ಸರಕು ವಾಹನಗಳಲ್ಲಿ ಜನರ ಪ್ರಯಾಣ; ಸಾಮಾಜಿಕ ಅಂತರ ಮಾಯ
Team Udayavani, Jun 14, 2020, 8:03 AM IST
ದೇವದುರ್ಗ: ಕೋವಿಡ್ ಲಾಕ್‌ಡೌನ್ ಸಡಿಲಿಕೆ ಆದ ನಂತರ ಪಟ್ಟಣದಲ್ಲಿ ಬೇಕಾಬಿಟ್ಟಿ ಜನ ಸಂಚರಿಸುತ್ತಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ನಿಯಮ ಪಾಲಿಸುತ್ತಿಲ್ಲ. ಇನ್ನು ಸರಕು ಸಾಗಣೆ ವಾಹನಗಳಲ್ಲಿ ಕುರಿಗಳಂತೆ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸಲಾಗುತ್ತಿದೆ.
ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಸೋಂಕು ತಡೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಶನಿವಾರ ಪಟ್ಟಣದಲ್ಲಿ ನಡೆದ ಸಂತೆಯಲ್ಲಿ ಸಾಮಾಜಿಕ ಅಂತರವೇ ಕಂಡುಬರಲಿಲ್ಲ. ಗುಂಪುಗುಂಪಾಗಿ ಜನ ಸೇರಿ ತರಕಾರಿ ಖರೀದಿಸುತ್ತಿರುವುದು ಕಂಡುಬಂತು. ಇನ್ನು ಬಹುತೇಕರು ಮಾಸ್ಕ್ ಧರಿಸದೇ ಮಾರುಕಟ್ಟೆಗೆ ಆಗಮಿಸಿದ್ದರು. ಇನ್ನು ಗ್ರಾಮೀಣ ಭಾಗದಿಂದ ಸಂತೆಗೆ ಬರುವವರು ಸರಕು ಸಾಗಣೆ, ಟಂಟಂ ರಿಕ್ಷಾ, ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಈ ವಾಹನಗಳಲ್ಲಿ ಕುರಿಗಳಂತೆ ಜನರನ್ನು ಹತ್ತಿಸಿಕೊಂಡು ಬರಲಾಗಿತ್ತು. ಇಲ್ಲೂ ಸಾಮಾಜಿಕ ಅಂತರ ಪಾಲನೆ ಕಂಡುಬರಲಿಲ್ಲ. ಅಂಗಡಿ ಮುಂಗಟ್ಟು, ಖಾಸಗಿ ವಾಹನ ಸೇರಿ ಎಲ್ಲೆಡೆ ಸಾಮಾಜಿಕ ಅಂತರ ಪಾಲನೆ, ಕಡ್ಡಾಯವಾಗಿ ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಪಕ್ಷ ಮುನ್ನಡೆಸಲು ಮತ್ತೊಮ್ಮೆ ಅವಕಾಶ ಸಿಗುವ ವಿಶ್ವಾಸವಿದೆ: ಬಿವೈ ವಿಜಯೇಂದ್ರ
Maha Kumbh 2025: ಒಂದು ಕಾಲದಲ್ಲಿ ರಾಯಚೂರು ಡಿಸಿ.. ಈಗ ಸನ್ಯಾಸಿ!
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.