ಶಾಸಕರ ಕುಮ್ಮಕ್ಕಿನಿಂದ ಪೊಲೀಸರ ದೌರ್ಜನ್ಯ
Team Udayavani, Sep 22, 2017, 3:08 PM IST
ಮಸ್ಕಿ: ಶಾಸಕ ಪ್ರತಾಪಗೌಡ ಪಾಟೀಲ ಪೊಲೀಸರಿಗೆ ಕುಮ್ಮಕ್ಕು ನೀಡಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಲಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಗುರುವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ಶಂಕ್ರಪ್ಪ, ಪೊಲೀಸರಿಗೆ ಕುಮ್ಮಕ್ಕು ನೀಡಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿಸಿದ ಶಾಸಕ ಪ್ರತಾಪಗೌಡ ಪಾಟೀಲರ ನಿಜವಾದ ಬಣ್ಣ ಬಯಲಾಗಿದೆ. ಅವರು ಬಿಜೆಪಿ ಕಾರ್ಯಕರ್ತ ಶರಣಬಸವ ನಾಯಕ ಹಂಚಿನಾಳ ಮೇಲೆ ಪೊಲೀಸ್ ಅಧಿಕಾರಿಗಳು ಶಾಸಕರ ಕುಮ್ಮಕ್ಕಿ ನಿಂದಾಗಿ ದೌರ್ಜನ್ಯ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಬರೀ ಇದೊಂದೇ ಪ್ರಕರಣವಲ್ಲ.
ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಬಿಜೆಪಿಯ 50ರಿಂದ 60 ಕಾರ್ಯಕರ್ತರನ್ನು ಪೊಲೀಸರ ಬೆದರಿಕೆ ಮೂಲಕ ಹತ್ತಿಕ್ಕುವ ತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಕೃತ್ಯಗಳಿಂದ ಬಿಜೆಪಪಿ ಕಾರ್ಯಕರ್ತರು ಅಧೀರರಾಗಬೇಕಿಲ್ಲ. ಬಿಜೆಪಪಿ ಮುಖಂಡರು ಕಾರ್ಯಕರ್ತರ ಬೆನ್ನಿಗಿದ್ದಾರೆ ಎಂದರು.
ಶಾಸಕರು 30 ವರ್ಷಗಳ ಹಿಂದೆ ಯಾವ ಸ್ಥಿತಿಯಲ್ಲಿದ್ದರು, ಈಗ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ತಿಳಿದಿದೆ. ಶಾಸಕರಿಗೆ ಹಣದ ಮದ ನೆತ್ತಿಗೇರಿದೆ. ಹಣದಿಂದ ಏನನ್ನಾದರೂ ಸಾಧಿಸಬಹುದೆಂದು ಅವರು ತಿಳಿದಂತಿದೆ. ಮುಂದಿನ ದಿನಗಳಲ್ಲಿ ಅದು ಸುಳ್ಳಾಗಲಿದೆ. ಬಿಜೆಪಿಯಿಂದಲೇ ಪ್ರತಾಪಗೌಡರು ಅಧಿಕಾರ ಅನುಭವಿಸಿದ್ದರು. ಇದೀಗ ಬಿಜೆಪಿ ಪಕ್ಷದಿಂದಲೇ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದರು. ರಾಜ್ಯಾದ್ಯಂತ ಇಂತಹ ಪ್ರಕರಣಗಳು ನಡೆಯುತ್ತಿವೆ. ಆದರೆ ಇದು ಬಹಳ ದಿನ ನಡೆಯುವುದಿಲ್ಲ. ಶಾಸಕರ ಅವಧಿ ಇನ್ನೂ 6 ತಿಂಗಳು ಮಾತ್ರ ಇದೆ. ಆದ್ದರಿಂದ ಶಾಸಕರು ಸರಿಯಾದ ದಿಕ್ಕಿನಲ್ಲಿ ನಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಶಾಸಕರ ಪಾಪದ ಕೊಡ ತುಂಬಿದೆ. ಜನರು ನಿಮಗೆ ಮತ ನೀಡುತ್ತಾರೆ. ಪೊಲೀಸರಲ್ಲ. ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತನ ಮೇಲೆ ದೌರ್ಜನ್ಯ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದಕ್ಕೆ ಕಾರಣರಾದ ಸಿಂಧನೂರು ಸಿಪಿಐ ಶ್ರೀಧರ ಮಾಳಗಿ ಅವರನ್ನು ಸರಕಾರ ಅಮಾನತು ಮಾಡಬೇಕು ಹಾಗೂ ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಮಸ್ಕಿ ಕ್ಷೇತ್ರದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಠೊಡ ಮಾತನಾಡಿ, ಶಾಸಕ ಪ್ರತಾಪಗೌಡ ಪಾಟೀಲರ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾಮಗಾರಿಗಳು ಯಾವ ರೀತಿಯಲ್ಲಿ ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಟ್ಟೂರು ಕುಡಿಯುವ ನೀರಿನ ಕೆರೆ ಕಾಮಗಾರಿ ಕಳಪೆಯಾಗಿದ್ದು, ಇದರಲ್ಲಿ ಅವ್ಯವಹಾರವಾಗಿದೆ. ಬೋಗಸ್ ಬಿಲ್‌ಗಳನ್ನು ಎತ್ತಲಾಗಿದೆ ಎಂದು ದೂರಿದರು. ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರಬೇಕಿಲ್ಲ. ಕ್ಷೇತ್ರದಲ್ಲಿ ಎಲ್ಲಯೇ ಕಾಮಗಾರಿಗಳು ಕಳಪೆಯಾಗಿರಲಿ, ಅವುಗಳನ್ನು ನಮ್ಮ ವ್ಯಾಟ್ಸಾಪ್ ಗ್ರೂಪಿಗೆ ಹಾಕಿ. ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರತಿಭಟಿಸೋಣ ಎಂದರು.
ಬಿಜೆಪಿ ಮುಖಂಡರಾದ ಮಹಾದೇವಪ್ಪಗೌಡ, ಬಸನಗೌಡ ತುರ್ವಿಹಾಳ, ಮಸ್ಕಿ ನಗರ ಘಟಕ ಅಧ್ಯಕ್ಷ ಅಪ್ಪಾಜಿಗೌಡ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಹಲ್ಲೆಗೊಳಗಾದ ಸಂತ್ರಸ್ತ ಬಿಜೆಪಿ ಕಾರ್ಯಕರ್ತ ಶರಣಬಸವ ನಾಯಕ ಮಾತನಾಡಿದರು. ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅಮೀನಗಡ, ರಾಜಶೇಖರ ಪಾಟೀಲ ಸಿಂಧನೂರು, ಶೇಖರಪ್ಪ ತಳವಾರ, ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಹತ್ತಿಗುಡ್ಡ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ ಹಾಗೂ ಬಂಡೇಶ ವಲ್ಕಂದಿನ್ನಿ, ಪ್ರಾಣೇಶ ದೇಶಪಾಂಡೆ, ಶರಣಯ್ಯ ಗುಡದೂರು, ಶಿವಪುತ್ರಪ್ಪ ಹರಳಳ್ಳಿ, ಶರಣಪ್ಪ ವಕೀಲ, ಮಲ್ಲಪ್ಪ ಅಂಕುಶದೊಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.