ಭಾರೀ ಬಿರುಗಾಳಿಗೆ ಜನ ತತ್ತರ
Team Udayavani, May 4, 2018, 5:30 PM IST
ರಾಯಚೂರು: ಜಿಲ್ಲಾದ್ಯಂತ ಗುರುವಾರ ಸಂಜೆ ಸತತ ಎರಡೂವರೆ ಗಂಟೆಗಳ ಬೀಸಿದ ಬಿರುಗಾಳಿ ನಾನಾ ಅವಾಂತರಗಳನ್ನು ಸೃಷ್ಟಿಸಿತು. ಗಿಡ, ಮರಗಳು ನೆಲಕ್ಕುರುಳಿದರೆ, ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೆಡೆ ಶೆಡ್, ಮನೆಗಳ ಟಿನ್‌ಗಳು ಹಾರಿಹೋಗಿ ಜನ ಪರದಾಡುವಂತಾಯಿತು.
ಬಿರುಗಾಳಿಗೆ ಸಂಜೆ ರಸ್ತೆಯಲ್ಲಿ ಧೂಳೆದ್ದು ಪ್ರಯಾಣಿಕರು, ಪಾದಚಾರಿಗಳು ಪರದಾಡುವಂತಾಯಿತು. ಸಂಜೆ ಐದು ಗಂಟೆಯಿಂದ ಶುರುವಾದ ಬಿರುಗಾಳಿಗೆ ಜನ ತತ್ತರಿಸಿ ಹೋದರು. ಬೈಕ್ ಸವಾರರು ವಾಹನ ಚಾಲನೆ ಮಾಡಲಾರದಷ್ಟು ಗಾಳಿ ಬೀಸಿತು. ಇದರಿಂದ ಎರಡೂವರೆ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಜನರನ್ನು ಬಿರುಗಾಳಿ ಬಾಧಿ ಸಿತು.
ನಗರದ ವಿದ್ಯಾಭಾರತಿ ಶಾಲೆ ಪಕ್ಕ ಮರ ನೆಲಕ್ಕುರುಳಿದೆ. ನಗರದಲ್ಲಿ ಬಹುತೇಕ ಸಂಚಾರ ಸ್ಥಬ್ಧಗೊಂಡಿತ್ತು. ಚುನಾವಣೆ ಕಾರ್ಯಗಳಿಗೆ ನಿಯೋಜನೆಗೊಂಡ ಸಿಬ್ಬಂದಿ ಬಿರುಗಾಳಿಯನ್ನು ಲೆಕ್ಕಿಸದೆ ಕೆಲಸ ಮಾಡಿದರೆ, ಕೆಲವೆಡೆ ಆಶ್ರಯಕ್ಕಾಗಿ ಪರದಾಡಿದರು. ಮದುವೆ ದಿನಗಳಾದ್ದರಿಂದ ಶಾಮೀಯಾನಗಳು ಗಾಳಿಗೆ ಹಾರಿದರೆ, ವಿದ್ಯುದಾಲಂಕಾರಕ್ಕಾಗಿ ಅಳವಡಿಸಿದ ಎಲ್‌ಇಡಿ ಬಲ್ಬ್ ಮತ್ತು
ಸ್ಕ್ರೀನ್‌ಗಳು ಒಡೆದು ಸಾವಿರಾರು ರೂ. ಮೌಲ್ಯದ ವಸ್ತುಗಳು ಹಾಳಾದವು. ಹಳ್ಳಿಗಳಲ್ಲಿ ಗುಡಿಸಲುಗಳ ಮೇಲ್ಛಾವಣಿ ತಗಡುಗಳು ಹಾರಿ ಹೋಗಿವೆ.
ಹಂದರ ಕಾಪಾಡಲು ಹರಸಾಹಸ: ಮದುವೆಗಾಗಿ ಹಳ್ಳಿಗಳಲ್ಲಿ ಹಂದರ ಹಾಕಲಾಗುತ್ತದೆ. ಅಲ್ಲಿ ನಿರಂತರ ದೀಪ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ, ವಿಪರೀತ ಗಾಳಿಗೆ ಹಂದ್ರಗಳು ಮೇಲೆದ್ದು ಹೋಗುವುದನ್ನು ತಡೆಯಲು ಮದುವೆ ಮನೆಯವರು ಸಾಕಷ್ಟು ಹರಸಾಹಸ ಪಟ್ಟರು. ಹಾಗೆ ಹೋಗುವುದು ಅಪಶಕುನ ಎನ್ನುವ ಕಾರಣಕ್ಕೆ ಹಂದರ ಕಾಪಾಡುವುದೇ ದೊಡ್ಡ ಕೆಲಸವಾಗಿತ್ತು.
