯ ಹೆದ್ದಾರಿ ಮಧ್ಯೆಯೇ ವ್ಯಾಪಾರ ವಾಹಿವಾಟು ಹೆಚ್ಚಾದ್ದರಿಂದ ಇಲ್ಲಿ ಚಲ್ಲಿಸುವ ಬಹುತೇಕ ವಾಹನಗಳು ಹರಸಾಹಸ ಪಡುವಂತಾಗಿದೆ.
ಬಟ್ಟೆ ಅಂಗಡಿ, ಮೊಬೈಲ್, ಪಾನ್‌ಶಾಪ್ ಸೇರಿದಂತೆ ಇತರೆ ಅಂಗಡಿಗಳ ಮುಂದೆ ಬೈಕ್ ಗಳು ನಿಲ್ಲಿಸುವುದರಿಂದ ಟ್ರಾಫಿಕ್ ನಿರ್ವಹಣೆ ತೊಂದರೆಯಾಗಿದೆ. ಅದರಲ್ಲಿ ಮರಳು ವಾಹನಗಳ ಹಗಲು ರಾತ್ರಿ ಎನ್ನದೇ ಓಡಾಟ ಅಡ್ಡಾದಿಡ್ಡಿ ರಸ್ತೆ ಮಧ್ಯೆ ನಿಲ್ಲಿಸುವುದರಿಂದ ಸಮಸ್ಯೆ ಉಂಟಾಗಿದೆ.
ಮಿನಿವಿಧಾನಸೌಧ ಕಚೇರಿಗೆ ಮುಂಭಾಗದಲ್ಲಿ ಬೈಕ್‌ಗಳು ನಿಲ್ಲಿಸುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಬೈಕ್‌ಗಳನ್ನು ನಿಲ್ಲಿಸದಂತೆ ಸಿಬ್ಬಂದಿಗಳಿಂದ ಜಾಗೃತಿ ಮೂಡಿಸಲಾಗಿದೆ. -ಶ್ರೀನಿವಾಸ ಚಾಪಲ್, ತಹಶೀಲ್ದಾರ್
ಟ್ರಾಫಿಕ್ ನಿಯಂತ್ರಣ ಮಾಡಲು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಅಡ್ಡಾದಿಡ್ಡಿ ಬೈಕ್, ವಾಹನಗಳು ನಿಲ್ಲಿಸುವುದನ್ನು ಹತೋಟಿಗೆ ತರಲು ಕ್ರಮವಹಿಸಲಾಗಿದೆ. -ಎಸ್.ಬಿ. ಸಣ್ಣಮನಿ, ಪಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.