ರೈತರಿಗೆ ಶೋಷಣೆ ತಪ್ಪಿಸಲು ಕಾರ್ಯ ಯೋಜನೆ
ಲಿಂಬೆ ಬೆಳೆಗಾರರಿಗಾಗಿ 100 ಕೋಟಿ ರೂ. ವಿಶೇಷ ಪ್ಯಾಕೇಜ್‌ಗೆ ಶ್ರಮ
Team Udayavani, Dec 7, 2020, 6:12 PM IST
ವಿಜಯಪುರ: ಮಳೆ ಆಶ್ರಿತ ವಿಜಯಪುರ ಜಿಲ್ಲೆ ರೈತರು ಭೀಕರ ಬರದ ಮಧ್ಯೆಯೂ ಲಿಂಬೆ ಬೆಳೆಯುವ ಸಾಹಸ ಮಾಡುತ್ತಿದ್ದಾರೆ. ಇಲ್ಲಿನ ಮಣ್ಣು, ನೀರು, ಹವಾಗುಣದಿಂದ ದೇಶದಲ್ಲಿಯೇ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಲಿಂಬೆ ಬೆಳೆದರೂ ದಲ್ಲಾಳಿಗಳು, ವ್ಯಾಪಾರಿಗಳ ದುಡ್ಡು ಬಾಕ ಗುಣದಿಂದ ರೈತರು ಶೋಷಣೆಗೆ ಗುರಿ ಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮೊಟ್ಟ ಮೊದಲಬಾರಿಗೆ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ, ಲಿಂಬೆ ಬೆಳೆಗಾರರೇ ಆಗಿರುವ ಅಶೋಕ ಎಸ್. ಅಲ್ಲಾಪುರ ಸ್ಪಷ್ಟ ನುಡಿ ಇದು.
ಸೋಮವಾರ ಅಧಿಕಾರ ಸ್ವೀಕರಿಸಲಿರುವ ಅವರು “ಉದಯವಾಣಿ’ ಪತ್ರಿಕೆ ಜತೆ ಅಭಿವೃದ್ಧಿ-ಕನಸು ಹಂಚಿಕೊಂಡಿದ್ದಾರೆ. ಅಧಿಕ ಇಳುವರಿ ಹಾಗೂ ಅದಾಯ ತರುವ ಹೊಸ ತಳಿಗಳ ಪರಿಚಯ, ವಿಜ್ಞಾನಿಗಳೊಂದಿಗೆ ರೈತರ ನಿರಂತರ ಸಂವಾದ, ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಕಾರ್ಯಕ್ರಮ ರೂಪಿಸುತ್ತೇನೆ.ಎಲ್ಲಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಮಂಡಳಿಗೆ ಇಂಡಿಸ್ವಂತ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ,ಲಿಂಬೆ ಬೆಳೆಗಾರರಿಗಾಗಿ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಪಡೆಯಲು ಶ್ರಮಿಸುತ್ತೇನೆ. ಇದಕ್ಕಾಗಿ ಅಧಿಕಾರ ಸ್ವೀಕರಿಸುತ್ತಲೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿ ಅನುದಾನ ಬಿಡುಗಡೆಗೆ ಒತ್ತಾಯಿಸುತ್ತೇನೆ. ಲಿಂಬೆ ಬೆಳಗಾರರ ಪರಿಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ನನ್ನ ಮೇಲೆ ಲಿಂಬೆ ಕೃಷಿಕರು ಭಾರೀ ನಿರೀಕ್ಷೆ ಇರಿಸಿಕೊಂಡಿದ್ದಾರೆ. ನನಗಿರುವ ಕಡಿಮೆ ಅವ ಧಿಯಲ್ಲಿ ನನ್ನ ಶಕ್ತಿ ಮೀರಿ ರಾಜ್ಯದ ಅದರಲ್ಲೂ ಉತ್ಕೃಷ್ಟ ಲಿ ಬೆ ಬೆಳೆಯುವ ಇಂಡಿ, ಸಿಂದಗಿ ಸೇರಿ ವಿಜಯಪುರ ಜಿಲ್ಲೆಯ ಲಿಂಬೆಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ನಾನು ಎಬಿವಿಪಿ ಹಾಗೂ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ಕಳೆದ ಮೂರು ದಶಕಗಳಿಂದ ಸೇವೆ ಮಾಡಿದ್ದೇನೆ. ಪಕ್ಷ ಗುರುತಿಸಿ, ಅವಕಾಶ ನೀಡಿದೆ. ಸದ್ಯದ ರಾಜಕೀಯ ಹಾಗೂ ಹಣದ ಮೇಲೆ ನಿಂತಿರುವ ಸಂದರ್ಭದಲ್ಲಿ ನನ್ನಂಥವರು ಸ್ಪ ರ್ಧಿಸಿಗೆಲ್ಲುವುದು ಅಸಾಧ್ಯ. ಹೀಗಾಗಿ ಇಂಥ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದಲ್ಲಿ ಮನ್ನಣೆ ಇದೆ ಎಂಬುದು ನನ್ನ ನೇಮಕದಿಂದ ಮತ್ತೂಮ್ಮೆ ಸಾಬೀತಾಗಿದೆ.
