ಟ್ರಾಫಿಕ್‌ಗೆ “ಸಿಂಧನೂರು ಬೈಪಾಸ್’ ಪರಿಹಾರ
ರಸ್ತೆ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಉತ್ಸುಕ,ಭೂ ಸ್ವಾಧೀನಕ್ಕೆ 70 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ
Team Udayavani, Dec 18, 2020, 6:00 PM IST
ಸಿಂಧನೂರು: ನಗರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಹೆಚ್ಚುತ್ತಿರುವ ಟ್ರಾಪಿಕ್ ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಾಣವೇ ಪರಿಹಾರವೆಂಬ ನಿಲುವಿಗೆ ಬಲ ಬಂದಿದ್ದು, ಸರಕಾರದ ಮಟ್ಟದಲ್ಲಿ ಈ ಬೇಡಿಕೆಗೆ ಮನ್ನಣೆ ದೊರಕಿದೆ.
ನಗರದ ಎಲ್ಲ ಮಾರ್ಗದಲ್ಲಿ ಮುಖ್ಯರಸ್ತೆ ದಾಟಲು ಅಲ್ಲಲ್ಲಿ ತಡೆಬೀಳುತ್ತಿರುವುದಕ್ಕೆ ಬೈಪಾಸ್ ನಿರ್ಮಾಣವೇ ಪರಿಹಾರವೆಂಬ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಗಂಗಾವತಿ-ರಾಯಚೂರು, ಸಿಂಧನೂರು-ಕುಷ್ಟಗಿ ಮಾರ್ಗದ ಪ್ರಮುಖ ಹೆದ್ದಾರಿಗಳು ನಗರದ ಹೃದಯಭಾಗದಿಂದಲೇ ಹಾದುಹೋಗಿವೆ. ರಸ್ತೆ ವಿಸ್ತರಣೆಯಾಗಿದ್ದರೂ ವಾಹನಗಳ ದಟ್ಟಣೆ ಹೆಚ್ಚಿದೆ. ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆಯಾಗಿದ್ದರೂ ಮಹಾತ್ಮಗಾಂಧಿ ವೃತ್ತವನ್ನು ದಾಟುವಷ್ಟರಲ್ಲೇ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಪ್ರತಿಭಟನೆ, ಧರಣಿ ವೇಳೆ ಸಂಚಾರತಡೆಗೂ ಮುಂದಾಗುವುದರಿಂದ ಮಹಾತ್ಮಗಾಂಧಿ ವೃತ್ತದಲ್ಲಿ ಸುಗಮಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬೈಪಾಸ್‌ನಿರ್ಮಾಣವಾದರೆ ದೂರದ ಊರಿನ ಪ್ರಯಾಣಿಕರ ಹಾದಿ ಸುಗಮವಾಗಲಿದೆ.
ಹೆದ್ದಾರಿ ಪ್ರಾಧಿಕಾರ ಉತ್ಸುಕ:
ಜೇವರ್ಗಿ-ಚಾಮರಾಜನಗರ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಧನೂರು ನಗರ ಹೊರಭಾಗದಲ್ಲಿ 12.5 ಕಿ.ಮೀ. ಉದ್ದದ ಬೈಪಾಸ್ ರಸ್ತ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ವಿಸ್ತೃತ ವರದಿ ಸಲ್ಲಿಸಿದೆ. ಈ ಮಾರ್ಗದ ಕುರಿತು ಪೀಡ್‌ಬ್ಯಾಂಕ್ ಕಂಪನಿ ವಾಹನಗಳ ದಟ್ಟಣೆ ಅವಲೋಕಿಸಿ ವರದಿ ನೀಡಿದೆ. ಗಂಗಾವತಿ ಮಾರ್ಗದ ಕೈಗಾರಿಕಾ ಪ್ರದೇಶದಿಂದ ಮಸ್ಕಿ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಬೈಪಾಸ್‌ಗೆ ಅವಕಾಶವಿದೆ ಎನ್ನುವುದನ್ನು ತಿಳಿಸಲಾಗಿದೆ. ವೇಗಧೂತ ಬಸ್‌ಗಳು, ಖಾಸಗಿ ವಾಹನಗಳು ಈ ಮಾರ್ಗದಲ್ಲಿಸಾಗಿದರೆ, ನಗರ ಪ್ರವೇಶಿಸಬೇಕಾಗದ ಅನಿವಾರ್ಯತೆ ತಪ್ಪಲಿದೆ. ಅಗತ್ಯ ಜಮೀನನ್ನು ಸ್ವಾಧೀನಪಡಿಸಿಕೊಂಡು ಒಪ್ಪಿಸಿದರೆ, ತ್ವರಿತವಾಗಿ ಬೈಪಾಸ್ ನಿರ್ಮಿಸಿಕೊಡುವುದಕ್ಕೆ ಹೆದ್ದಾರಿ ಪ್ರಾಧಿಕಾರ ಸಜ್ಜಾಗಿದೆ.
ಸರಕಾರಕ್ಕೆ ಸಲ್ಲಿಕೆ: ಬೈಪಾಸ್ ಅಗತ್ಯತೆ ಉಲ್ಲೇಖೀಸಿ ಸಂಸದ ಸಂಗಣ್ಣ ಕರಡಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಅವರುಕೂಡ ಸಾಥ್ ನೀಡಿದ್ದಾರೆ. 12.5 ಕಿ.ಮೀ. ಮಾರ್ಗದಲ್ಲಿ ಅಗತ್ಯ ಬೀಳುವ ಜಮೀನನ್ನು ಸ್ವಾಧಿಧೀನಪಡಿಸಿಕೊಳ್ಳುವುದಕ್ಕಾಗಿ 70 ಕೋಟಿ ರೂ. ಅಗತ್ಯವೆಂದು ಅನುದಾನ ಕೋರಿ ರಾಜ್ಯ ಸರಕಾರಕ್ಕೆ ಬೇಡಿಕೆ ಇಡಲಾಗಿದೆ.
ಬೈಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ಭೂಸ್ವಾಧೀನಕ್ಕಾಗಿ ಹಣ ನೀಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ರಾಜ್ಯ ಸರಕಾರದಿಂದ ಅನುದಾನ ದೊರಕಿದ ತಕ್ಷಣವೇ ಈ ಕೆಲಸ ಆರಂಭಗೊಳ್ಳಲಿದೆ. – ಸಂಗಣ್ಣ ಕರಡಿ, ಸಂಸದ
–ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
PM MODI: ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನಕ್ಕೆ ಕಾಂಗ್ರೆಸ್ ಸಂಚು
Marriage: ಕರ್ನಾಟಕದ ಭಕ್ತೆಯೊಂದಿಗೆ ತಮಿಳ್ನಾಡು ಮಠಾಧೀಶರ ವಿವಾಹ; ಭಕ್ತರಿಂದ ಆಕ್ಷೇಪ
ED Raids: ಹಣಕಾಸು ಅಕ್ರಮ ಕೇಸ್: ಲಾಟರಿ ಕಿಂಗ್ ಮಾರ್ಟಿನ್ ಕಚೇರಿಗಳ ಮೇಲೆ ಇ.ಡಿ. ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.