ವಿವಿಧ ಇಲಾಖೆ ಸಿಬ್ಬಂದಿ ಪರದಾಟ
• ಮಕ್ಕಳ ಶಾಲಾ ಶುಲ್ಕ ಪಾವತಿ-ಕುಟುಂಬ ನಿರ್ವಹಣೆಗೆ ಸಂಕಷ್ಟ • ನಿತ್ಯ ಕಚೇರಿಗೆ ಅಲೆದಾಟ
Team Udayavani, Jun 11, 2019, 10:19 AM IST
ದೇವದುರ್ಗ: ಅರಕೇರಾ ಗ್ರಾಪಂ ಕಾರ್ಯಾಲಯ.
ದೇವದುರ್ಗ: ಗ್ರಾಮ ಪಂಚಾಯಿತಿ, ಪುರಸಭೆ, ಸಿಡಿಪಿಒ, ಸರ್ಕಾರಿ ಆಸ್ಪತ್ರೆ, ಸಿಡಿಪಿಒ, ವಸತಿ ನಿಲಯ ಸೇರಿ ಇಲಾಖೆ ಸಿಬ್ಬಂದಿಗೆ ಹಲವು ತಿಂಗಳ ವೇತನ ಆಗದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ನಿತ್ಯ ಇಲಾಖೆ ಕಚೇರಿಗೆ ಅಲೆದಾಡುವಂತಾಗಿದೆ.
ಗ್ರಾಪಂ ಸಿಬ್ಬಂದಿಗೆ 23 ತಿಂಗಳ ವೇತನ ಬಾಕಿ: ತಾಲೂಕಿನ 33 ಗ್ರಾಪಂ ವ್ಯಾಪ್ತಿಯ 22ಜನ ಕಂಪ್ಯೂಟರ್ ಆಪರೇಟರ್‌ಗಳಿಗೆ 23 ತಿಂಗಳಿಂದ ವೇತನ ಪಾವತಿ ಆಗಿಲ್ಲ. ನೀರು ನಿರ್ವಹಣೆ, ವಿದ್ಯುತ್, ಕರ ವಸೂಲಿ, ಪರಿಚಾರಕರು ಸೇರಿ ಇತರೆ ಕೆಲಸಕ್ಕೆ ನಿಯೋಜನೆಗೊಂಡ 295 ದಿನಗೂಲಿ ಸಿಬ್ಬಂದಿಗಳಿಗೆ ವರ್ಷದಿಂದ ವೇತನ ಆಗಿಲ್ಲ. ವೇತನ ಪಾವತಿಸುವಂತೆ ತಾಲೂಕು ಪಂಚಾಯಿತಿ ಸೇರಿ ಬೆಂಗಳೂರು ವಿಧಾನಸೌಧವರೆಗೆ ಸಿಬ್ಬಂದಿಗಳು ಹೋರಾಟ ಕೈಗೊಂಡರು ಅಧಿಕಾರಿಗಳು ವೇತನ ಪಾವತಿಸಿಲ್ಲ. ಹೀಗಾಗಿ ಮಕ್ಕಳ ಶಾಲಾ-ಕಾಲೇಜು ಶುಲ್ಕ ಪಾವತಿ, ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.
ಆಶಾ ಕಾರ್ಯಕರ್ತಯರಿಗಿಲ್ಲ ವೇತನ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸರಕಾರಿ ಆಸ್ಪತ್ರೆ ಅಧಿಧೀನದಲ್ಲಿ ಕೆಲಸ ಮಾಡುವ 236 236 ಆಶಾ ಕಾರ್ಯಕರ್ತೆಯರಿಗೆ ವೇತನ ವಿಳಂಬವಾಗಿದೆ. ಪ್ರಸಕ್ತ ವರ್ಷ ಮಾರ್ಚ್, ಏಪ್ರಿಲ್, ಮೇ ಮೂರು ತಿಂಗಳ ಸಹಾಯಧನ ಕೂಡ ಪಾವತಿಸಿಲ್ಲ. 2018ರಲ್ಲಿನ 9 ತಿಂಗಳ ಸಹಾಯಧನ ಬಾಕಿ ಉಳಿದಿದೆ. ಎಂಸಿಟಿಸಿ ಮೂಲಕ ಸಹಾಯಧನ ಪೂರೈಸಲಾಗುತ್ತಿತ್ತು. ಹಲವು ಬಾರಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರೂ ಸಹಾಯಧನ, ವೇತನ ವಿಳಂಬವಾಗಿದೆ ಎಂದು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು: ಪಟ್ಟಣ ಸೇರಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 470 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಾಲ್ಕು ತಿಂಗಳಿನಿಂದ ವೇತನ ಪಾವತಿಸಿಲ್ಲ. ಈಗಾಗಲೇ ಎರಡ್ಮೂರು ಬಾರಿ ತಾಪಂ ಎದುರು ಧರಣಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಕಾರ್ಯಕರ್ತೆಯರು ನಿತ್ಯ ಸಿಡಿಪಿಒ ಕಚೇರಿಗೆ ಅಲೆದಾಡುತ್ತಿದ್ದಾರೆ.
ಪೌರ ಸಿಬ್ಬಂದಿ: ಪುರಸಭೆಯ 45 ಜನ ದಿನಗೂಲಿ ಪೌರ ಕಾರ್ಮಿಕರಿಗೆ 15 ತಿಂಗಳಿಂದ ವೇತನ ಪಾವತಿಸಿಲ್ಲ. ಈ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಪುರಸಭೆ ಎದುರು ಹೋರಾಟ ನಡೆಸಿದರೂ ಪುರಸಭೆ ಅಧಿಕಾರಿಗಳು ವೇತನ ಬಟವಡೆ ಮಾಡದೇ ಸತಾಯಿಸುತ್ತಿದ್ದಾರೆ ಎಂದು ಪೌರ ಕಾರ್ಮಿಕರು ದೂರಿದ್ದಾರೆ.
ವಸತಿ ನಿಲಯ: ಸಮಾಜ ಕಲ್ಯಾಣ, ಬಿಸಿಎಂ, ಎಸ್‌ಟಿ ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮೂರ್‍ನಾಲ್ಕು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಇದೀಗ ಶಾಲಾ-ಕಾಲೇಜು ಆರಂಭವಾಗಿವೆ. ಮಕ್ಕಳ ಶಿಕ್ಷಣ ಶುಲ್ಕ ಪಾವತಿ ಸಮವಸ್ತ್ರ, ಪುಸ್ತಕ ಖರೀದಿಗೆ ಹಣದ ಅವಶ್ಯ ಅಗತ್ಯವಾಗಿದೆ. ಆದರೆ ವೇತನ ಪಾವತಿ ಆಗದ್ದರಿಂದ ನಿತ್ಯ ಕಚೇರಿಗೆ ಅಲೆಯುತ್ತಿದ್ದೇವೆ ಎಂದು ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
•ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.