ಅಧ್ಯಕ್ಷರಾದವರರನ್ನು ಮೆರವಣಿಗೆ ಮಾಡಿ, ಹಾರ-ತುರಾಯಿ ಹಾಕಿ ಸನ್ಮಾನಿಸುವುದು ಸಹಜ. ನನ್ನೊಂದಿಗಿದ್ದೂ ಅಧಿಕಾರದ ಸಣ್ಣ ಅವಕಾಶ ಪಡೆಯದ ಕಾರ್ಯಕರ್ತರಿಗೆ ಈ ಕೀರ್ತಿ ಸಲ್ಲಬೇಕು. ಹೀಗಾಗಿ ನನ್ನೊಂದಿಗಿದ್ದ ಹಿರಿಯ 50 ಕಾರ್ಯಕರ್ತರ ಮನೆಗೆ ತೆರಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಅವರ ಆಶೀರ್ವಾದ ಪಡೆದಿದ್ದೇನೆ. ಮಂಡಳಿಯಲ್ಲಿ ಸದ್ಯ 3 ಕೋಟಿ ರೂ. ಮಾತ್ರ ಅನುದಾನವಿದ್ದು, ಈ ಹಣಕ್ಕೆ ಈಗಾಗಲೇ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲಿಂಬೆ ಅಭಿವೃದ್ಧಿ ಹಾಗೂ ಮಂಡಳಿ ಬಲ ವರ್ಧನೆಗೆ ಪಕ್ಷಾತೀತವಾಗಿ ಎಲ್ಲ ಶಾಸಕರು, ರಾಜಕೀಯ ಪಕ್ಷಗಳ ಪ್ರಮುಖರನ್ನು ಭೇಟಿ ಮಾಡಿ ಸಲಹೆ, ಸೂಚನೆ ಪಡೆಯುತ್ತಿದ್ದೇನೆ. ಕೆಲವು ಶಾಸಕರನ್ನು ಸಂಪರ್ಕಿಸಿದ್ದು, ಉಳಿದವರನ್ನು ಶೀಘ್ರ ಭೇಟಿ ಮಾಡುತ್ತೇನೆ ಎಂದರು ಅಶೋಕ ಅಲ್ಲಾಪುರ.
ಭೀಕರ ಬರಗಾಲ ಪರಿಣಾಮ ಈಚೆಗೆ ಲಿಂಬೆ ಸಸಿಗಳು ಹಾಳಾಗಿ ರೈತರು ಆರ್ಥಿಕ ಸಂಷ್ಟಕ್ಕೆ ಸಿಲಕುತ್ತಿದ್ದಾರೆ. ಹೀಗಾಗಿ ಲಿಂಬೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರದ ಆತ್ಮನಿರ್ಭ ಭಾರತ ಯೋಜನೆ ಹಾಗೂ ಒಂದು ಜಿಲ್ಲೆ; ಒಂದು ಬೆಳೆ ಯೋಜನೆಯಲ್ಲಿ ಆಯ್ಕೆಯಾಗಿರುವ ಲಿಂಬೆ ಬೆಳೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಬರುವಂತೆ ಮೌಲ್ಯವರ್ಧನೆಗೆ ಯೋಜಿಸಲಾಗುತ್ತದೆ. ಇಂಡಿ-ಸಿಂದಗಿ ಭಾಗದಲ್ಲಿ ಶೈತ್ಯಾಗಾರ ಸ್ಥಾಪನೆಗೆ ಮುಂದಾಗುತ್ತೇನೆ. – ಅಶೋಕ ಅಲ್ಲಾಪುರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ
–ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.