ಸಂಜೆ ವ್ಯಾಪಾರಕ್ಕೆ ಕುತ್ತು: ಸಂಜೆಯಾದರೆ ಸಾಕು ಸಾವಿರಾರು ರೂ. ವಹಿವಾಟು ಮಾಡುತ್ತಿದ್ದ ರಸ್ತೆ ಬದಿ ವ್ಯಾಪಾರಿಗಳು ಭಾರೀ ಗಾಳಿ ಹೊಡೆತಕ್ಕೆ ನಷ್ಟ ದುರಿಸುವಂತಾಯಿತು. ಸಂಜೆ ಐದು ಗಂಟೆಯಿಂದಲೇ ಬಿರುಗಾಳಿ ಶುರುವಾದ್ದರಿಂದ ಜನ ಮನೆಗಳತ್ತ ಮುಖ ಮಾಡಿದರು. ಇದರಿಂದ ರಸ್ತೆ ಬದಿ ಮಿರ್ಚಿ ಭಜ್ಜಿ, ಪಾನಿಪುರಿ, ಪಾಪಡ್ ಸೇರಿ ವಿವಿಧ ತಿಂಡಿ, ತಿನಿಸು ಮಾರುವ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು. ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಬೀಸಿದ ಗಾಳಿಯಿಂದ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿತ್ತು.
ತಗಡು ಬಡಿದು ಗಾಯ: ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಭಾರಿ ಗಾಳಿಗೆ ಹಲವು ಮನೆ, ಶೆಡ್‌ಗಳ ತಗಡುಗಳು ಹಾರಿ ಹೋಗಿವೆ. ಗಿಡಮರಗಳು ನೆಲಕ್ಕುರುಳಿವೆ. ಭಾರಿ ಗಾಳಿಗೆ ಹಾರಿ ಬಂದ ಟಿನ್‌ಶಿàಟ್ ಬೈಕ್ ಮೇಲೆ ಹೋಗುತ್ತಿದ್ದ ಸವಾರನಿಗೆ ಬಡಿದು ಗಾಯಗೊಂಡಿದ್ದಾನೆ. ಹಟ್ಟಿಯ ಜತ್ತಿ ಲೈನ್, ಗುಂಡೂರಾವ್ ಕಾಲೋನಿಗಳಲ್ಲಿ ಹಲವು ಮರಗಳು ನೆಲಕ್ಕುರುಳಿವೆ. ಬಸವ ಸೇವಾ ಸಮಿತಿ ಬಳಿಯ ಶೆಡ್‌ವೊಂದು ಬಿದ್ದಿದೆ.
500 ಮೀ. ಹಾರಿದ ತಗಡು: ಹಟ್ಟಿಯ ಪಾಮನ ಕಲ್ಲೂರು ಕ್ರಾಸ್ ಬಳಿಯ ಮನೆಯೊಂದರ ಬಳಿ ಮದುವೆಗೆ ಹಾಕಿದ್ದ ಹಂದರದ ಮೇಲಿನ ಟಿನ್ ಶೀಟ್‌ವೊಂದು ಭಾರಿ ಗಾಳಿಗೆ ಸುಮಾರು 500 ಮೀಟರ್‌ವರೆಗೆ ಹಾರಿಹೋಗಿ ಹೊಲವೊಂದರಲ್ಲಿ ಬಿದ್ದಿದೆ. ಭಾರಿ ಗಾಳಿ ಪರಿಣಾಮ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯಗೊಂಡು ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು.
ದೇವದುರ್ಗ ತಾಲೂಕಿನಲ್ಲೂ ಬಿರುಗಾಳಿ ತನ್ನ ಪ್ರಭಾವ ತೋರಿದೆ. ದೇವದುರ್ಗ ಪಟ್ಟಣದ ಗೌತಮ ಓಣಿ, ಗತ್‌ಸಿಂಗ್ ಓಣಿಯಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಹೊಸ ಬಸ್ ನಿಲ್ದಾಣದಲ್ಲಿ ತಗಡುಗಳು ಹಾರಿ ಹೋಗಿವೆ. ಕಂಬಗಳು ನೆಲಕ್ಕುರುಳಿದಾಗ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.